ಬೆಂಗಳೂರು : ಶಾಲಾ ಶಿಕ್ಷಣ ಇಲಾಖೆಯು ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಬಗ್ಗೆ ಶಿಕ್ಷಕರ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ಆಕ್ಷೇಪಣೆ ಕೋರಿ ಇಲಾಖಾ ವೆಬ್‌ಸೈಟ್ https://schooleducation.karnataka.gov.in/86/teachers/kn ನ ಶಿಕ್ಷಕರ ಸೇವಾ ವಿವರಗಳಲ್ಲಿ ಕ್ರಮ ಸಂಖ್ಯೆ 04ರಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗಿರುತ್ತದೆ.
ಈ ಕರಡು ತಾತ್ಕಾಲಿಕ ಜೇಷ್ಟತಾ ಪಟ್ಟಿಗೆ ಆಕ್ಷೇಪಣೆಗಳು ಏನಾದರೂ ಇದ್ದಲ್ಲಿ ಸಂಬಂಧಿಸಿದ ಶಿಕ್ಷಕರು ಸಮರ್ಥನೀಯ ಪೂರಕ ದಾಖಲೆಗಳೊಂದಿಗೆ ನಿಗದಿತ ನಮೂನೆಯಲ್ಲಿ ಮೇ 08 ರೊಳಗಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ನೇರವಾಗಿ ಸಲ್ಲಿಸಲು ಸೂಚಿಸಿದೆ.
KUWJಯಿಂದ ‘ರಾಜಲಕ್ಷ್ಮಿ ಕೋಡಿಬೆಟ್ಟು’ಗೆ ‘ಮಂಗಳ ವರ್ಗೀಸ್ ಪ್ರಶಸ್ತಿ’ ಪ್ರದಾನ
BREAKING : ಬೆಂಗಳೂರಲ್ಲಿ ಮತ್ತೊಂದು ಸೂಸೈಡ್ : ಸಾಲ ತೀರಿಸಲಾಗದೆ ಕಾರು ಚಾಲಕ ಆತ್ಮಹತ್ಯೆ!