ಬೆಂಗಳೂರು: ರಾಜ್ಯ ಸರ್ಕಾರವು ಆಸ್ತಿ ಮಾಲೀಕರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ರಾಜ್ಯದಲ್ಲಿ ಮೃತಪಟ್ಟವರ ಹೆಸರಿನಲ್ಲಿರುವ 51.13 ಲಕ್ಷ ಜಮೀನುಗಳ ಪಹಣಿಗಳನ್ನು ವಾರಸುದಾರರಿಗೆ ನೋಂದಣಿ ಮಾಡಿಕೊಡಲು ಇ- ಪೌತಿ ಆಂದೋಲನಕ್ಕೆ ಮುಂದಾಗಿದೆ.
ಹೌದು, ಕಂದಾಯ ಇಲಾಖೆಯು ಜ್ಯದಲ್ಲಿ ಮೃತಪಟ್ಟವರ ಹೆಸರಿನಲ್ಲಿರುವ 51.13 ಲಕ್ಷ ಜಮೀನುಗಳ ಪಹಣಿಗಳನ್ನು ವಾರಸುದಾರರಿಗೆ ನೋಂದಣಿ ಮಾಡಿಕೊಡಲು ಇ- ಪೌತಿ ಆಂದೋಲನಕ್ಕೆ ಮುಂದಾಗಿದ್ದು, ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಅಭಿವೃದ್ಧಿ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ತೆರಳಿ ಪೌತಿ ಖಾತೆ ಮಾಡಿಕೊಡಲಿದ್ದಾರೆ. ರೈತರ ಭೂಹಿಡುವಳಿ ಬಗ್ಗೆ ಸ್ವಷ್ಟತೆ ಪಡೆಯಲು ಸರ್ಕಾರ ಆಧಾರ್ ಸೀಡಿಂಗ್ ಕಾರ್ಯಕ್ಕೆ ಪೌತಿ ಖಾತೆ ಆಂದೋಲನ ಕೈಗೊಂಡಿದೆ. ಇ-ಪೌತಿ ಆಂದೋಲನಕ್ಕೆ ಪ್ರತ್ಯೇಕ ತಂತ್ರಾಂಶ ಸಿದ್ದಪಡಿಸಲಾಗಿದೆ.
ರಾಜ್ಯದಲ್ಲಿ 51.13 ಲಕ್ಷ ಜಮೀನುಗಳ ಮಾಲೀಕರು ನಿಧನರಾಗಿದ್ದಾರೆ. 70 ಲಕ್ಷ ಜಮೀನುಗಳು ಕೃಷಿಯೇತರ ಉದ್ದೇಶಕ್ಕೆ ಬಳಕೆಯಾಗಿದೆ. ಪಹಣಿಗಳಿಗೆ ಆಧಾರ್ ಜೋಡಣೆಯಿಂದ ಎಷ್ಟು ಕೃಷಿ ಭೂಮಿ ಇದೆ. ರೈತರ ಭೂ ಹಿಡುವಳಿ ಎಷ್ಟು? ಸಣ್ಣ ಮತ್ತು ಅತಿ ಸಣ್ಣ ರೈತರ ನಿಖರ ಅಂಕಿ ಸಂಖ್ಯೆ ಸಿಗುತ್ತದೆ.ಮನೆ ಮನೆಗೆ ತೆರಳಿ ಅಧಿಕಾರಿಗಳು ವಾರಸುದಾರರ ನಿಖರ ಮಾಹಿತಿ ಪಡೆಯಲಿದ್ದು, ವಂಶವೃಕ್ಷವನ್ನು ಆಧಾರವಾಗಿ ಬಳಸಿಕೊಂಡು ಆಧಾರ್ ಸಂಖ್ಯೆ ಮೂಲಕ ಒಟಿಪಿ ಪಡೆದು ದಾಖಲು ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಈ ಮೂಲಕ ಪೌತಿ ಖಾತೆ ಮಾಡುವುದರಲ್ಲಿ ಅಕ್ರಮ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ.