ಕೃಷಿ ಇಲಾಖೆಯಿಂದ ಸೂಕ್ಷ್ಮ ನೀರಾವರಿ ಯೋಜನೆಯಲ್ಲಿ ಪರಿಶಿಷ್ಠ ಜಾತಿ ವರ್ಗದ ರೈತರಿಗೆ ತುಂತುರು ನೀರಾವರಿ ಘಟಕಗಳ ವಿತರಣೆಯಡಿ ಅರ್ಜಿ ಆಹ್ವಾನಿಸಲಾಗಿದೆ.
2024-25ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ ತುಂತುರು ನೀರಾವರಿ ಘಟಕಗಳ ವಿತರಣೆಗೆ ಕೊಪ್ಪಳ ತಾಲ್ಲೂಕಿಗೆ ಪರಿಶಿಷ್ಠ ಜಾತಿ ವರ್ಗದ ರೈತರಿಗೆ 651 ಹೆಕ್ಟರ್ಗಳಿಗೆ ಗುರಿಯನ್ನು ನಿಗದಿಪಡಿಸಿದ್ದು, ಇಲ್ಲಿಯವರೆಗೆ 192 ಹೆಕ್ಟರ್ ಘಟಕಗಳನ್ನು ವಿತರಣೆ ಮಾಡಲಾಗಿದೆ.
ರೈತರು 2 ಹೆಕ್ಟರ್ಗಳವರೆಗೆ ತುಂತುರು ನೀರಾವರಿ ಘಟಕಗಳನ್ನು ಪಡೆಯಲು ಅವಕಾಶವಿರುತ್ತದೆ. ಈ ರೈತರು 75 ಎಂ.ಎಂ.ಗೆ 1 ಹೆಕ್ಟರ್ಗೆ ರೈತ ವಂತಿಕೆ 4667 ರೂ. ಹಾಗೂ ಸಹಯಧನ 21,775 ಇದ್ದು ರೂ., 2 ಹೆಕ್ಟರ್ಗೆ ರೈತ ವಂತಿಕೆ 6540 ರೂ. ಮತ್ತು ಸಹಾಯಧನ 31,191 ರೂ.ಇದೆ. 63 ಎಂ.ಎಂ.ಗೆ 1 ಹೆಕ್ಟರ್ಗೆ ರೈತ ವಂತಿಕೆ 4139 ರೂ. ಹಾಗೂ ಸಹಾಯಧನ 19429 ರೂ. ಇದ್ದು, 2 ಹೆಕ್ಟರ್ಗೆ ರೈತ ವಂತಿಕೆ 5772 ಮತ್ತು ಸಹಾಯಧನ 28050 ರೂ.ಇರುತ್ತದೆ.
ರೈತರು ಈ ಯೋಜನೆಯ ಸದಪಯೋಗವನ್ನು ಪಡೆದುಕೊಳ್ಳಲು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ನಿಗದಿತ ನಮೂನೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಸದಪಯೋಗವನ್ನು ಪಡೆದುಕೊಳ್ಳುವಂತೆ ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.