ಬೆಂಗಳೂರು: ಜಲಜೀವನ್ ಮಿಷನ್, ಸ್ವಚ್ಛ ಭಾರತ್ ಮಿಷನ್ ಮತ್ತು WQMS ಶಾಖೆ ಅಡಿ ಗುತ್ತಿಗೆ, ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬಬಂದಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಈ ಸಿಬ್ಬಂದಿಗಳ ಮಾಸಿಕ ಸಂಭಾವನೆಯನ್ನು ಪರಿಷ್ಕರಿಸಿ ಆದೇಶಿಸಿದೆ.
ಈ ಕುರಿತಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿರ್ದೇಶಕರು, ಎಲ್ಲಾ ಜಿಲ್ಲಾಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿಯಲ್ಲಿ ಜಲ ಜೀವನ್ ಮಿಷನ್, ಸ್ವಚ್ಚ ಭಾರತ ಮಿಷನ್ (ಗ್ರಾ) ಯೋಜನೆಗಳಡಿ ಜಿಲ್ಲಾ ಮಟ್ಟದಲ್ಲಿ ಮತ್ತು WQMS ಶಾಖೆ ಅಡಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪ್ರಯೋಗಾಲಯಗಳಲ್ಲಿ ಹಾಗೂ ಕೇಂದ್ರ ಕಛೇರಿಯಲ್ಲಿ ಗುತ್ತಿಗೆ/ಹೊರ ಗುತ್ತಿಗೆ ಆಧಾರದ ಮೇಲೆ ಮಾನವ ಸಂಪನ್ಮೂಲ ಸಂಸ್ಥೆಗಳ ಮೂಲಕ ಸಮಾಲೋಚಕರುಗಳು/ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿರುತ್ತಾರೆ. ಸದರಿ ಸಿಬ್ಬಂದಿಗಳಿಗೆ ಕಳೆದ ಮೂರು ವರ್ಷಗಳಿಂದ ಮಾಸಿಕ ಸೇವಾ ಶುಲ್ಕ ಪಾವತಿ ಪರಿಷ್ಕರಣೆಯಾಗಿರುವುದಿಲ್ಲವೆಂದು, ಮಾಸಿಕ ಸೇವಾ ಶುಲ್ಕ ಪರಿಷ್ಕರಿಸಲು ಉಲ್ಲೇಖ- ರಂತೆ ಮನವಿ ಪತ್ರಗಳನ್ನು ಸಲ್ಲಿಸಿರುತ್ತಾರೆ.
ಮುಂದುವರೆದು, ಸದರಿ ಮನವಿಗಳನ್ನು ಪರಿಶೀಲಿಸಲಾಗಿ, ಪ್ರಸ್ತುತ ಎಲ್ಲಾ ಜಿಲ್ಲಾ ಪಂಚಾಯಿತಿಗಳಲ್ಲಿ ಗುತ್ತಿಗೆ/ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಮಾಲೋಚಕರುಗಳ/ಸಿಬ್ಬಂದಿಗಳ ಮಾಸಿಕ ಸೇವಾ ಶುಲ್ಕಗಳಲ್ಲಿ ವ್ಯತ್ಯಾಸಗಳಿರುತ್ತವೆ. ಸದರಿ ವ್ಯತ್ಯಾಸಗಳನ್ನು ಸರಿಪಡಿಸಲು ಸಮಗ್ರವಾಗಿ ವಿವಿಧ ಹುದ್ದೆಗಳ ಮೂಲ ಮಾಸಿಕ ಶುಲ್ಕವನ್ನು ಹುದ್ದೆಯ ಸ್ವರೂಪ ಹಾಗೂ ವಿಧ್ಯಾರ್ಹತೆ/ಸಮನಾಂತರ ವಿಧ್ಯಾರ್ಹತೆ ಆಧಾರದ ಮೇಲೆ ಪರಿಷ್ಕರಿಸಿ ನಿಗದಿಪಡಿಸಲಾಗಿದೆ. ಮುಂದುವರೆದು ಆ ಸೇವೆಯಲ್ಲಿ ಇಲಾಖೆಯಲ್ಲಿ ಸಲ್ಲಿಸಿರುವ ಸೇವಾ ಅವಧಿ ಆಧರಿಸಿ ವಾರ್ಷಿಕ ಶೇಕಡಾವಾರು ಹೆಚ್ಚಳವನ್ನು ನಿಗದಿಪಡಿಸಿ ಅದರಂತೆ ಮಾಸಿಕ ಸೇವಾಶುಲ್ಕವನ್ನು ಪರಿಷ್ಕರಿಸಲಾಗಿದೆ.
