Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಜೇಡ ಕಡಿತ’ ಅಪಾಯಕಾರಿಯೇ.? ಜೇಡ ಕಚ್ಚಿದ್ರೆ ಏನಾಗುತ್ತೆ ಗೊತ್ತಾ?

22/03/2026 10:09 PM

ಅಂತರಂಗದ ಬದುಕಿಗೆ ಲಗ್ಗೆ ಇಟ್ಟ AI; ಈಗ ‘AI-ಸೆಕ್ಷುವಲ್’ ಹೊಸ ಟ್ರೆಂಡ್! | AI-sexual

22/03/2026 9:41 PM

ಇಸ್ರೇಲ್ – ಇರಾನ್ ವಾರ್ ಎಫೆಕ್ಟ್; ವಿಮಾನಯಾನ ಸಂಸ್ಥೆಗಳಿಗೆ ಬರೋಬ್ಬರಿ 5,000 ಕೋಟಿ ನಷ್ಟ

22/03/2026 9:38 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗ್ರಾಹಕರಿಗೆ ಗುಡ್ ನ್ಯೂಸ್ : ದೀರ್ಘಕಾಲದವರೆಗೆ ಪಡೆಯದೆ ಉಳಿದ ಬ್ಯಾಂಕ್ ಠೇವಣಿ, ವಿಮಾ ಕಂತು, ಷೇರು ವಾರಸುದಾರರಿಗೆ ಹಸ್ತಾಂತರ
KARNATAKA

ಗ್ರಾಹಕರಿಗೆ ಗುಡ್ ನ್ಯೂಸ್ : ದೀರ್ಘಕಾಲದವರೆಗೆ ಪಡೆಯದೆ ಉಳಿದ ಬ್ಯಾಂಕ್ ಠೇವಣಿ, ವಿಮಾ ಕಂತು, ಷೇರು ವಾರಸುದಾರರಿಗೆ ಹಸ್ತಾಂತರ

By kannadanewsnow5706/12/2025 12:09 PM

ಚಿತ್ರದುರ್ಗ : ದೀರ್ಘಕಾಲದವರೆಗೆ ಹಕ್ಕು ಪಡೆಯದೆ ಉಳಿದಿರುವ ಬ್ಯಾಂಕ್ ಠೇವಣಿಗಳು, ವಿಮಾ ಕಂತುಗಳು ಮತ್ತು ಷೇರುಗಳನ್ನು ಅವುಗಳ ಮಾಲೀಕರು ಅಥವಾ ಕಾನೂನುಬದ್ಧ ವಾರಸುದಾರರಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಬ್ಯಾಂಕ್ ಅಧಿಕಾರಿಗಳು, ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸ್ವ-ಸಹಾಯ ಗುಂಪುಗಳ ನೆರವು ಪಡೆಯುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿಯ ಮಿನಿ ಸಭಾಂಗಣದಲ್ಲಿ ಶುಕ್ರವಾರ ಹಕ್ಕು ಪಡೆಯದ ಬ್ಯಾಂಕ್ ಠೇವಣಿಗಳ ಇತ್ಯರ್ಥಕ್ಕಾಗಿ ಹಮ್ಮಿಕೊಂಡಿದ್ದ ವಿಶೇಷ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತಾಲ್ಲೂಕುವಾರು ಬ್ಯಾಂಕಿನ ಪ್ರತಿ ಶಾಖೆಯಲ್ಲಿ ಧೀರ್ಘ ಕಾಲದವರೆಗೆ ಹಕ್ಕು ಪಡೆಯದೇ ಉಳಿದಿರುವ ಬ್ಯಾಂಕ್ ಠೇವಣಿಗಳ ವಾರಸುದಾರರ ಮಾಹಿತಿಯೊಂದಿಗೆ ಬ್ಯಾಂಕ್ ಅಧಿಕಾರಿಗಳು ಗ್ರಾಮ ಪಂಚಾಯಿತಿ, ಸ್ವ-ಸಹಾಯ ಗುಂಪುಗಳ ಸದಸ್ಯರ ಸಹಕಾರ ಪಡೆದು, ಸಂಬಂಧಪಟ್ಟ ವಾರಸುದಾರರನ್ನು ಗುರುತಿಸಿ, ಠೇವಣಿ ಮೊತ್ತವನ್ನು ಸಂಬಂಧಪಟ್ಟವರಿಗೆ ತಲುಪಿಸಬೇಕು. ಈ ಸಂಬಂಧ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಸರ್ಕಾರಿ ಇಲಾಖೆಗಳೂ ಸೇರಿದಂತೆ 3.08 ಲಕ್ಷಕ್ಕೂ ಹೆಚ್ಚು ಹಕ್ಕು ಪಡೆಯದ ಠೇವಣಿ, ನಿಷ್ಕ್ರಿಯ ಖಾತೆಗಳಿಂದ ರೂ.67 ಕೋಟಿ ಹಣ ಸಂಗ್ರಹವಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್ ಒಂದರಲ್ಲಿಯೇ ಸುಮಾರು 1.40 ಲಕ್ಷಕ್ಕೂ ಹೆಚ್ಚು ನಿಷ್ಕ್ರಿಯವಾಗಿರುವ ಬ್ಯಾಂಕ್ ಖಾತೆಗಳಿಂದ ರೂ.23 ಕೋಟಿ ಹಣವಿದೆ ಎಂದು ತಿಳಿಸಿದ ಅವರು, ಸಂಬಂಧಪಟ್ಟ ಶಾಖೆಯ ವ್ಯವಸ್ಥಾಪಕರ ಪ್ರಗತಿ ಪರಿಶೀಲನೆ ನಡೆಸಿ, ಬ್ಯಾಂಕ್ ಖಾತೆಯನ್ನು ಮುಕ್ತಾಯಗೊಳಿಸಬೇಕು ಅಥವಾ ಸಕ್ರಿಯಗೊಳಿಸಬೇಕು. ಇದರ ಜೊತೆಗೆ ಸಾಮಾಜಿಕ ಭದ್ರತಾ ಯೋಜನೆಗಳಾದ ಪಿಎಂಜೆಜೆವೈ ಹಾಗೂ ಪಿಎಂಎಸ್ಬಿವೈ ಯೋಜನೆಗಳಿಗೆ ಹೆಚ್ಚಿನ ನಾಗರೀಕರು ನೊಂದಣಿಗೆ ಕ್ರಮವಹಿಸಬೇಕು ಎಂದು ತಿಳಿಸಿದರು.

