ಬೆಂಗಳೂರು : ತೋಟಗಾರಿಕೆ ಇಲಾಖೆಯಿಂದ 2024-25 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಅರ್ಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗದ ರೈತರಿಂದ ಅರ್ಜಿ ಆಹ್ವಾನಿಸಿದೆ.
ತೋಟಗಾರಿಕೆ ಬೆಳೆಯನ್ನು ಬೆಳೆಯುತ್ತಿರುವ ಎಲ್ಲಾ ವರ್ಗದ ರೈತರಿಗೆ (ಕಾಫಿ.ಟೀ ಹಾಗೂ ರಬ್ಬರ್ ಬೆಳೆಗಳನ್ನು ಹೊರತುಪಡಿಸಿ) ಹನಿ ನೀರಾವರಿ ಅಳವಡಿಸಿದ ಪ್ರತಿ ಫಲಾನುಭವಿಗೆ ಗರಿಷ್ಟ 5 ಹೆಕ್ಟೇರ್ ಪ್ರದೇಶದವರೆಗೆ ಹಾಗೂ ತರಕಾರಿ ಮತ್ತು ಹೂ ಬೆಳೆಗಳಿಗೆ ಗರಿಷ್ಟ 2 ಹೆಕ್ಟೇರ್ ಪ್ರದೇಶಕ್ಕೆ ಸಹಾಯಧನವನ್ನು ನೀಡಲಾಗುವುದು.
ಸೂಕ್ಷ್ಮ ನೀರಾವರಿ ಘಟಕ ಅಳವಡಿಸಿದ ಅರ್ಹ ಪ.ಜಾ./ಪ.ಪಂ.ದ ರೈತರ ಫಲಾನುಭವಿಗಳಿಗೆ ಮೊದಲ 2 ಹೆ. ಪ್ರದೇಶದವರೆಗೆ ಶೇ.90% ಮತ್ತು ಇತರೇ ವರ್ಗದ ರೈತ ಫಲಾನುಭವಿಗೆ ಶೇ.55 ರಷ್ಟು ಹಾಗೂ ಎಲ್ಲಾ ವರ್ಗದ ರೈತರಿಗೆ 3 ಹೆ. ಪ್ರದೇಶಕ್ಕೆ ಶೇ. 45% ರಷ್ಟು ಸಹಾಯಧನ ಸೌಲಭ್ಯ ಲಭ್ಯವಿರುತ್ತದೆ.
ಇಲಾಖೆಯಿಂದ ಅನುಮೋದಿತ ಕಂಪನಿಗಳ ಮಾಹಿತಿಯನ್ನು ಹಾಗೂ ಹೆಚ್ಚಿನ ವಿವರಗನ್ನು ಆಯಾ ಹೋಬಳಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಅಥವಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು ಭೇಟಿ ಮಾಡಿ ಪಡೆಯಬಹುದಾಗಿದೆ.
ಈ ಹಿಂದೆ ಅರ್ಜಿ ಸಲ್ಲಿಸಿ ಸಹಾಯಧನ ಪಡೆಯದವರು ಈ ಸಾಲಿನಲ್ಲಿ ಪುನಃ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ತೋಟಗಾರಿಕೆ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಅಬಕಾರಿ ನೀತಿ ಪ್ರಕರಣ: ಅರವಿಂದ್ ಕೇಜ್ರಿವಾಲ್ ಕಸ್ಟಡಿ ಅವಧಿ ಆಗಸ್ಟ್.27ರವರೆಗೆ ವಿಸ್ತರಣೆ | Arvind Kejriwal
BREAKING : ದೇಶವು ಮತ್ತೊಂದು ಅತ್ಯಾಚಾರವನ್ನು ಕಾಯಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್