ಪರಿಷ್ಕೃತ ಸೇವಾಶುಲ್ಕದ ವಿವರಗಳನ್ನು ಅನುಬಂಧ-1ರಲ್ಲಿ ಅಡಕಗೊಳಿಸಿ ಅದರನ್ವಯ ದಿನಾಂಕ:01.04.2025 ರಿಂದ ಜಾರಿಗೆ ಬರುವಂತೆ ಪರಿಷ್ಕೃತ ಮಾಸಿಕ ಸೇವಾ ಶುಲ್ಕವನ್ನು ಸಂಬಂಧಿಸಿದ ಗುತ್ತಿಗೆ/ಹೊರಗುತ್ತಿಗೆ ಸೇವಾ ಏಜೆನ್ಸಿಗಳ ಮೂಲಕ ಪಾವತಿಸಲು ಆದೇಶಿಸಿದೆ.
ಷರತ್ತು ಮತ್ತು ನಿಭಂದನೆಗಳು:
1. ಇಲಾಖೆಯಡಿಯಲ್ಲಿ ಜಲ ಜೀವನ್ ಮಿಷನ್, ಸ್ವಚ್ಚ ಭಾರತ ಮಿಷನ್ (ಗ್ರಾ) ಮತ್ತು WOMS ಶಾಖೆ ಅಡಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪ್ರಯೋಗಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ/ಸಮಾಲೋಚಕರ ಸೇವೆಯು ಸಂಪೂರ್ಣವಾಗಿ ಹೊರಗುತ್ತಿಗೆ ಆಧಾರದಲ್ಲಿದ್ದು, ಸೇವೆ ಖಾಯಂ ಗೊಳಿಸಲು ಯಾವುದೇ ಅವಕಾಶವಿರುವುದಿಲ್ಲ.
2. ಸಿಬ್ಬಂದಿಗಳ ಸೇವೆಯನ್ನು ಸೇವಾ ಏಜೆನ್ಸಿಗಳ ಮೂಲಕ ಪಡೆಯಲಾಗಿದ್ದು, ಸಿಬ್ಬಂದಿಗಳ ಸೇವೆಗೆ ಸಂಬಂಧಿಸಿದಂತೆ ಯಾವುದೇ ಹಕ್ಕು ಮತ್ತು ಬಾಧ್ಯತೆಗಳಿಗೆ ಸಂಬಂಧಿಸಿದ ಏಜೆನ್ಸಿಯವರೆ ಜವಾಬ್ದಾರರಾಗಿದ್ದು, ಇಲಾಖೆ ಜವಾಬ್ದಾರಿಯಾಗಿರುವುದಿಲ್ಲ.
3. ಸಂಬಂಧಿಸಿದ ಸೇವಾ ಏಜೆನ್ಸಿಯವರು ಶಾಸನಬದ್ಧ ಕಟಾವಣೆಗಳ ನಿಗದಿತ ಮರುಪಾವತಿ ಬಗ್ಗೆ ಖಾತರಿ ಪಡಿಸಿಕೊಳ್ಳುವುದು ಮತ್ತು ಈ ಕುರಿತಂತೆ ಯಾವುದೇ ವ್ಯತ್ಯಾಸಗಳಿಗೆ ಕೇಂದ್ರ ಕಛೇರಿಯು ಜವಾಬ್ದಾರಿಯಾಗಿರುವುದಿಲ್ಲ.
