Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಒಬ್ಬನೂ ಜೀವಂತವಾಗಿ ಉಳಿಯಬಾರದು!’: ಭೂಸೇನಾ ಕಾರ್ಯಾಚರಣೆ ನಡೆಸುವ ಶತ್ರುಗಳಿಗೆ ಇರಾನ್ ಸೇನಾ ಮುಖ್ಯಸ್ಥರ ಭೀಕರ ಎಚ್ಚರಿಕೆ!

02/04/2026 8:21 PM

​ಹಾರ್ಮುಜ್ ಜಲಸಂಧಿ ಬಂದ್: ದಿಗ್ಬಂಧನ ತೆರವುಗೊಳಿಸಲು ಅಂತರಾಷ್ಟ್ರೀಯ ಒಕ್ಕೂಟ ಸೇರಿದ ಭಾರತ!

02/04/2026 8:11 PM

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳಿಗೆ ಮುಕ್ತ ಅವಕಾಶ; ಸಂಕಷ್ಟದ ನಡುವೆಯೂ ಸ್ನೇಹ ಹಸ್ತ ಚಾಚಿದ ಇರಾನ್!

02/04/2026 8:02 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶ್ವಾನ ಪ್ರಿಯರಿಗೆ ಗುಡ್ ನ್ಯೂಸ್ : `BBMP’ ಯಿಂದ ಅ.17 ಕ್ಕೆ `ನಾಯಿಗಳಿಗಾಗಿ ಉತ್ಸವ’ ಆಚರಣೆ
KARNATAKA

ಶ್ವಾನ ಪ್ರಿಯರಿಗೆ ಗುಡ್ ನ್ಯೂಸ್ : `BBMP’ ಯಿಂದ ಅ.17 ಕ್ಕೆ `ನಾಯಿಗಳಿಗಾಗಿ ಉತ್ಸವ’ ಆಚರಣೆ

By kannadanewsnow5712/10/2024 12:06 PM

ಬೆಂಗಳೂರು : ಪ್ರಾಣಿಗಳೊಂದಿಗೆ ಸಾಮರಸ್ಯದ ಸಹಬಾಳ್ವೆಯು ನಮ್ಮ ಸುತ್ತಲಿನ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ನಿರ್ಣಾಯಕವಾಗಿದೆ. ಪ್ರಾಣಿಗಳ ಜನನ ನಿಯಂತ್ರಣ ಮತ್ತು ವ್ಯಾಕ್ಸಿನೇಷನ್‌ಗಳ ಹೊರತಾಗಿ, ಪ್ರಾಣಿಗಳ ನಡವಳಿಕೆಯನ್ನು ಅರ್ಥಮಾಡಿಕೊಂಡು, ಪ್ರಕೃತಿ ಅವುಗಳನ್ನು ರಚಿಸಿದ ರೀತಿಯಲ್ಲಿ ಅವುಗಳನ್ನು ಒಪ್ಪಿಕೊಳ್ಳುವುದು ಸಹ ಮುಖ್ಯವಾದ ವಿಷಯ.

ಸಹವರ್ತಿನ್ ಅನಿಮಲ್ ವೆಲ್‌ಫೇರ್ ಟ್ರಸ್ಟ್ ಮತ್ತು ಇತರ ಆಸಕ್ತ ಸಂಸ್ಥೆಗಳೊಂದಿಗೆ ಪಾಲಿಕೆಯ ಪಶುಸಂಗೋಪನೆ ವಿಭಾಗವು ಮುಂಬರುವ ದಿನಗಳಲ್ಲಿ COEXISTENCECAMPUONLOCALITY & #BITEFREELOCALITY ಎಂಬ ಯೋಜನೆಯ ಅಡಿಯಲ್ಲಿ, ಪ್ರಾಣಿಗಳಿಗೆ ಮಾನವೀಯ ವಾತಾವರಣವನ್ನು ನಿರ್ಮಿಸುವಲ್ಲಿ ಹಾಗೂ ಮಾನವ-ಪ್ರಾಣಿ ಸಂಘರ್ಷಗಳನ್ನು ಕಡಿಮೆ ಮಾಡಲು ಅನೇಕ ಉಪಕ್ರಮಗಳನ್ನು ಹಮ್ಮಿಕೊಳ್ಳಲಿದೆ.

ಈ ಕಾರ್ಯಕ್ರಮದ ಮೂಲಕ ಪ್ರತಿ ವಾರ್ಡ್ಗಳಲ್ಲಿ ಸಹಬಾಳ್ವೆಯ ಚಾಂಪಿಯನ್ ಗಳನ್ನು ಸಕ್ರಿಯಗೊಳಿಸುವ ನಿರ್ಧಾರ ಸಹ ಮಾಡಲಾಗಿದೆ.

