Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಯೋತ್ಪಾದನೆ ಮಾನವೀಯತೆಯ ಶತ್ರು, ಅದಕ್ಕೆ ಯಾವುದೇ ಆಶ್ರಯವನ್ನು ನಿರಾಕರಿಸಲು ಒಂದಾಗಬೇಕು: ಪ್ರಧಾನಿ ಮೋದಿ

05/07/2025 6:57 AM

ಟೆಕ್ಸಾಸ್ ಪ್ರವಾಹ: 13 ಸಾವು, 20ಕ್ಕೂ ಹೆಚ್ಚು ಬಾಲಕಿಯರು ನಾಪತ್ತೆ | Texas Floods

05/07/2025 6:49 AM

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹಾಲಿವುಡ್ ನಟ ಜೂಲಿಯನ್ ಮೆಕ್ ಮಹೋನ್ ನಿಧನ

05/07/2025 6:42 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಕೃಷಿಕರಿಗೆ ಭರ್ಜರಿ ಗುಡ್ ನ್ಯೂಸ್: ಮಾರ್ಚ್ 31ರೊಳಗೆ ಅಸಲು ಪಾವತಿಸಿದರೆ ಬಡ್ಡಿಮನ್ನಾ!
KARNATAKA

ರಾಜ್ಯದ ಕೃಷಿಕರಿಗೆ ಭರ್ಜರಿ ಗುಡ್ ನ್ಯೂಸ್: ಮಾರ್ಚ್ 31ರೊಳಗೆ ಅಸಲು ಪಾವತಿಸಿದರೆ ಬಡ್ಡಿಮನ್ನಾ!

By kannadanewsnow0715/03/2024 8:32 AM
vidhana soudha
vidhana soudha

ಬೆಂಗಳೂರು : ರಾಜ್ಯದ ಸಹಕಾರ ಬ್ಯಾಂಕುಗಳಿಂದ ಸಾಲ ಪಡೆದು 2023ರ ಡಿ. 31ರವರೆಗೆ ಸುಸ್ತಿಯಾಗಿರುವ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಮತ್ತು ಕೃಷಿ ಆಧಾರಿತ ಸಾಲಗಳ ಕಂತುಗಳ ಅಸಲು ಪಾವತಿಸಿದರೆ, ಆ ಮೊತ್ತಕ್ಕೆ ಬಾಕಿ ಇರುವ ಬಡ್ಡಿ ಮನ್ನಾ ಮಾಡುವ ಅವಧಿಯನ್ನು ಮಾರ್ಚ್ 31ವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮೇಲೆ ಓದಲಾದ ಕ್ರಸಂ. (1) ರ ಸರ್ಕಾರದ ಆದೇಶದಲ್ಲಿ ರೈತರು ರಾಜ್ಯದ ಸಹಕಾರ ಸಂಘಗಳು ಅಂದರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಗ್ಸ್ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದು ದಿನಾಂಕ:31.12.2023 ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಕಂತುಗಳ ಅಸಲನ್ನು ದಿನಾಂಕ:29-02-2024 ರೊಳಗೆ ಸಂಬಂಧಪಟ್ಟ ಪತ್ತಿನ ಸಹಕಾರ ಸಂಘ/ಬ್ಯಾಂಕುಗಳಿಗೆ ಪೂರ್ತಿಯಾಗಿ ಮರುಪಾವತಿಸಿದಲ್ಲಿ ಈ ಮೊತ್ತಕ್ಕೆ ಬಾಕಿಯಿರುವ ಬಡ್ಡಿಯನ್ನು ಮನ್ನಾ ಮಾಡಲು ಮತ್ತು ಈ ರೀತಿ ಮನ್ನಾ ಮಾಡಿದ ಬಡ್ಡಿ ಮೊಬಲಗನ್ನು ಸಹಕಾರ ಸಂಘಗಳಿಗೆ ಸರ್ಕಾರವು ಭರ್ತಿ ಮಾಡಲು ಕೆಲವು ಷರತ್ತಿಗೊಳಪಟ್ಟು ಮಂಜೂರಾತಿ ನೀಡಿ ಆದೇಶಿಸಲಾಗಿದೆ.

