Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಂತಿಮ ಘಟ್ಟಕ್ಕೆ ತಲುಪಿದ ವಿಧಾನ ಪರಿಷತ್ ಚುನಾವಣೆ : ಈವರೆಗೆ ಒಟ್ಟು 221 ಶಾಸಕರಿಂದ ಮತ ಚಲಾವಣೆ!

BIG NEWS : ರಾಜ್ಯದಲ್ಲಿ ಹೋಂಸ್ಟೇ ನಿಯಂತ್ರಣಕ್ಕೆ ಸಮಗ್ರ ನೀತಿ ರೂಪಿಸಲು, ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ

BREAKING : ಬಿಜೆಪಿಗೆ ಮತ ಹಾಕುವುದಾಗಿ ಶಾಸಕ ಯತ್ನಾಳ್ ಪತ್ರ : ಚುನಾವಣಾಧಿಕಾರಿಗೆ ದೂರು ನೀಡಿದ ಕಾಂಗ್ರೆಸ್

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘EV ವಾಹನ ಬಳಕೆದಾರ’ರಿಗೆ ಗುಡ್ ನ್ಯೂಸ್: ಬೆಸ್ಕಾಂನಿಂದ ಚಾರ್ಜಿಂಗ್ ಸ್ಟೇಷನ್ ಮಾಹಿತಿಗೆ ‘ಇವಿ ಮಿತ್ರ ಆ್ಯಪ್’ ಬಿಡುಗಡೆ | EV Mithra App
KARNATAKA

‘EV ವಾಹನ ಬಳಕೆದಾರ’ರಿಗೆ ಗುಡ್ ನ್ಯೂಸ್: ಬೆಸ್ಕಾಂನಿಂದ ಚಾರ್ಜಿಂಗ್ ಸ್ಟೇಷನ್ ಮಾಹಿತಿಗೆ ‘ಇವಿ ಮಿತ್ರ ಆ್ಯಪ್’ ಬಿಡುಗಡೆ | EV Mithra App

By ವಸಂತ ಬಿ ಈಶ್ವರಗೆರೆ

ಬೆಂಗಳೂರು : ಇವಿ ಬಳಕೆದಾರರಿಗೆ ಸುಗಮ ಚಾರ್ಜಿಂಗ್‌ ಸೌಲಭ್ಯ ಒದಗಿಸುತ್ತಿರುವ ಬೆಸ್ಕಾಂನ ‘ಇವಿ ಮಿತ್ರ’ ಆ್ಯಪ್‌ ಈಗ ಹೊಸ ರೂಪ ಪಡೆದುಕೊಂಡಿದೆ.

ಆ್ಯಂಡ್ರಾಯ್ಡ್ ಮತ್ತು ಐಓಎಸ್‌ ಎರಡು ಮೊಬೈಲ್‌ ಅಪ್ಲಿಕೇಶನ್‌ಗಳಲ್ಲಿ ಲಭ್ಯವಿರುವ ಹೊಸ ‘ಇವಿ ಮಿತ್ರ’ ಆ್ಯಪ್‌- ಬಳಕೆದಾರರ ಪ್ರೊಫೈಲ್‌ ನಿರ್ವಹಣೆ, ಚಾರ್ಚಿಂಗ್‌ ಸ್ಟೇಷನ್‌ಗಳ ವೀಕ್ಷಣೆಯೊಂದಿಗೆ ಮಾಹಿತಿ, ಚಾರ್ಜಿಂಗ್‌ ಪ್ರಕ್ರಿಯೆ, ಬುಕ್ಕಿಂಗ್‌ ವಿವರ, ಚಾರ್ಚಿಂಗ್ ಸ್ಟೇಷನ್‌ಗಳಲ್ಲಿರುವ ಸೌಕರ್ಯಗಳು ಮತ್ತು ಚಾರ್ಜಿಂಗ್‌ ಕಾಯ್ದಿರಿಸುವ ಸೌಲಭ್ಯ ಹೊಂದಿದೆ.

ಹಳೆಯ ‘ಇವಿ ಮಿತ್ರ’ ಆ್ಯಪ್ ಡಿಲೀಟ್ ಮಾಡಿ https://onelink.to/evmithra ಮೂಲಕ ಹೊಸ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. ವ್ಯಾಲೆಟ್‌ನಲ್ಲಿ ಹಣ ಉಳಿದಿದ್ದರೂ ಚಿಂತಿಸಬೇಕಿಲ್ಲ. ಹೊಸ ಆ್ಯಪ್‌ಗೆ ಹಣ ವರ್ಗಾವಣೆಯಾಗುತ್ತದೆ.