ನಾಯಿಗಳಿಗಾಗಿ ಉತ್ಸವ:

ಸಮಾಜದಲ್ಲಿ ಕಡಿತ ಹಾಗೂ ದಾಳಿಯ ಭಯದಿಂದ ನಾಯಿಗಳ ಮೇಲೆ ಕೇವಲ ನಕಾರಾತ್ಮಕ ಭಾವನೆಯು ಹೆಚ್ಚಾಗುತ್ತಿದೆ. ಆದರೆ ನಾಯಿಗಳು ಬಹಳ ನಿಷ್ಠಾವಂತ, ವಿಧೇಯ, ರಕ್ಷಣಾತ್ಮಕ ಹಾಗೂ ಭಾವನಾತ್ಮಕ ಬೆಂಬಲ ನೀಡುವಂತ ಪ್ರಾಣಿಯೂ ಆಗಿದೆ.

ಪ್ರಾಣಿಗಳೊಂದಿಗಿನ ಸಂಘರ್ಶ ನಿರ್ವಹಿಸಲು, ರೇಬೀಸ್ ಕಾಯಿಲೆಯನ್ನು ತಡೆಗಟ್ಟುವ ಕ್ರಮಗಳನ್ನು ಪ್ರತಿಪಾದಿಸುತ್ತಿದ್ದರೂ, ಸಮಾಜಕ್ಕೆ ನಾಯಿಗಳ ಸಕಾರಾತ್ಮಕ ಕೊಡುಗೆಗಳನ್ನು ಆಚರಿಸಲು ಮತ್ತು ಎತ್ತಿ ತೋರಿಸಲು ನಾವು ಉತ್ಸುಕರಾಗಿದ್ದೇವೆ.

17ನೇ ಅಕ್ಟೋಬರ್ 2024 ರಂದು ನಾಯಿಗಳೊಂದಿಗಿನ ಪ್ರೀತಿ ಮತ್ತು ಬಾಂಧವ್ಯದ ಕಥೆಗಳನ್ನು ಹಂಚಿಕೊಳ್ಳುತ್ತಾ,
ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳನ್ನು ಹಾಗು ಪ್ರಾಣಿಗಳ ಪಾಲಕರನ್ನು ಒಟ್ಟುಗೂಡಿಸುವ ಮೂಲಕ ಪಾಲಿಕೆಯು ನಾಯಿಗಳಿಗೆಂದು ಉತ್ಸವ(Kukur Tihar)ವನ್ನು ಆಚರಿಸಲು ನಿರ್ಧರಿಸಿದೆ.

ಪೌರಕಾರ್ಮಿಕರ ಸಹಯೋಗ:

ಇದೇ ಉತ್ಸವದ ದಿನದಂದು, ಬಿಬಿಎಂಪಿಯು ಆಯಾ ವಾರ್ಡಿನ ರೆಸ್ಟೋರೆಂಟ್‌ಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ, ಸಮುದಾಯದ ನಾಯಿಗಳಿಗೆ ಆಹಾರ ನೀಡುವಲ್ಲಿ ಸಹಾಯ ಮಾಡಲು 4 ವಾರ್ಡ್‌ಗಳ ಪೌರಕಾರ್ಮಿಕರ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ಆಹಾರ ನೀಡುವ ಕಾರ್ಯವನ್ನು ಪ್ರಾರಂಭಿಸಲಿದೆ.

ಈ ಯೋಜನೆಯು ಮುಂದುವರೆದಂತೆ, ನಾವು ಪ್ರತಿ ವಾರ್ಡಿನಲ್ಲಿಯೂ ಆರೈಕೆದಾರರೊಂದಿಗೆ ರೆಸ್ಟೋರೆಂಟ್‌ಗಳನ್ನು ಸಂಪರ್ಕಿಸುವ ಮೂಲಕ, ಉಳಿದ ಆಹಾರವನ್ನು ಸದುಪಯೋಗಿಸುವ ನಿರ್ಧಾರ ಪಾಲಿಕೆಯು ಮಾಡಿದೆ. ಈ ರೀತಿಯಲ್ಲಿ ನಾಯಿಗಳಿಗೆ ನಿರಂತರವಾಗಿ ಪ್ರತಿದಿನ ಒಂದು ಬಾರಿ ಆಹಾರವನ್ನು ನೀಡಲಾಗುತ್ತದೆ.

ಪ್ರಾಣಿ ಪಾಲಕರ ನೋಂದಣಿ:

ನಿಮ್ಮ ವಾರ್ಡ್‌ನಿಂದ ಸ್ವಯಂಸೇವಕರಾಗಿ ಮುಂಬರುವ ಎಲ್ಲಾ ಉಪಕ್ರಮಗಳಲ್ಲಿ ಬಾಗಿಯಾಗಲು ನೀವು ಉತ್ಸುಕರಾಗಿದ್ದರೆ, ದಯವಿಟ್ಟು ಕೆಳಗಿನ ಕ್ಯೂ-ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ, ನಮೂನೆಯನ್ನು 15ನೇ ಅಕ್ಟೋಬರ್ 2024ರ ಒಳಗೆ ಭರ್ತಿ ಮಾಡಿ. ಯಾವುದೇ ಸಂದೇಹವಿದ್ದಲ್ಲಿ, ಮಾಹಿತಿಗಾಗಿ 1533 ಅನ್ನು ಸಂಪರ್ಕಿಸಿ.

