ಬೆಂಗಳೂರು: ಸಿಎಂ ಸಿದ್ಧರಾಮಯ್ಯ ಅವರು ಈಗಾಗಲೇ ರಾಜ್ಯದ ರೈತರು ಸಹಕಾರ ಸಂಘಗಳಲ್ಲಿ ಮಾಡಿರುವಂತ ಸಾಲದ ಅಸಲು ಪಾವತಿಸಿದ್ರೆ ಬಡ್ಡಿ ಮನ್ನಾ ಮಾಡೋದಾಗಿ ಘೋಷಣೆ ಮಾಡಿದ್ದರು. ಅದರಂತೆ ಇಂದು ಇಂತಹ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕಡತ ಮಂಡಿಸಿ ಅನುಮೋದನೆಯನ್ನು ಪಡೆಯಲಾಗಿದೆ. ಈ ಮೂಲಕ ರಾಜ್ಯದ ರೈತರಿಗೆ ಭರ್ಜರಿ ಸಿಹಿಸುದ್ದಿಯನ್ನು ನೀಡಲಾಗಿದೆ.
ಇಂದು ಸಿಎಂ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆ ಮುಕ್ತಾಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಸಚಿವ ಹೆಚ್.ಕೆ ಪಾಟೀಲ್ ಮಾಧ್ಯಮಗಳಿಗೆ ತಿಳಿಸಿದರು. ಸಹಕಾರಿ ಸಮೃದ್ಧ ಸೌಧ ನಿರ್ಮಾಣಕ್ಕೆ ಒಪ್ಪಿಗೆ. ಸಹಕಾರ ಸಂಘಗಳ ಮೂಲಕ ಸಾಲ ಸೌಲಭ್ಯ. ಸಾಲ ಪಡೆದ ರೈತರ ಸುಸ್ತಿಬಡ್ಡಿ ಮನ್ನಾ. ಮಧ್ಯಮಾವಧಿ, ಧೀರ್ಘಾವದಿ ಸುಸ್ತಿ ಬಡ್ಡಿ ಮನ್ನಾ ಮಾಡಲಾಗುತ್ತದೆ. ಸರ್ಕಾರ ತೆಗೆದುಕೊಂಡಿದ್ದ ನಿರ್ಧಾರಕ್ಕೆ ಅನುಮೋದನೆ ನೀಡಲಾಗುತ್ತದೆ. 440 ಕೋಟಿ 20 ಲಕ್ಷ ಸುಸ್ತಿ ಬಡ್ಡಿ ಮನ್ನಾ. ಸಹಕಾರಿ ಸಂಘಗಳಿಂದ ಪಡೆದಿದ್ದ ಸಾಲದ ಮೇಲಿನ ಬಡ್ಡಿ, ಸುಸ್ತಿ ಬಡ್ಡಿ ಮನ್ನಾ ಮಾಡಲಾಗುತ್ತಿದೆ. ಸರ್ಕಾರ ನಿರ್ಧಾರಕ್ಕೆ ಸಂಪುಟದ ಅನುಮೋದನೆ ನೀಡಿದೆ ಎಂದರು.
ನಾಮಫಲಕ ಕಡ್ಡಾಯ ಕನ್ನಡ ವಾಪಸ್ ವಿಚಾರವಾಗಿ ಮಾತನಾಡಿದಂತ ಅವರು, ತಾಂತ್ರಿಕ ಕಾರಣಗಳಿಂದ ವಾಪಸ್ ಆಗಿದೆ. ಇಲ್ಲದೆ ಹೋಗಿದ್ದರೆ ವಾಪಸ್ ಆಗ್ತಿರಲಿಲ್ಲ. ಅಧಿವೇಶನದಲ್ಲಿ ಪಾಸು ಮಾಡಿ ಕಳಿಸ್ತೇವೆ. ರಾಜಭವನದಲ್ಲಿ 6 ಬಿಲ್ ಗಳು ಪೆಂಡಿಂಗ್ ಇವೆ. ಅದಕ್ಕೆಕ್ಲಾರಿಫೈ ಕೇಳಿದ್ದರು. ಕೇಳಿದ್ದ ಮಾಹಿತಿಯನ್ನ ನಾವು ಒದಗಿಸಿದ್ದೇವೆ ಎಂದರು.
“ಸ್ವೀಟ್ ಸ್ಪಾಟ್ , ಅನೇಕ ಉದ್ಯೋಗಾವಕಾಶಗಳು” : ‘ಮಧ್ಯಂತರ ಬಜೆಟ್’ಗೆ ‘ಪ್ರಧಾನಿ ಮೋದಿ’ ಫುಲ್ ಮಾರ್ಕ್ಸ್