ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಎನ್ನುವಂತೆ ವಿಮಾ ಮೌಲ್ಯಮಾಪನ ವರದಿ ಆಧಾರದ ಮೇಲೆ ಜೀವ ವಿಮಾ ಪಾಲಿಸಿಗಳ ಸ್ಥಿರಪಡಿಸಿದ ಮೊತ್ತದ ಮೇಲೆ ಬೋನಸ್ ನೀಡಲು ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ.
ಈ ಕುರಿತಂತೆ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನೇತ್ರಪ್ರಭಾ ಎಂ ಧಾಯಪುಲೆ ಅವರು ನಡಾವಳಿಗಳನ್ನು ಹೊರಡಿಸಿದ್ದು, ಅದರಲ್ಲಿ ನಿರ್ದೇಶಕರು, ಕರ್ನಾಟಕ ಸರ್ಕಾರಿ ವಿಮಾ ಇಲಾಖೆ, ಇವರು ಮೇಲೆ ಓದಲಾದ ಪತ್ರದಲ್ಲಿ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ ನಿರ್ವಹಿಸಲಾಗುತ್ತಿರುವ ಕಡ್ಡಾಯ ಜೀವ ವಿಮಾ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ ನಿಯಮಗಳು, 1958ರ ನಿಯಮ-22ರನ್ವಯ ವಿಮಾ ಮೌಲ್ಯಮಾಪನವನ್ನು ದೈವಾರ್ಷಿಕವಾಗಿ ಮಾಡಿಸಬೇಕಾಗಿದ್ದು, ಅದರನ್ವಯ 2018-2020ನೇ ದೈವಾರ್ಷಿಕ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ವಿಮಾ ಪಾಲಿಸಿಗಳ ಮೌಲ್ಯಮಾಪನವನ್ನು ನಡೆಸಿ, ಅಧಿಲಾಭಾಂಶವನ್ನು ಘೋಷಿಸಲು ಅನುವಾಗುವಂತೆ ಮೌಲ್ಯಮಾಪನ ಕಾರ್ಯ ಕೈಗೊಳ್ಳಲು ವಿಮಾ ಗಣಕಕಾರರನ್ನು ನೇಮಿಸಲಾಗಿತ್ತೆಂದು ಮತ್ತು ವಿಮಾ ಗಣಕಕಾರರು 2018-2020ನೇ ಅವಧಿಗೆ ಸಂಬಂಧಿಸಿದಂತೆ ಮೌಲ್ಯಮಾಪನ ಕಾರ್ಯವನ್ನು ಪೂರ್ಣಗೊಳಿಸಿ ಮೌಲ್ಯಮಾಪನ ವರದಿಯನ್ನು ಸಲ್ಲಿಸಿದ್ದಾರೆಂದು ವರದಿ ಮಾಡಿದ್ದಾರೆ. ಸದರಿ ಮೌಲ್ಯಮಾಪನ ವರದಿಯ ಪ್ರಮುಖ ಅಂಶಗಳು ಕೆಳಕಂಡಂತಿವೆ:-
1.ಚಾಲ್ತಿಯಲ್ಲಿದ್ದ ಪಾಲಿಸಿಗಳ ಸಂಖ್ಯೆ : 12,97,054
2.ವಿಮಾ ಮೊಬಲಗು : ರೂ. 32,271.80 ಕೋಟಿಗಳು
3. ಪ್ರತ್ಯಾವರ್ತಿ ಅಧಿಲಾಭಾಂಶ : ರೂ. 11,956.56 ಕೋಟಿಗಳು
4. ವಾರ್ಷಿಕ ವಿಮಾ ಕಂತು ಆದಾಯ : ರೂ. 1631.58 ಕೋಟಿಗಳು
5. ಜೀವ ವಿಮಾ ನಿಧಿಯ ಶಿಲ್ಕು ರೂ. 15,164.43 ಕೋಟಿಗಳು
6. ವಿಮಾ ಮೊತ್ತದ : ರೂ. 5,163.48 ಕೋಟಿಗಳು
7. ಪಾಲಿಸಿಗಳವಿಮಾ ಮೇಲಿನ ಹೊಣೆಗಾರಿಕೆ ಮೌಲ್ಯಮಾಪನದ ಹೆಚ್ಚುವರಿ (Surplus) ರೂ. 1,769.28 ಕೋಟಿಗಳು
ವಿಮಾ ಗಣಕರು ತಮ್ಮ ವರದಿಯಲ್ಲಿ ದಿನಾಂಕ:31/03/2020 ರಂದು ಚಾಲ್ತಿಯಲ್ಲಿರುವ ಎಲ್ಲಾ ಪಾಲಿಸಿಗಳಿಗೆ ಪ್ರತಿ ಸಾವಿರ ವಿಮಾ ಮೊತ್ತಕ್ಕೆ ಪ್ರತಿ ವರ್ಷಕ್ಕೆ ರೂ.80/- ರಂತೆ ಪ್ರತ್ಯಾವರ್ತಿ ಲಾಭಾಂಶವನ್ನು ಘೋಷಿಸಲು ಹಾಗೂ ಈ ಉದ್ದೇಶಕ್ಕಾಗಿ ಮೌಲ್ಯಮಾಪನದ ಅನುಸಾರ ಒಟ್ಟಾರೆಯಾಗಿ ಹೆಚ್ಚಳವಾಗಿರುವ ರೂ.1769.28 ಕೋಟಿಗಳಲ್ಲಿ ರೂ.1711.89 ಕೋಟಿಗಳನ್ನು ಸರಳ ಪ್ರತ್ಯಾವರ್ತಿ ಲಾಭಾಂಶವಾಗಿ ವಿತರಣೆ ಮಾಡಲು ಹಾಗೂ ಉಳಿದ ರೂ.57.39 ಕೋಟಿ ಮೊತ್ತವನ್ನು ಅವರ್ಗೀಕೃತವಾಗಿ ಮುಂದುವರಿಸಲ್ಪಟ್ಟ ಮೊಬಲಗು ಎಂದು ಪರಿಗಣಿಸಿ ಮುಂದಿನ ಮೌಲ್ಯಮಾಪನ ಅವಧಿಗೆ ಕೊಂಡೊಯ್ಯಲು ವಿಮಾ ಗಣಕರು ಶಿಫಾರಸ್ಸು ಮಾಡಿರುತ್ತಾರೆ.
