2024-25 ನೇ ಸಾಲಿನಲ್ಲಿ ಮುಂಗಾರು ಋತುವಿನಲ್ಲಿ ಬೆಳೆದ ಎಫ್.ಎ.ಕ್ಯೂ. ಗುಣಮಟ್ಟದ ಭತ್ತ ಹಾಗೂ ಬಿಳಜೋಳ ಉತ್ಪನ್ನವನ್ನು ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ನೇರ ಖರೀದಿಸಲು ಸರ್ಕಾರದ ಆದೇಶದಂತೆ ಜಿಲ್ಲಾ ಟಾಸ್ಕಪೆÇೀರ್ಸ ಸಮಿತಿ ನಿರ್ಧರಿಸಿದೆ ಎಂದು ಜಿಲ್ಲಾ ಟಾಸ್ಕಪೆÇೀರ್ಸ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಋತುವಿನಲ್ಲಿ ಬೆಳೆದ ಭತ್ತಕ್ಕೆ ರೂ.2,300 ಹಾಗೂ ಗ್ರೇಡ್-ಎ ಭತ್ತಕ್ಕೆ ರೂ.2,320 ನಿಗದಿಪಡಿಸಿದೆ. ಮತ್ತು ಎಫ್.ಎ.ಕ್ಯೂ. ಗುಣಮಟ್ಟದ ಬೀಳಿಜೋಳ ಹೈಬ್ರಿಡ್‍ಗೆ ರೂ.3,371, ಬಿಳಿಜೋಳ ಮಾಲ್ದಂಡಿಗೆ ರೂ.3,421 ನಿಗದಿಪಡಿಸಿದೆ ಎಂದು ಅವರು ತಿಳಿಸಿದ್ದಾರೆ.
ಭತ್ತ ಖರೀದಿ: ಧಾರವಾಡ ಮತ್ತು ಕಲಘಟಗಿ ಭಾಗದಲ್ಲಿ 10,904 ಹೇಕ್ವೆರ್ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿದ್ದು 1,09,040 ಕ್ವಿಂಟಲ್ ಭತ್ತದ ಇಳುವರಿಯನ್ನು ನೀರಿಕ್ಷಿಸಲಾಗಿದೆ. ಭತ್ತ ಖರೀದಿಗಾಗಿ ಧಾರವಾಡ ಮತ್ತು ಕಲಘಟಗಿ ಎ.ಪಿ.ಎಮ್.ಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಖರೀದಿ ಕೇಂದ್ರ ಸ್ಥಾಪಿಸಲು ನಿರ್ಧರಿಸಿ, ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಶಾಖಾ ವ್ಯವಸ್ಥಾಪಕರಿಗೆ, ರೈತರ ನೋಂದಣಿಯನ್ನು ಮಾಡಿಕೊಳ್ಳಲು ಹಾಗೂ ಖರೀದಿ ಕೇಂದ್ರಗಳಲ್ಲಿ ಎಲ್ಲ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಭತ್ತ ಖರೀದಿ ಕೇಂದ್ರಗಳ ವಿವರ: ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಖರೀದಿ ಏಜೆನ್ಸಿಯಿಂದ ಧಾರವಾಡ ಎ.ಪಿ.ಎಮ್.ಸಿ ಹಾಗೂ ಕಲಘಟಗಿ ಎ.ಪಿ.ಎಮ್.ಸಿ (ದೂ. ಸಂ:0836-2004419) ಖರೀದಿ ಕೇಂದ್ರಗಳಾಗಿವೆ ಎಂದು ಅವರು ತಿಳಿಸಿದ್ದಾರೆ.
ನೋಂದಣಿ ಹಾಗೂ ಖರೀದಿ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಭತ್ತದ ಉತ್ಪನ್ನವನ್ನು ಖರೀದಿಸಲು ರೈತರ ನೋಂದಣಿ ಹಾಗೂ ಉತ್ಪನ್ನ ಖರೀದಿಸಲು ನವೆಂಬರ 15, 2024 ರಿಂದ ಡಿಸೆಂಬರ 31, 2024 ರವರೆಗೆ ಅವಧಿಯನ್ನು ನಿಗದಿಗೊಳಿಸಲಾಗಿದೆ.