ಕನ್ನಡ, ಹಿಂದಿ, ಇಂಗ್ಲಿಷ್‌ ಹಾಗೂ ಪ್ರಾದೇಶಿಕ ಭಾಷೆಗಳು ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ಇವಿ ಚಾರ್ಚಿಂಗ್‌ ಮಾಹಿತಿ ಲಭ್ಯವಿದ್ದು, ಹಣ ಪಾವತಿಗೆ ಹಲವು ಆಯ್ಕೆಗಳನ್ನು ಒಳಗೊಂಡಿದೆ. ರಿಟೇಲ್‌ ಬಳಕೆದಾರರ ಶುಲ್ಕದ ವಿವರ, ಬಿಲ್ಲಿಂಗ್, ಪ್ರೊಫೈಲ್ ಇರಲಿದೆ. ಬಳಕೆದಾರರ ಸ್ನೇಹಿಯಾಗಿರುವ ಆ್ಯಪನ್ನು ಈಗಾಗಲೇ 15,000ಕ್ಕೂ ಹೆಚ್ಚು ಬಳಕೆದಾರರು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.

ಬಳಕೆ ಹೇಗೆ?

ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡ ನಂತರ ಫೋನ್‌ ನಂಬರ್‌ ನಮೂದಿಸಿ, ಲಾಗಿನ್‌ ಆಗಿ. ನಿಮ್ಮ ಮೊಬೈಲ್‌ಗೆ ಬರುವ ಓಟಿಪಿ ಸಂಖ್ಯೆ ದಾಖಲಿಸಿದ ನಂತರ ನಿಮ್ಮ ಲಾಗಿನ್‌ ಖಾತ್ರಿಯಾಗುವುದು. ಖಾಸಗಿ ಹಾಗೂ ವಾಣಿಜ್ಯ ಬಳಕೆದಾರರು ಈ ಒಂದೇ ಆ್ಯಪ್‌ ಮೂಲಕ ಚಾರ್ಚಿಂಗ್ ಸೌಲಭ್ಯ ಪಡೆಯಬಹುದಾಗಿದೆ. ಎಸಿ/ಡಿಸಿ ಚಾರ್ಚರ್‌ ಅಥವಾ ಮ್ಯಾಪ್‌ ಮೂಲಕ ಇವಿ ಬಳಕೆದಾರರು ಚಾರ್ಚಿಂಗ್ ಸ್ಟೇಷನ್‌ ಇರುವ ಜಾಗದ ಮಾಹಿತಿ ಪಡೆಯಬಹುದು.

ಸುಲಭ ಪಾವತಿ ಹಾಗೂ ಮರು ಪಾವತಿ:

ರಿಟೇಲ್‌ ಬಳಕೆದಾರರು ಆ್ಯಪ್‌ನಲ್ಲಿ ಲಭ್ಯವಿರುವ ವಾಲೆಟ್‌ಗೆ ಹಣ ಭರ್ತಿ ಮಾಡಿ ಶುಲ್ಕ ಪಾವತಿಸಬಹುದು. ಯುಪಿಐ (ಗೂಗಲ್‌/ಫೋನ್‌ ಪೇ) ಮೂಲಕವೂ ಪಾವತಿ ಮಾಡಬಹುದು. ಬಿಲ್‌ ಡೆಸ್ಕ್‌ ಮೂಲಕವೂ ಶುಲ್ಕ ಪಾವತಿಗೂ ಅವಕಾಶವಿದೆ. ಚಾರ್ಚಿಂಗ್‌ ಸಮಯದಲ್ಲಿ ಯಾವುದೇ ತಾಂತ್ರಿಕ ಅಡಚಣೆ ಉಂಟಾಗಿ ಚಾರ್ಚಿಂಗ್‌ ನಿಂತರೆ, ಬಳಕೆದಾರರಿಗೆ ಹಣ ಮರು ಪಾವತಿಯಾಗಲಿದೆ.