ನಿರ್ದೇಶಕರು, ಕರ್ನಾಟಕ ಸರ್ಕಾರಿ ವಿಮಾ ಇಲಾಖೆ, ಇವರು ವಿಮಾ ಗಣಕರು ಮೌಲ್ಯಮಾಪನ ವರದಿಯಲ್ಲಿ ಮಾಡಿರುವ ಶಿಫಾರಸ್ಸುಗಳನ್ನು ಪರಿಗಣಿಸಿ, ದಿನಾಂಕ:31/03/2020 ರಂದು ಚಾಲ್ತಿಯಲ್ಲಿದ್ದ ಪಾಲಿಸಿಗಳ ಮೇಲೆ ವಿಮಾ ಮೊತ್ತದ ಪ್ರತಿ ರೂ.1000/-ಗಳಿಗೆ ವಾರ್ಷಿಕವಾಗಿ ರೂ.80/-ರ ದರದಲ್ಲಿ ಬೋನಸ್ ನೀಡುವುದರ ಜೊತೆಗೆ ದಿನಾಂಕ:01/04/2020 ರಿಂದ 31/03/2022ರ ಅವಧಿಯಲ್ಲಿ ಅವಧಿಪೂರ್ಣ, ಮರಣಜನ್ಯ ಹಾಗೂ ಎಲ್ಲಾ ವಿಮಾ ತ್ಯಾಗ ಮೌಲ್ಯಗಳಿಂದ ಹೊರಹೋಗಿರುವ ಪಾಲಿಸಿಗಳಿಗೆ ಮುಂದಿನ ಮೌಲ್ಯಮಾಪನ ಅವಧಿಯವರೆಗೆ ಪ್ರತಿ ರೂ.1000/-ಗಳಿಗೆ ವಾರ್ಷಿಕವಾಗಿ ರೂ.80/-ಗಳ ಮಧ್ಯಂತರ ಅಧಿಲಾಭಾಂಶವನ್ನು ನೀಡಲು ಈ ಕೆಳಕಂಡ ನಿರ್ದಿಷ್ಟ ಪ್ರಸ್ತಾವನೆಗಳಿಗೆ ಸರ್ಕಾರದ ಅನುಮೋದನೆಯನ್ನು ಕೋರಿರುತ್ತಾರೆ:-
(i) ದಿನಾಂಕ: 01/04/2018 ರಿಂದ 31/03/2020 ರ ದೈವಾರ್ಷಿಕ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ಪಾಲಿಸಿಗಳಿಗೆ ವಿಮಾ ಮೊತ್ತದ ಮೇಲೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ ರೂ.80/-ರಂತೆ ಲಾಭಾಂಶ(Bonus) ಘೋಷಿಸುವುದು.
(ii) ಅವಧಿ ಪೂರ್ಣ, ಮರಣಜನ್ಯ ಹಾಗೂ ವಿಮಾ ತ್ಯಾಗ ಮೌಲ್ಯಗಳಿಂದ ದಿನಾಂಕ:01/04/2020 ರಿಂದ 31/03/2022 ರ ಅವಧಿಯಲ್ಲಿ ಹೊರ ಹೋಗಿರುವ ವಿಮಾ ಪಾಲಿಸಿಗಳಿಗೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ ರೂ.80/-ರಂತೆ ಮಧ್ಯಂತರ ಲಾಭಾಂಶವನ್ನು (Interim Bonus) ಘೋಷಿಸುವುದು.
ಸರ್ಕಾರವು ಈ ಪ್ರಸ್ತಾವನೆಯನ್ನು ವಿವರವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯು ನಿರ್ವಹಿಸುತ್ತಿರುವ ಕಡ್ಡಾಯ ಜೀವ ವಿಮಾ ಯೋಜನೆಗೆ ಸಂಬಂಧಿಸಿದಂತೆ, 2018-2020 ರ ದೈವಾರ್ಷಿಕ ಅವಧಿಗೆ ವಿಮಾ ಮೌಲ್ಯಮಾಪನ ವರದಿಯನ್ನು ಆಧರಿಸಿ ಈ ಕೆಳಕಂಡಂತೆ ಬೋನಸ್ ನೀಡಲು ಸರ್ಕಾರದ ಮಂಜೂರಾತಿಯನ್ನು ನೀಡಿದೆ.
ದಿನಾಂಕ: 01/04/2018 ರಿಂದ 31/03/2020 ರ ದೈವಾರ್ಷಿಕ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ಪಾಲಿಸಿಗಳಿಗೆ ವಿಮಾ ಮೊತ್ತದ ಮೇಲೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ ರೂ.80/-ರಂತೆ ಲಾಭಾಂಶ(Bonus) ನೀಡುವುದು ಅಂತ ತಿಳಿಸಿದ್ದಾರೆ.
BREAKING: ರಾಜ್ಯಾಧ್ಯಂತ 24 ಗಂಟೆಯಲ್ಲಿ ‘381 ಮಂದಿ’ಗೆ ‘ಡೆಂಗ್ಯೂ ಪಾಸಿಟಿವ್’ | Dengue Case