ಖರೀದಿಗೆ ಅವಶ್ಯವಿರುವ ತಂತ್ರಾಂಶವನ್ನು ಆಯುಕ್ತರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಇವರು ಎನ್.ಐ.ಸಿ ಸಹಯೋಗದೊಂದಿಗೆ ಸಿದ್ದಪಡಿಸತಕ್ಕದ್ದು ಹಾಗೂ ಕೇಂದ್ರ ಸರ್ಕಾರದ ಪೆÇೀರ್ಟಲ್‍ನಲ್ಲಿ ಅಗತ್ಯ ದತ್ತಾಂಶವನ್ನು ದಾಖಲಿಸತಕ್ಕದ್ದು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಬೆಂಬಲ ಬೆಲೆ ಯೋಜನೆಯಡಿ ಬಿಳಿಜೋಳ ಉತ್ಪನ್ನ ಖರೀದಿ: 2024-25 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಮುಂಗಾರು ಋತುವಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಬೀಳಿಜೋಳ ಹೈಬ್ರಿಡ್ ಉತ್ಪನ್ನಕ್ಕೆ ರೂ.3,371 ಹಾಗೂ ಬಿಳಿಜೋಳ ಮಾಲ್ದಂಡಿ ಉತ್ಪನ್ನಕ್ಕೆ ರೂ.3,421 ದರದಲ್ಲಿ ರೈತರಿಂದ ನೇರವಾಗಿ ಖರೀದಿಸಲು ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಜಿಲ್ಲಾ ಟಾಸ್ಕಪೆÇೀರ್ಸ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಬಿಳಿಜೋಳ ಖರೀದಿಗಾಗಿ ಧಾರವಾಡ ಮತ್ತು ಹುಬ್ಬಳ್ಳಿ ಎ.ಪಿ.ಎಮ್.ಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಖರೀದಿ ಕೇಂದ್ರ ಸ್ಥಾಪಿಸಲು ನಿರ್ಧರಿಸಿ, ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಶಾಖಾ ವ್ಯವಸ್ಥಾಪಕರಿಗೆ, ರೈತರ ನೋಂದಣಿಯನ್ನು ಡಿಸೆಂಬರ 1, 2024 ರಿಂದ ಹಾಗೂ ಜನೇವರಿ 1, 2025 ರಿಂದ ಮಾರ್ಚ 31, 2025 ರ ಅವಧಿಯವರೆಗೆ ಬಿಳಿಜೋಳ ಧಾನ್ಯಗಳ ಖರೀದಿ ಪ್ರಕ್ರಿಯೆ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಿಳಿಜೋಳ ಖರೀದಿ ಕೇಂದ್ರಗಳ ವಿವರ: ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಖರೀದಿ ಏಜೆನ್ಸಿಯಿಂದ ಧಾರವಾಡ ಎ.ಪಿ.ಎಮ್.ಸಿ ಹಾಗೂ ಹುಬ್ಬಳ್ಳಿ ಎ.ಪಿ.ಎಮ್.ಸಿ (ದೂ. ಸಂ:0836-2004419) ಖರೀದಿ ಕೇಂದ್ರಗಳಾಗಿವೆ ಎಂದು ಅವರು ತಿಳಿಸಿದ್ದಾರೆ.
ಬಿಳಿಜೋಳ ಖರೀದಿಗೆ ಅವಶ್ಯವಿರುವ ತಂತ್ರಾಶವನ್ನು ಆಯುಕ್ತರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಇವರು ಎನ್ ಐಸಿ ಸಹಯೋಗದೊಂದಿಗೆ ಸಿದ್ದಪಡಿಸತಕ್ಕದ್ದು ಹಾಗೂ ಕೇಂದ್ರ ಸರ್ಕಾರದ ಪೆÇೀರ್ಟಲ್‍ನಲ್ಲಿ ಅಗತ್ಯ ದತ್ತಾಂಶವನ್ನು ದಾಖಲಿಸಬೇಕು ಎಂದು ಅವರು ಸೂಚಿಸಿದ್ದಾರೆ.
ಭತ್ತ ಮತ್ತು ಬಿಳಿಜೋಳ ಖರೀದಿಸಲು ಅನುಸರಿಸುವ ಕ್ರಮಗಳು: ರೈತರಿಂದ ಭತ್ತ ಮತ್ತು ಬಿಳಿಜೋಳ ಖರೀದಿಸಲು ತೆರೆಯಲಾಗಿರುವ ಪ್ರತಿ ಖರೀದಿ ಕೇಂದ್ರಕ್ಕೆ ಕೃಷಿ ಇಲಾಖೆಯಿಂದ ಗ್ರೇಡರಗಳನ್ನು ನೇಮಿಸಬೇಕು. ಸರ್ಕಾರದಿಂದ ನೇಮಿಸಲ್ಪಟ್ಟ ಸಂಗ್ರಹಣಾ ಏಜೇನ್ಸಿಗಳು ಕೇಂದ್ರ ಸರ್ಕಾರವು ನಿಗದಿಪಡಿಸಿದ ಮಾನದಂಡಗಳನ್ವಯ ಭತ್ತ ಮತ್ತು ಬಿಳಿಜೋಳ ಖರೀದಿ ಹಂತದಲ್ಲಿ ಎಫ್.ಎ.ಕ್ಯೂ ಗುಣಮಟ್ಟವನ್ನು ದೃಢಿಕರಿಸಲು ಕ್ರಮವಹಿಸಬೇಕು. ಖರೀದಿ ಏಜೇನ್ಸಿ ಅಧಿಕಾರಿಗಳು ತಮ್ಮ ಸಂಸ್ಥೆಗೆ ವಹಿಸಿರುವ ಜಿಲ್ಲೆಯಲ್ಲಿನ ಕಾರ್ಯಪ್ರಗತಿ ಬಗ್ಗೆ ಆಗ್ಗಿಂದಾಗೆ ಮೇಲುಸ್ತುವಾರಿ ತಪಾಸಣೆ ಕೈಗೊಳ್ಳಬೇಕು. ಭತ್ತವನ್ನು ಸರಬರಾಜು ಮಾಡಿದ ರೈತರಿಗೆ 15 ದಿನದೊಳಗೆ ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ನೇರ ನಗದು ವರ್ಗಾವಣೆ (ಆಃಖಿ) ಮುಖಾಂತರ ಮಾಡಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.