ವಾಣಿಜ್ಯ ಬಳಕೆದಾರಿಗೂ ವಿಶೇಷ ಸೌಲಭ್ಯ ಇದ್ದು, ತಮ್ಮ ವಾಹನಗಳ ಚಾಲಕರ ಚಲನೆ/ಚಾರ್ಚಿಂಗ್‌ ವಿವರದ ಬಗ್ಗೆ ನಿಗಾವಹಿಸಬಹುದು. ಸ್ಪೆಷಲ್‌ ಆ್ಯಕ್ಸಿಸ್‌ ಕೋಡ್‌ ಅಲ್ಲದೇ ಇನ್ನಿತರ ವಿಶೇಷ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

ವಾಟ್ಸಾಪ್ ಬೆಂಬಲ: ಯಾವುದೇ ಚಾರ್ಜಿಂಗ್ ಅಪ್ಲಿಕೇಶನ್ ಇಲ್ಲದೆಯೂ ಇವಿ ವಾಹನಗಳ ಚಾರ್ಚ್‌ ಮಾಡಲು ಬೆಸ್ಕಾಂ ‘ಇವಿ ಮಿತ್ರ ಬಾಟ್‌’- ವಾಟ್ಸಾಪ್‌ ನೆರವು ಪಡೆಯಬಹುದಾಗಿದ್ದು, ಲಿಂಕ್ ಮೂಲಕ ಶುಲ್ಕ ಪಾವತಿಸಬಹುದಾಗಿದೆ.

ಇವಿ ವಾಹನಗಳ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ದೇಶದಲ್ಲೇ ಅತಿ ಹೆಚ್ಚು ಚಾರ್ಚಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಿರುವ ಕರ್ನಾಟಕ ಇದೀಗ ಹೊಸ ಆ್ಯಪ್ ಅಭಿವೃದ್ಧಿಪಡಿಸಿದೆ. ಈ ತಂತ್ರಜ್ಞಾನವು ಇಂಧನ ಕ್ಷೇತ್ರವನ್ನು ಮುಂಚೂಣಿಯತ್ತ ಕೊಂಡೊಯ್ಯಲು ನೆರವಾಗಲಿದೆ ಎಂಬುದಾಗಿ ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತವು ರಾಜ್ಯದಲ್ಲಿ ಇವಿ ಚಾರ್ಜಿಂಗ್ ಮೂಲಸೌಕರ್ಯವನ್ನು ಕಲ್ಪಿಸುವ ನೋಡೆಲ್‌ ಏಜೆನ್ಸಿಯಾಗಿದೆ. ಇವಿ ಚಾರ್ಜಿಂಗ್ ಸ್ಟೇಷನ್‌ಗಳ ಜಾಲ ವಿಸ್ತರಣೆ ಮತ್ತು ಉತ್ತಮ ನಿರ್ವಹಣೆಗೆ ಒತ್ತು ನೀಡುವ ಬೆಸ್ಕಾಂ ಈ ಹೊಸ ಇಂಟರ್‌ಫೇಸನ್ನು ಗ್ರಾಹಕರಿಗೆ ಪರಿಚಯಿಸಿದೆ. ಇವಿ ಬಳಕೆದಾರರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಈಗಾಗಲೇ 15 ಸಾವಿರಕ್ಕೂ ಹೆಚ್ಚು ಬಳಕೆದಾರರು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ ಎಂಬುದೇ ಸಂತಸದ ವಿಷಯ ಅಂತ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬಿಳಗಿ ತಿಳಿಸಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆಯ ಅನುದಾನ ಬಿಡುಗಡೆಗೊಳಿಸಿ: ಕೇಂದ್ರ ಸರ್ಕಾರಕ್ಕೆ ಸಚಿವ ಹೆಚ್.ಕೆ ಪಾಟೀಲ್ ಒತ್ತಾಯ

ಹೊಯ್ಸಳ-ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

BIG UPDATE : ಯಜಮಾನಿಯರಿಗೆ ಗುಡ್ ನ್ಯೂಸ್ : ಕೊನೆಗೂ 1 ತಿಂಗಳ ‘ಗೃಹಲಕ್ಷ್ಮಿ’ ಹಣ ಖಾತೆಗೆ ಜಮಾ!