Good news for dog lovers: BBMP to celebrate 'Festival for Dogs' on October 17 ಶ್ವಾನ ಪ್ರಿಯರಿಗೆ ಗುಡ್ ನ್ಯೂಸ್ : `BBMP' ಯಿಂದ ಅ.17 ಕ್ಕೆ `ನಾಯಿಗಳಿಗಾಗಿ ಉತ್ಸವ' ಆಚರಣೆ
Share. Facebook Twitter LinkedIn WhatsApp Email

Related Posts

BREAKING: ರಾಜ್ಯದ ‘ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ’ದ 2026-31ರ ಅವಧಿಯ ಚುನಾವಣಾ ವೇಳಾಪಟ್ಟಿ ಪ್ರಕಟ

02/04/2026 7:53 PM1 Min Read

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: 1 ರಿಂದ 9ನೇ ತರಗತಿ ವಿದ್ಯಾರ್ಥಿಗಳ ‘BMTC ಬಸ್ ಪಾಸ್’ ಅವಧಿ ವಿಸ್ತರಣೆ

02/04/2026 7:14 PM1 Min Read

ಸಾಲದ ಬಾಧೆಯಿಂದ ಹೊರಬರಲು ಈ ಸಿದ್ಧ ಪೂಜೆಯನ್ನು ಮಾಡಿ, ಹಣದ ಸಮಸ್ಯೆ ಪರಿಹಾರ

02/04/2026 7:09 PM3 Mins Read
Recent News

‘ಒಬ್ಬನೂ ಜೀವಂತವಾಗಿ ಉಳಿಯಬಾರದು!’: ಭೂಸೇನಾ ಕಾರ್ಯಾಚರಣೆ ನಡೆಸುವ ಶತ್ರುಗಳಿಗೆ ಇರಾನ್ ಸೇನಾ ಮುಖ್ಯಸ್ಥರ ಭೀಕರ ಎಚ್ಚರಿಕೆ!

02/04/2026 8:21 PM

​ಹಾರ್ಮುಜ್ ಜಲಸಂಧಿ ಬಂದ್: ದಿಗ್ಬಂಧನ ತೆರವುಗೊಳಿಸಲು ಅಂತರಾಷ್ಟ್ರೀಯ ಒಕ್ಕೂಟ ಸೇರಿದ ಭಾರತ!

02/04/2026 8:11 PM

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳಿಗೆ ಮುಕ್ತ ಅವಕಾಶ; ಸಂಕಷ್ಟದ ನಡುವೆಯೂ ಸ್ನೇಹ ಹಸ್ತ ಚಾಚಿದ ಇರಾನ್!

02/04/2026 8:02 PM

BREAKING: ರಾಜ್ಯದ ‘ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ’ದ 2026-31ರ ಅವಧಿಯ ಚುನಾವಣಾ ವೇಳಾಪಟ್ಟಿ ಪ್ರಕಟ

02/04/2026 7:53 PM
State News
KARNATAKA

BREAKING: ರಾಜ್ಯದ ‘ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ’ದ 2026-31ರ ಅವಧಿಯ ಚುನಾವಣಾ ವೇಳಾಪಟ್ಟಿ ಪ್ರಕಟ

By kannadanewsnow0902/04/2026 7:53 PM KARNATAKA 1 Min Read

ಬೆಂಗಳೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2026 ರಿಂದ 2031ರ ಅವಧಿಗಾಗಿ ವಿವಿಧ ಹಂತಗಳ ಚುನಾವಣೆಗೆ ಅಧಿಕೃತ…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: 1 ರಿಂದ 9ನೇ ತರಗತಿ ವಿದ್ಯಾರ್ಥಿಗಳ ‘BMTC ಬಸ್ ಪಾಸ್’ ಅವಧಿ ವಿಸ್ತರಣೆ

02/04/2026 7:14 PM

ಸಾಲದ ಬಾಧೆಯಿಂದ ಹೊರಬರಲು ಈ ಸಿದ್ಧ ಪೂಜೆಯನ್ನು ಮಾಡಿ, ಹಣದ ಸಮಸ್ಯೆ ಪರಿಹಾರ

02/04/2026 7:09 PM

ಸಾಗರ ತಾಲ್ಲೂಕು ತಹಶೀಲ್ದಾರ್ ಆಗಿ ಪ್ರದೀಪ್.ಆರ್ ನೇಮಕ, ರಶ್ಮಿ.ಹೆಚ್.ಜೆ ಕರ್ತವ್ಯದಿಂದ ಬಿಡುಗಡೆ

02/04/2026 6:59 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.