4. ಪ್ರಸ್ತುತ ನಿಗದಿಪಡಿಸಿದ ಸೇವಾ ಶುಲ್ಕಕ್ಕಿಂತ ಹೆಚ್ಚುವರಿಯಾಗಿ ಯಾವುದೇ ಸಂಭಾವನೆ ಪಾವತಿಸತಕ್ಕದ್ದಲ್ಲ ಹಾಗೂ ಜಿಲ್ಲಾ ಮಟ್ಟದಲ್ಲಿ ಯಾವುದೇ ಕಾರಣಕ್ಕೂ ಪರಿಷ್ಕರಣೆ ಮಾಡತಕ್ಕದ್ದಲ್ಲ.
5. ಯಾವುದೇ ಸಿಬ್ಬಂದಿ/ಸಮಾಲೋಚಕರು ನ್ಯಾಯಾಲಯದ ಪ್ರಕರಣಗಳನ್ನು ಎದುರಿಸುತ್ತಿದ್ದಲ್ಲಿ ಅಂತಹ ಸಮಾಲೋಚಕರುಗಳ ಸೇವಾ ಶುಲ್ಕ ಪರಿಷ್ಕರಣೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದನ್ವಯ ಸಂಬಂಧಿಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಕಾರ್ಯಪಾಲಕ ಅಭಿಯಂತರರು ಜಿಲ್ಲಾ ಹಂತದಲ್ಲಿ ನಿಯಮಾನುಸಾರ ಕ್ರಮ ವಹಿಸುವುದು.
6. ಸಮಾಲೋಚಕರು/ಸಿಬ್ಬಂದಿಗಳ ಹುದ್ದೆಗಳಿಗೆ ಅನುಗುಣವಾಗಿ ನಿಗದಿಪಡಿಸಿದ ಮೂಲ ಮಾಸಿಕ ಸೇವಾ ಶುಲ್ಕ, ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ಅನುಭವದ ಆಧಾರದ ಮೇಲೆ ಶೇಕಡಾವಾರು ವಾರ್ಷಿಕ ಪರಿಷ್ಕರಣೆಯ ವಿವರಗಳನ್ನು ಅನುಬಂಧದಲ್ಲಿ ಲಗತ್ತಿಸಿದೆ.
7. ಈಗಾಗಲೇ ತಮ್ಮ ಹಂತದಲ್ಲಿ ಸೇವಾ ಶುಲ್ಕ ಪರಿಷ್ಕರಿಸಿದ್ದಲ್ಲಿ, ಸದರಿ ಸೇವಾ ಶುಲ್ಕವನ್ನು ಕೋಷ್ಟಕದಲ್ಲಿ ನಿಗದಿಪಡಿಸಿದ ಮೂಲ ಸೇವಾಶುಲ್ಕಕ್ಕೆ ಸರಿಹೊಂದುವಂತೆ ಪಾವತಿಸುವುದು, ಒಂದು ವೇಳೆ ಈಗಾಗಲೇ ಪಾವತಿಸುತ್ತಿರುವ ಸೇವಾಶುಲ್ಕವು ಪರಿಷ್ಕರಿಸಿದ ಶುಲ್ಕಕ್ಕಿಂತ ಹೆಚ್ಚಾಗಿದ್ದಲ್ಲಿ, ಸಂಬಂಧಿಸಿದ ಸಿಬ್ಬಂದಿಯು ನಿಗದಿಪಡಿಸಿದ ಹಂತವನ್ನು ತಲುಪುವ ವರೆಗೆ ಸದರಿ ಸೇವಾ ಶುಲ್ಕವನ್ನೇ ಮುಂದುವರೆಸಿ ಪಾವತಿಸಲು ಕ್ರಮವಹಿಸುವಂತೆ ತಿಳಿಸಿದ್ದಾರೆ.
ಜೆಇಇ ಮೇನ್ 2025 ಸೆಷನ್ 2 ಅಂತಿಮ ಕೀ ಉತ್ತರಗಳನ್ನು NTA ಬಿಡುಗಡೆ | JEE Main 2025
GOOD NEWS : ರಾಜ್ಯದ ಮಹಿಳೆಯರಿಗೆ ಸಿಹಿಸುದ್ದಿ : ಇನ್ಮುಂದೆ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಆಧಾರ್ ಕಾರ್ಡ್ ಬೇಕಿಲ್ಲ!