ಬೆಂಗಳೂರು: ರಾಜ್ಯದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ನಿಯಮ 2006ರ ತಿದ್ದುಪಡಿಯನ್ವಯ ಧನಸಹಾಯ, ಪರಿಹಾರದ ಮೊತ್ತವನ್ನು ಪರಿಷ್ಕರಿಸಿ ಸರ್ಕಾರ ಆದೇಶಿಸಿದೆ.
ಈ ಸಂಬಂಧ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಸುತ್ತೋಲೆ ಹೊರಡಿಸಲಾಗಿತ್ತು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ನಿಯಮ 2006ರ ತಿದ್ದುಪಡಿ ಮಾಡಿ ಧನಸಹಾಯ, ಪರಿಹಾರದ ಮೊತ್ತವನ್ನು ಪರಿಷ್ಕರಿಸಿ ದಿನಾಂಕ 16-07-2025ರಂದು ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿದೆ ಎಂದಿದ್ದಾರೆ.
ಈ ಹಿನ್ನಲೆಯಲ್ಲಿ ಸದರಿ ನಿಯಮಗಳನ್ನು ಅನುಷ್ಠಾನಗೊಳಿಸುವಾಗ ರಾಜ್ಯದಲ್ಲಿ ಏಕ ರೂಪತೆಯನ್ನು ಕಾಪಾಡುವ ದೃಷ್ಟಿಯಿಂದ ಈ ಕೆಳಕಂಡ ನಿರ್ದೇಶನಗಳನ್ನು ಎಲ್ಲಾ ಅನುಷ್ಠಾನ ಅಧಿಕಾರಿಗಳಿಗೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಹೀಗಿದೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಧನ ಸಹಾಯ, ಪರಿಹಾರದ ಪರಿಷ್ಕೃತ ಮೊತ್ತ
ಅನುಗ್ರಹರಾಶಿ ವೆಚ್ಚವನ್ನು ರೂ.71,000ದಿಂದ ರೂ.1,46,000ಕ್ಕೆ ಹೆಚ್ಚಿಸಲಾಗಿದೆ.
ದಿನಾಂಕ 16-07-2025ರಿಂದ ಚಾಲಿಗೆ ಬರುವಂತೆ ಅಂತಿಮ ಸಂಸ್ಕಾರ ವೆಚ್ಚ ರೂ.4000 ಪರಿಷ್ಕರಿಸಿದ್ದರೇ, ಅನುಗ್ರಹ ರಾಶಿ ರೂ.1,46,000ಕ್ಕೆ ಹೆಚ್ಚಿಸಲಾಗಿದೆ. ಒಟ್ಟು ರೂ.1,50,000 ಆಗಿದೆ.
ಕೆಲಸದ ಸ್ಥಳದಲ್ಲಿ ಉಂಟಾಗುವ ಅಪಘಾತದಲ್ಲಿ ನೋಂದಾಯಿತ ಫಲಾನುಭವಿಯು ಮರಣಹೊಂದಿದಲ್ಲಿ ನೀಡಲಾಗುವ ಅಪಘಾತ ಮರಣ ಪರಿಹಾರದ ಮೊತ್ತವನ್ನು ರೂ.5 ಲಕ್ಷದಿಂದ ರೂ.8 ಲಕ್ಷಗಳಿಗೆ ಹೆಚ್ಚಿಸಲಾಗಿದೆ.
ಕೆಲಸದ ಸ್ಥಳಗಳನ್ನು ಹೊರತುಪಡಿಸಿ ಯಾವುದೇ ಅಪಘಾತದಲ್ಲಿ ಫಲಾನುಭವಿಯು ಮರಣ ಹೊಂದಿದಲ್ಲಿ ತಿದ್ದುಪಡಿ ಪೂರ್ವದ ದರಗಳು ಅಂದರೆ ರೂ.5 ಲಕ್ಷ ಪರಿಹಾರವನ್ನು ಮಾತ್ರ ಪಡೆಯಲು ಅರ್ಹರಿರುತ್ತಾರೆ.
‘ಲೂಸ್ ಫಾಸ್ಟ್‌ಟ್ಯಾಗ್’ಗಳನ್ನು ಕಪ್ಪುಪಟ್ಟಿಗೆ ಸರಿಸಲು ಮುಂದಾದ NHAI | Loose FASTags
BREAKING: ಕರ್ನಾಟಕ ವಿಧಾನ ಮಂಡಲದ ಮುಂಗಾರು ಅಧಿವೇಶನಕ್ಕೆ ಮುಹೂರ್ತ ಫಿಕ್ಸ್: ಆ.11ರಿಂದ ಆರಂಭ