ಬೆಂಗಳೂರು : ರಾಜ್ಯದ ಸಿ.ಟಿ.ಇ/ಡಯಟ್/ಟಿಟಿಐಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂಧಿಗಳ ಮಾರ್ಚ್-2024ರ ವೇತನ ವೆಚ್ಚಕ್ಕಾಗಿ ಅನುದಾನ ಬಿಡುಗಡೆ ಮಾಡಲಾಗಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಪತ್ರದಲ್ಲಿ ಮಾರ್ಚಿ-2024 ರಿಂದ ಮೇ-2024 ರವರೆಗಿನ ರಾಜ್ಯದ ಸಿ.ಟಿ.ಇ/ಡಯಟ್/ಟಿಟಿಐಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂಧಿಗಳ ವೇತನಕ್ಕೆ ಅನುದಾನ ಬಿಡುಗಡೆಯಾಗಿರುತ್ತದೆ.
* ಬಿಡುಗಡೆಯಾದ ಅನುದಾನದಲ್ಲಿ ಮಾರ್ಚಿ-2024ರ ವೇತನ ವೆಚ್ಚಕ್ಕಾಗಿ ಮಾತ್ರ ಈ ಕೆಳಕಂಡ ಷರತ್ತುಗೊಳಪಟ್ಟು ಅನುದಾನ ಬಿಡುಗಡೆ ಮಾಡಿದೆ.
ಷರತ್ತುಗಳು:
1. ಬಿಡುಗಡೆಯಾದ ಅನುದಾನದಲ್ಲಿ ಮಾರ್ಚಿ-2024ರ ವೇತನ ಸೆಳೆಯಲು ಮಾತ್ರ ಅನುಮತಿ ನೀಡಿದೆ.
2. ಮಾರ್ಚಿ-2024ರ ವೇತನ ಹೊರತು ಪಡಿಸಿ ವೇತನ ಭಾಕಿ ಬಿಲ್ಲುಗಳು, ಗಳಿಕೆ ರಜೆ ನಗದೀಕರಣ ಹಾಗೂ ಹಬ್ಬದ ಮುಂಗಡಗಳನ್ನು ಸಳೆಯಲು ಅವಕಾಶ ನೀಡಿರುವುದಿಲ್ಲ.
3. ಮಾರ್ಚಿ-2024ರ ವೇತನ ಹೊರತು ಪಡಿಸಿ ಬೇರೆ ಬಿಲ್ಲುಗಳನ್ನು ಸೆಳೆದಲ್ಲಿ ಅಂತಹ ಪ್ರಾಂಶುಪಾಲರ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು.
3. ಪ್ರತಿ ತಿಂಗಳು 5ನೇ ತಾರಿಖಿನೊಳಗೆ 62ಬಿಯನ್ನು ಈ ಕಚೇರಿಗೆ ಇ-ಮೇಲ್ ಮುಖಾಂತರ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ ವಿಳಂಬವಾದಲ್ಲಿ ಸಂಬಂಧಿಸಿದ ಪ್ರಾಂಶುಪಾಲರುಗಳೇ ಜವಾಬ್ದಾರರಾಗುತ್ತಾರೆ.