ಬೆಂಗಳೂರು : ರಾಜ್ಯ ಸರ್ಕಾರವು ರೈತರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಹಗಲಲ್ಲೂ ಕರೆಂಟ್ ಒದಗಿಸುವ ಯೋಜನೆಗೆ ನಾಳೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ರಾಜ್ಯದಲ್ಲಿ ಕುಸುಮ್-ಸಿ ಯೋಜನೆ ಮೂಲಕ ಡಿಸೆಂಬರ್ ವೇಳೆಗೆ 2,400 ಮೆ. ವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಿದ್ದು, ರೈತರಿಗೆ ಹಗಲಿನ ವೇಳೆಯೇ ಸಮರ್ಪಕ ವಿದ್ಯುತ್ ಪೂರೈಸುವ ಈ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅವರು ನಾಳೆ ಗೌರಿಬಿದನೂರಿನಲ್ಲಿ ಅಧಿಕೃತ ಚಾಲನೆ ನೀಡಲಿದ್ದಾರೆ ಎಂದು ಇಂಧನ ಸಚಿವ ಕೆ. ಜೆ.ಜಾರ್ಜ್ ತಿಳಿಸಿದ್ದಾರೆ.
ಪ್ರತಿ ಮೆ.ವ್ಯಾಟ್ ವಿದ್ಯುತ್ ಉತ್ಪಾದ ನೆಗೆ 3-4 ಕೋಟಿ ವೆಚ್ಚ ತಗುಲುತ್ತದೆ. ಈ ಪೈಕಿ 1 ಕೋಟಿ ರೂ. ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತದೆ. ಸದ್ಯ ಟೆಂಡರ್ ಕರೆದು 2,400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮ ರ್ಥದ ಘಟಕಗಳ ಅಳವಡಿಕೆಗೆ ನಿರ್ಧರಿ ಸಿದ್ದು,9,500 ಕೋಟಿಯಿಂದ 10,000 ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆಯಿದೆ ಎಂದು ಹೇಳಿದರು.
ಸಬ್ಸಿಡಿ ಸೌರಶಕ್ತಿ ಚಾಲಿತ ನೀರಾವರಿ ಪಂಪ್ಗಳೊಂದಿಗೆ ರೈತರಿಗೆ ಬೆಂಬಲ ನೀಡಲು ಸರ್ಕಾರ ಮುಂದಾಗಿದೆ. ಜೂನ್ 11 ರಂದು ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಕುಸುಮ್-ಸಿ ಯೋಜನೆಯ ಅನುಷ್ಠಾನವನ್ನು ಉದ್ಘಾಟನೆಯನ್ನು ಮಾಡಲಾಗುತ್ತದೆ. ಇದು ಪ್ರಧಾನ ಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಏವಂ ಉತ್ಥಾನ ಮಹಾಭಿಯಾನ (PM-Kusum)ಯೋಜನೆಯ ಒಂದು ಭಾಗವಾಗಿದೆ.
ಸರ್ಕಾರಿ ಭೂಮಿ ಲಭ್ಯವಿರುವಲ್ಲೆಲ್ಲಾ ಫಲಕಗಳನ್ನು ಅಳವಡಿಸಲಾಗುತ್ತಿದೆ. ಎಲ್ಲಾ ಜಿಲ್ಲಾಧಿಕಾರಿಗಳಿಗೆ ಭೂಮಿಯನ್ನು ಹುಡುಕಿ ಕೆಲಸ ಪ್ರಾರಂಭಿಸಲು ನಿರ್ದೇಶವನನ್ನು ಸಹ ಇಂಧನ ಸಚಿವರು ಮಾಡಿದ್ಧಾರೆ. ಪಂಚಾಯತ್ಗಳು ಲಭ್ಯವಿರುವ ಭೂಮಿಯನ್ನು ಉಪಯುಕ್ತತಾ ಕಾರ್ಯಗಳಿಗೆ ಬಳಸಲು ಸಾಧ್ಯವಾಗುತ್ತದೆ ಎಂದು ವಿವರಿಸಿದ್ದಾರೆ.
ಕುಸುಮ್ –ಬಿ ಯೋಜನೆಯಡಿ ರೈತರು ಸ್ವಂತ ಜಾಗ ಹೊಂದಿದ್ದರೆ ಪಂಪ್ಸೆಟ್ ಗೆ ಸೋಲಾರ್ ಪ್ಯಾನಲ್ ಅಳವಡಿಸಿಕೊಳ್ಳಲು ಸರ್ಕಾರವೇ ಸಬ್ಸಿಡಿ ನೀಡುವುದರಿಂದ ಅನೇಕ ರೈತರು ಅಳವಡಿಸಿಕೊಂಡಿದ್ದಾರೆ.