ಮೇಲೆ ಓದಲಾದ ಕ್ರ.ಸಂ. (2) ರ ಸಹಕಾರ ಸಂಘಗಳ ನಿಬಂಧಕರ ಪ್ರಸ್ತಾವನೆಯಲ್ಲಿ ಸದರಿ ಯೋಜನೆಯಲ್ಲಿ ಸಹಕಾರ ಸಂಘಗಳು ಸಲ್ಲಿಸಿದ ಮಾಹಿತಿಯನ್ವಯ ದಿನಾಂಕ:29-02-2024 ರವರೆಗೆ 29,456 ರೈತರು ರೂ.281.88 ಕೋಟಿಗಳ ಸುಸ್ತಿ ಸಾಲವನ್ನು ಮರುಪಾವತಿಸಿದ್ದು ಇದರ ಮೇಲೆ ಸರ್ಕಾರದ ಬಡ್ಡಿ ರೂ.214.55 ಕೋಟಿಗಳಾಗಿರುತ್ತದೆ.

ಮುಂದುವರೆದು, ಬರಗಾಲ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರೈತರ ಅನುಕೂಲಕ್ಕಾಗಿ ಸುಸ್ತಿ ಸಾಲಗಳ ಬಡ್ಡಿ ಮನ್ನಾ ಯೋಜನೆಯಡಿ ಸುಸ್ತಿ ಸಾಲಗಳ ಮರುಪಾವತಿ ಅವಧಿಯನ್ನು ದಿನಾಂಕ: 31-03-2024 ರವರೆಗೆ ವಿಸ್ತರಿಸುವಂತೆ ನಿಬಂಧಕರು ಕೋರಿರುತ್ತಾರೆ. ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಕಳಕಂಡಂತೆ ಆದೇಶಿಸಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರದ ಆದೇಶ ಸಂಖ್ಯೆ:ಸಿಒ 291 ಸಿಎಲ್ಎಸ್ 2023, ದಿನಾಂಕ:20-01-2024 ರ ಆದೇಶದಲ್ಲಿ ಬಡ್ಡಿಮನ್ನಾ ಮಾಡುವ ಯೋಜನೆಯಲ್ಲಿ ಬಡ್ಡಿ ಮನ್ನಾ ಸೌಲಭ್ಯವನ್ನು ಪಡೆಯಲು ರಾಜ್ಯದ ರೈತರು ಸಹಕಾರ ಸಂಘಗಳು ಅಂದರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದು ದಿನಾಂಕ:31-12-2023 ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಂಬಂಧಿತ ಸಾಲಗಳ ಕಂತುಗಳ ಅಸಲನ್ನು ಪಾವತಿಸಲು ನಿಗದಿಪಡಿಸಿದ ದಿನಾಂಕ:29-02-2024ನ್ನು ದಿನಾಂಕ:31-03-2024 ರವರೆಗೆ ವಿಸ್ತರಿಸಿ ಆದೇಶಿಸಿದೆ.

Good news for farmers: State govt extends farm loan interest waiver period ರೈತರಿಗೆ ಗುಡ್ ನ್ಯೂಸ್ : ʻಕೃಷಿ ಸಾಲದ ಬಡ್ಡಿ ಮನ್ನಾʼ ಅವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ
Share. Facebook Twitter LinkedIn WhatsApp Email

Related Posts

BIG NEWS : ಲಿಂಗಾಯಿತ ಧರ್ಮದಲ್ಲಿರುವ ಜಂಗಮರು ‘ಬೇಡ’ & ‘ಬುಡ್ಗ’ ಜಂಗಮರಲ್ಲ : ಹೈಕೋರ್ಟ್

05/07/2025 6:14 AM1 Min Read

BREAKING : ರಾಜ್ಯದಲ್ಲಿ ಸರಣಿ ‘ಹೃದಯಾಘಾತ’ ಸಾವುಗಳಿಗೆ ಇದೆ ಕಾರಣ : ತಜ್ಞರ ವರದಿಯಲ್ಲಿ ಬಯಲಾಯ್ತು ಸ್ಪೋಟಕ ಅಂಶ!

05/07/2025 6:12 AM2 Mins Read

BREAKING : ಭಾರಿ ಮಳೆ ಹಿನ್ನೆಲೆ : ಇಂದು ಚಿಕ್ಕಮಗಳೂರಿನ ಈ ತಾಲೂಕುಗಳಲ್ಲಿ ಅಂಗನವಾಡಿಗಳಿಗೆ ರಜೆ ಘೋಷಣೆ

05/07/2025 6:09 AM1 Min Read
Recent News

ಭಯೋತ್ಪಾದನೆ ಮಾನವೀಯತೆಯ ಶತ್ರು, ಅದಕ್ಕೆ ಯಾವುದೇ ಆಶ್ರಯವನ್ನು ನಿರಾಕರಿಸಲು ಒಂದಾಗಬೇಕು: ಪ್ರಧಾನಿ ಮೋದಿ

05/07/2025 6:57 AM

ಟೆಕ್ಸಾಸ್ ಪ್ರವಾಹ: 13 ಸಾವು, 20ಕ್ಕೂ ಹೆಚ್ಚು ಬಾಲಕಿಯರು ನಾಪತ್ತೆ | Texas Floods

05/07/2025 6:49 AM

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹಾಲಿವುಡ್ ನಟ ಜೂಲಿಯನ್ ಮೆಕ್ ಮಹೋನ್ ನಿಧನ

05/07/2025 6:42 AM

ಕೇರಳದಲ್ಲಿ ಮತ್ತೆ ಕಾಣಿಸಿಕೊಂಡ ನಿಪಾಹ್ ವೈರಸ್, 2 ಪ್ರಕರಣಗಳು ಪತ್ತೆ | Nipah virus

05/07/2025 6:28 AM
State News
KARNATAKA

BIG NEWS : ಲಿಂಗಾಯಿತ ಧರ್ಮದಲ್ಲಿರುವ ಜಂಗಮರು ‘ಬೇಡ’ & ‘ಬುಡ್ಗ’ ಜಂಗಮರಲ್ಲ : ಹೈಕೋರ್ಟ್

By kannadanewsnow0505/07/2025 6:14 AM KARNATAKA 1 Min Read

ಬೆಂಗಳೂರು : ಲಿಂಗಾಯಿತರಲ್ಲಿನ ಜಂಗಮರು ತಾವು ಬೇಡ ಜಂಗಮರೆಂದು ಹಕ್ಕು ಮಂಡಿಸುತ್ತಿರುವುದರ ಕುರಿತು ನಿನ್ನೆ ಕಲಬುರ್ಗಿ ಹೈಕೋರ್ಟ್ ಪೀಠದಲ್ಲಿ ವಿಚಾರಣೆ…

BREAKING : ರಾಜ್ಯದಲ್ಲಿ ಸರಣಿ ‘ಹೃದಯಾಘಾತ’ ಸಾವುಗಳಿಗೆ ಇದೆ ಕಾರಣ : ತಜ್ಞರ ವರದಿಯಲ್ಲಿ ಬಯಲಾಯ್ತು ಸ್ಪೋಟಕ ಅಂಶ!

05/07/2025 6:12 AM

BREAKING : ಭಾರಿ ಮಳೆ ಹಿನ್ನೆಲೆ : ಇಂದು ಚಿಕ್ಕಮಗಳೂರಿನ ಈ ತಾಲೂಕುಗಳಲ್ಲಿ ಅಂಗನವಾಡಿಗಳಿಗೆ ರಜೆ ಘೋಷಣೆ

05/07/2025 6:09 AM

BREAKING : ಅಕ್ರಮ ಸಂಬಂಧ ಹೊಂದಿದ್ದ ಪತಿಯನ್ನು, ಮುದ್ದೆ ಕೋಲಿಂದ ಹೊಡೆದು ಹತ್ಯೆಗೈದ ಪತ್ನಿ!

05/07/2025 6:04 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.