ಬೆಂಗಳೂರು: ರಾಜ್ಯ ಸರ್ಕಾರದಿಂದ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಹೊರ ಬಿದ್ದಿದೆ. ಇನ್ಮುಂದೆ ವೇತನ ಮತ್ತು ಭತ್ಯೆಗಳನ್ನು ರಾಜ್ಯದ ಸಂಚಿತ ನಿಧಿಯಿಂದಲೇ ನೀಡುವುದಾಗಿ ಆದೇಶ ಮಾಡಿದೆ.
ಈ ಸಂಬಂಧ ಧಾರ್ಮಿಕ ದತ್ತಿಯ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಉಲ್ಲೇಖಿತ(1)ರ ಪ್ರಸ್ತಾವನೆ ಕುರಿತು, ಉಲ್ಲೇಖಿತ(2)ರ ಆರ್ಥಿಕ ಇಲಾಖೆಯ ಟಿಪ್ಪಣಿಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 131 ಸರ್ಕಾರಿ ಅಧಿಕಾರಿ/ನೌಕರರ ವೇತನ ಮತ್ತಿತರ ಭತ್ಯೆಗಳನ್ನು ರಾಜ್ಯ ಸರ್ಕಾರದ ಸಂಚಿತ ನಿಧಿಯಿಂದ ಪಾವತಿಸಲು ಆರ್ಥಿಕ ಇಲಾಖೆಯು ಸಹಮತಿ ನೀಡಿರುತ್ತದೆ ಎಂದಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 131 ಅಧಿಕಾರಿ/ಸಿಬ್ಬಂದಿಗಳ ವೇತನಕ್ಕೆ ಅನುದಾನವನ್ನು ಲೆಕ್ಕ ಶೀರ್ಷಿಕೆ:2250-00-102-4-00 ಹಿಂದೂ ಧಾರ್ಮಿಕ ಸಂಸ್ಥೆಗಳು & ಧರ್ಮಾದಾಯ ದತ್ತಿಗಳು ಅಡಿ ಒದಗಿಸಲಾಗುವುದು. DDO ರವರು ಈ ಲೆಕ್ಕಶೀರ್ಷಿಕೆ ಅನ್ನು ಮ್ಯಾಪ್ ಮಾಡಿಕೊಳ್ಳುವಂತೆ ಹಾಗೂ ಈ ಅಧಿಕಾರಿ ಸಿಬ್ಬಂದಿಗಳ ವಿವರಗಳನ್ನು HRMS ನಲ್ಲಿ ದಾಖಲಿಸುವಂತೆ ತಿಳಿಸಿದೆ. ಈ ರೀತಿ ಮ್ಯಾಪ್ ಮಾಡಿ HRMS ಪುಕ್ರಿಯೆ ಮುಗಿದ ನಂತರ ಹೆಚ್ಚುವರಿ ಅನುದಾನದ ಅಗತ್ಯತೆಯನ್ನು ಅಂದಾಜು ಮಾಡಿ 2025-26 ನೇ ಸಾಲಿನ ಏಪ್ರಿಲ್-ಮೇ ರಲ್ಲಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಿದಲ್ಲಿ ಪುನರ್-ವಿನಿಯೋಗದ ಮೂಲಕ ಹೆಚ್ಚುವರಿ ಒದಗಿಸಲಾಗುವುದೆಂದು ಆರ್ಥಿಕ ಇಲಾಖೆಯು ತಿಳಿಸಿರುತ್ತದೆ ಎಂದು ಹೇಳಿದ್ದಾರೆ.
ಆರ್ಥಿಕ ಇಲಾಖೆಯು ಸೂಚಿಸಿರುವಂತೆ ಜರೂರಾಗಿ ಅಗತ್ಯ ಕ್ರಮಕೈಗೊಳ್ಳುವಂತೆ ಮತ್ತು ಈ ಹೆಚ್ಚುವರಿ ಅನುದಾನದ ಅಗತ್ಯತೆಯನ್ನು ಅಂದಾಜು ಮಾಡಿ 2025-26 ನೇ ಸಾಲಿನ ಏಪ್ರಿಲ್-ಮೇ ರಲ್ಲಿ ಆರ್ಥಿಕ ಇಲಾಖೆಗೆ ಪುಸ್ತಾವನೆಯನ್ನು ಸಲ್ಲಿಸಲು ಅನುವಾಗುವಂತೆ ಪೂರ್ಣವಿವರಗಳೊಂದಿಗೆ ಮಾಹಿತಿ ಸಲ್ಲಿಸುವಂತೆ ತಮ್ಮನ್ನು ಕೋರಲು ನಿರ್ದೇಶಿಸಲ್ಪಟ್ಟಿದ್ದೇನೆ ಎಂದಿದ್ದಾರೆ.