Share. Facebook Twitter LinkedIn WhatsApp Email

Related Posts

ಅಂತಿಮ ಘಟ್ಟಕ್ಕೆ ತಲುಪಿದ ವಿಧಾನ ಪರಿಷತ್ ಚುನಾವಣೆ : ಈವರೆಗೆ ಒಟ್ಟು 221 ಶಾಸಕರಿಂದ ಮತ ಚಲಾವಣೆ!

2 Mins Read

BIG NEWS : ರಾಜ್ಯದಲ್ಲಿ ಹೋಂಸ್ಟೇ ನಿಯಂತ್ರಣಕ್ಕೆ ಸಮಗ್ರ ನೀತಿ ರೂಪಿಸಲು, ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ

2 Mins Read

BREAKING : ಬಿಜೆಪಿಗೆ ಮತ ಹಾಕುವುದಾಗಿ ಶಾಸಕ ಯತ್ನಾಳ್ ಪತ್ರ : ಚುನಾವಣಾಧಿಕಾರಿಗೆ ದೂರು ನೀಡಿದ ಕಾಂಗ್ರೆಸ್

2 Mins Read
Recent News

ಅಂತಿಮ ಘಟ್ಟಕ್ಕೆ ತಲುಪಿದ ವಿಧಾನ ಪರಿಷತ್ ಚುನಾವಣೆ : ಈವರೆಗೆ ಒಟ್ಟು 221 ಶಾಸಕರಿಂದ ಮತ ಚಲಾವಣೆ!

BIG NEWS : ರಾಜ್ಯದಲ್ಲಿ ಹೋಂಸ್ಟೇ ನಿಯಂತ್ರಣಕ್ಕೆ ಸಮಗ್ರ ನೀತಿ ರೂಪಿಸಲು, ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ

BREAKING : ಬಿಜೆಪಿಗೆ ಮತ ಹಾಕುವುದಾಗಿ ಶಾಸಕ ಯತ್ನಾಳ್ ಪತ್ರ : ಚುನಾವಣಾಧಿಕಾರಿಗೆ ದೂರು ನೀಡಿದ ಕಾಂಗ್ರೆಸ್

SHOCKING : ಮನೆಯ ಹೊರಗೆ, ಬೆಡ್ ರೂಮ್ ನಲ್ಲೂ `CCTV’ ಅಳವಡಿಸಿದ್ದ ಪಾಪಿ ಪತಿ : ಮದುವೆಯಾಗಿ 48 ದಿನಗಳಲ್ಲೇ ನವವಿವಾಹಿತೆ ಆತ್ಮಹತ್ಯೆ.!

State News
KARNATAKA

ಅಂತಿಮ ಘಟ್ಟಕ್ಕೆ ತಲುಪಿದ ವಿಧಾನ ಪರಿಷತ್ ಚುನಾವಣೆ : ಈವರೆಗೆ ಒಟ್ಟು 221 ಶಾಸಕರಿಂದ ಮತ ಚಲಾವಣೆ!

By ಸುರೇಶ್‌ KARNATAKA 2 Mins Read

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಸ್ಥಾನಗಳಿಗೆ ಇಂದು (ಗುರುವಾರ) ವಿಧಾನಸೌಧದಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಬೆಳಿಗ್ಗೆಯಿಂದಲೇ ಶಾಸಕರು ಸರದಿಯಲ್ಲಿ ಬಂದು…

BIG NEWS : ರಾಜ್ಯದಲ್ಲಿ ಹೋಂಸ್ಟೇ ನಿಯಂತ್ರಣಕ್ಕೆ ಸಮಗ್ರ ನೀತಿ ರೂಪಿಸಲು, ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ

BREAKING : ಬಿಜೆಪಿಗೆ ಮತ ಹಾಕುವುದಾಗಿ ಶಾಸಕ ಯತ್ನಾಳ್ ಪತ್ರ : ಚುನಾವಣಾಧಿಕಾರಿಗೆ ದೂರು ನೀಡಿದ ಕಾಂಗ್ರೆಸ್

BIG NEWS : ರೇಣುಕಾ ಸ್ವಾಮಿ ಕೊಲೆ ಕೇಸ್ : ಹೈಕೋರ್ಟ್ ನಲ್ಲಿರುವ ಪ್ರಕರಣದಿಂದ ನಿವೃತ್ತಿಯಾದ ದರ್ಶನ್ ಪರ ವಕೀಲ ಸುನಿಲ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.