ಆರ್ಬಿಐನ ಮುಖ್ಯ ಪ್ರಬಂಧಕರಾದ ಮೀನಾಕ್ಷಿ ಗುಂಜು ಮಾತನಾಡಿ, ಬ್ಯಾಂಕಿನಲ್ಲಿ ಹೊಸ ಖಾತೆಗಳನ್ನು ತೆರೆಯುವಾಗ ಹೊಸ ನಾಮಿನೇಷನ್ ನಿಯಮಾವಳಿಗಳ ಪ್ರಕಾರ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಹೇಳಿದರು.

ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಎಂ.ರಾಘವೇಂದ್ರ ಮಾತನಾಡಿ, ದೀರ್ಘಕಾಲದವರೆಗೆ ಹಕ್ಕು ಪಡೆಯದೆ ಉಳಿದಿರುವ ಬ್ಯಾಂಕ್ ಠೇವಣಿಗಳು, ವಿಮಾ ಕಂತುಗಳು ಮತ್ತು ಷೇರುಗಳನ್ನು ಅವುಗಳ ಮಾಲೀಕರು ಅಥವಾ ಕಾನೂನುಬದ್ಧ ವಾರಸುದಾರರಿಗೆ ಹಸ್ತಾಂತರಿಸುವ ಸಲುವಾಗಿ ವಿಶೇಷ ಶಿಬಿರ ಆಯೋಜಿಸಲಾಗಿದ್ದು, ಭಾರತದ ಹಣಕಾಸು ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ಬ್ಯಾಂಕಿಂಗ್, ವಿಮೆ ಮತ್ತು ಇತರ ವಲಯಕ್ಕೆ ಸಂಬಂಧಿಸಿದ ಕಚೇರಿ ಶಾಖೆಗಳಲ್ಲಿ ಡಿಸೆಂಬರ್ 31 ರವರೆಗೆ ಮುಂದುವರೆಯುತ್ತದೆ ಎಂದರು.

ಖಾತೆದಾರರು ಅಥವಾ ಕಾನೂನುಬದ್ಧ ವಾರಸುದಾರರು ಬ್ಯಾಂಕಿನಲ್ಲಿ ಸತತ 10 ವರ್ಷಗಳಿಗೂ ಹೆಚ್ಚು ಕಾಲ ನಿಷ್ಕ್ರಿಯವಾಗಿರುವ ಖಾತೆಗಳಲ್ಲಿನ ಹಣ ಮತ್ತು ಕ್ಲೈಮ್ ಮಾಡದ ಠೇವಣಿಗಳನ್ನು ಕ್ಲೈಮ್ ಮಾಡಬಹುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಿಷ್ಕ್ರಿಯಗೊಂಡಿದ್ದ ಬ್ಯಾಂಕ್ ಖಾತೆದಾರರಿಗೆ ಖಾತೆ ಸಕ್ರಿಯಗೊಳಿಸಿರುವ ಕುರಿತ ಪತ್ರಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ಜಯಲಕ್ಷ್ಮೀ, ಕರ್ನಾಟಕ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಜಗನ್ನಾಥ, ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕರಾದ ಅನಿತಾ ಸೇರಿದಂತೆ ವಿವಿಧ ಬ್ಯಾಂಕ್ಗಳು ಅಧಿಕಾರಿಗಳು ಇದ್ದರು

Good news for customers: Bank deposits insurance premiums shares that have been left unclaimed for a long time will be handed over to heirs
Share. Facebook Twitter LinkedIn WhatsApp Email

Related Posts

ದಾವಣಗೆರೆಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿರುದ್ಧ ಅಲ್ಪಸಂಖ್ಯಾತರ ಆಕ್ರೋಶ; ಕೈ ಪಾಳೆಯದಲ್ಲಿ ಭುಗಿಲೆದ್ದ ಅಸಮಾಧಾನ!

22/03/2026 9:33 PM1 Min Read

BIG NEWS: ಸಾಗರದ ಶೆಡ್ತೀಕೆರೆಯಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ: ರಮೇಶ್ ನಾರಾಯಣ್ ಹಾಗೂ ಇತರ ಶಿಕ್ಷಕರ ವಿರುದ್ಧ ‘ಮಕ್ಕಳ ಆಯೋಗ ಸುಮೋಟೋ ಕೇಸ್’ ದಾಖಲು

22/03/2026 9:07 PM2 Mins Read

BIG NEWS: ಮಂಡ್ಯದಲ್ಲಿ ‘LPG ಸಿಲಿಂಡರ್‌’ಗೆ ಮುಗಿಬಿದ್ದ ಜನ: ಪೊಲೀಸ್ ರಕ್ಷಣೆಯಲ್ಲಿ ‘ಗ್ಯಾಸ್‌’ ವಿತರಣೆ

22/03/2026 8:13 PM1 Min Read
Recent News

‘ಜೇಡ ಕಡಿತ’ ಅಪಾಯಕಾರಿಯೇ.? ಜೇಡ ಕಚ್ಚಿದ್ರೆ ಏನಾಗುತ್ತೆ ಗೊತ್ತಾ?

22/03/2026 10:09 PM

ಅಂತರಂಗದ ಬದುಕಿಗೆ ಲಗ್ಗೆ ಇಟ್ಟ AI; ಈಗ ‘AI-ಸೆಕ್ಷುವಲ್’ ಹೊಸ ಟ್ರೆಂಡ್! | AI-sexual

22/03/2026 9:41 PM

ಇಸ್ರೇಲ್ – ಇರಾನ್ ವಾರ್ ಎಫೆಕ್ಟ್; ವಿಮಾನಯಾನ ಸಂಸ್ಥೆಗಳಿಗೆ ಬರೋಬ್ಬರಿ 5,000 ಕೋಟಿ ನಷ್ಟ

22/03/2026 9:38 PM

ಗುಜರಾತ್ ಸಿಎಂಯಿಂದ ಭಾರತದ ಪ್ರಧಾನಿವರೆಗೆ, 24 ವರ್ಷಗಳ ನಿರಂತರ ಸೇವೆ : ಮೋದಿಯ ‘ಅಚಲ ಸಮರ್ಪಣೆ’ಯ ಸ್ಟೋರಿಯಿದು!

22/03/2026 9:33 PM
State News
KARNATAKA

ದಾವಣಗೆರೆಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿರುದ್ಧ ಅಲ್ಪಸಂಖ್ಯಾತರ ಆಕ್ರೋಶ; ಕೈ ಪಾಳೆಯದಲ್ಲಿ ಭುಗಿಲೆದ್ದ ಅಸಮಾಧಾನ!

By kannadanewsnow0922/03/2026 9:33 PM KARNATAKA 1 Min Read

ದಾವಣಗೆರೆ: ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿ ದಾವಣಗೆರೆ ಜಿಲ್ಲೆಯಲ್ಲಿ ಹೊಸ ಸಂಚಲನ…

BIG NEWS: ಸಾಗರದ ಶೆಡ್ತೀಕೆರೆಯಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ: ರಮೇಶ್ ನಾರಾಯಣ್ ಹಾಗೂ ಇತರ ಶಿಕ್ಷಕರ ವಿರುದ್ಧ ‘ಮಕ್ಕಳ ಆಯೋಗ ಸುಮೋಟೋ ಕೇಸ್’ ದಾಖಲು

22/03/2026 9:07 PM

BIG NEWS: ಮಂಡ್ಯದಲ್ಲಿ ‘LPG ಸಿಲಿಂಡರ್‌’ಗೆ ಮುಗಿಬಿದ್ದ ಜನ: ಪೊಲೀಸ್ ರಕ್ಷಣೆಯಲ್ಲಿ ‘ಗ್ಯಾಸ್‌’ ವಿತರಣೆ

22/03/2026 8:13 PM

ಸಾಗರದಲ್ಲಿ ಅದ್ದೂರಿಯಾಗಿ ನೆರವೇರಿದ ‘ಶ್ರೀ ಮಹಾಗಣಪತಿ ರಥೋತ್ಸವ’: ಭಕ್ತಿಯ ಪರಾಕಾಷ್ಠೆ, ಸಂಸ್ಕೃತಿಯ ಸಂಗಮ

22/03/2026 7:55 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.