ಸಚಿವ ರಾಮಲಿಂಗಾರೆಡ್ಡಿಗೆ ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘದಿಂದ ಧನ್ಯವಾದ
ಇನ್ನೂ ಈ ಆದೇಶಕ್ಕೆ ಕಾರಣಕರ್ತರಾದ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿಯವರಿಗೆ, ಪ್ರಧಾನ ಕಾರ್ಯದರ್ಶಿ, ಆಯುಕ್ತರು ಎಲ್ಲರಿಗೂ ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀವತ್ಸ ಅವರು ಧನ್ಯವಾದ ಸಲ್ಲಿಸಿದ್ದಾರೆ.
ಮುಜರಾಯಿ ಇಲಾಖೆ ಇತಿಹಾಸದಲ್ಲೇ ಎ ಮತ್ತು ಬಿ ವರ್ಗಗಳ ದೇವಾಲಯಗಳಲ್ಲಿ ಪ್ರತಿ ತಿಂಗಳು ರೂ 2 ಕೋಟಿಯಿಂದ 3 ಕೋಟಿಯವರಿಗೂ ಉಳಿತಾಯವಾಗಲಿದೆ. ಅರ್ಚಕರ ಸಂಘವು 2020 ರಲ್ಲಿ ರಾಜ್ಯದ ಎ ಮತ್ತು ಬಿ ವರ್ಗಗಳ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸರ್ಕಾರಿ ನೌಕರರಿಗೆ ದೇವಾಲಯಗಳ ಹಣದಿಂದ ಕಾಯ್ದೆ ನಿಯಮಗಳ ಪ್ರಕಾರ ವೇತನ ಇತರೆ ಸೌಲಭ್ಯಗಳನ್ನು ಕೊಡುವಂತಿಲ್ಲ. ಸರ್ಕಾರದ ಸಂಚಿತ ನಿಧಿಯಿಂದ ನೀಡಬೇಕೆಂದು ಇರುತ್ತದೆ. ಆದರೆ ಹಿಂದಿನ ಅದಿಕಾರಿಗಳ ಹಣದಾಹ. ದುರ್ಬುದ್ದಿಯಿಂದ ಕಾಯ್ದೆ ನಿಯಮ, ಕಾನೂನು ಅರಿವಿಲ್ಲದ ಅದಿಕಾರಿಗಳಿಂದ ಇದುವರೆಗೂ ಕೋಟ್ಯಾಂತರ ರೂಪಾಯಿ ಹಣ ದುರ್ಬಳಕೆಯಾಗುತ್ತಿತ್ತು. ಈ ಬಗ್ಗೆ ನಮ್ಮ ಸಂಘವು 2020 ರಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೂ ಮುಜರಾಯಿ ಸಚಿವರಿಗೂ. ಮುಖ್ಯ ಕಾರ್ಯದರ್ಶಿಗಳಿಗೂ ಆರ್ಥಿಕ ಇಲಾಖೆಯ ಪ್ರಧಾನಕಾರ್ಯದರ್ಶಿಗಳಿಗೂ, ಮುಜರಾಯಿ ಇಲಾಖೆಯ ಪ್ರ.ಕಾರ್ಯದರ್ಶಿಗಳಿಗೂ ಮನವಿ ಮಾಡಿತ್ತು ಎಂಬ ಎಂದಿದ್ದಾರೆ.
ನಮ್ಮ ಸಂಘದ ಮನವಿಗೆ 131 ಅದಿಕಾರಿ ಸಿಬ್ಬಂದಿಗಳಿಗೆ ಸರ್ಕಾರದಿಂದಲ್ಲೆ ವೇತನ ಇತರೆ ಸೌಲಭ್ಯಗಳನ್ನು ಪಡೆಯಲು ಆರ್ಥಿಕ ಇಲಾಖೆಯವರು ಆದೇಶ ಮಾಡಿದ್ದಾರೆ. ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರ ಆಸಕ್ತಿ ಮತ್ತು ಪ್ರಯತ್ನದಿಂದ ಒಂದು ಅತ್ಯಂತ ಮಹತ್ವದ ಆದೇಶ ಹೊರಬಿದ್ದಿದ್ದು ದೇವಾಲಯಗಳ ಕೋಟ್ಯಾಂತರ ರೂಪಾಯಿ ಉಳಿಸಿದ ಕೆಲಸವಾಗಿದೆ ಎಂದು ಹೇಳಿದ್ದಾರೆ.