Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ‘ವುಮೆನ್‌-ಆಥಾನ್‌’ನಲ್ಲಿ 1,500ಕ್ಕೂ ಹೆಚ್ಚು ಮಹಿಳೆಯರು ಭಾಗಿ

12/03/2026 5:12 PM

ಸಾಗರದಲ್ಲಿ ‘SSLC ವಿದ್ಯಾರ್ಥಿ’ಗಳ ಪರೀಕ್ಷಾ ಭಯ ದೂರವಾಗಿಸಿದ ‘ಸುದ್ದಿ ಸಹ್ಯಾದ್ರಿ’: ನೇರ ಫೋನ್ ಇನ್ ಕಾರ್ಯಕ್ರಮಕ್ಕೆ ತೆರೆ

12/03/2026 5:08 PM

BREAKING : “LPG ಉತ್ಪಾದನೆ 5 ದಿನಗಳಲ್ಲಿ ಶೇ. 28ರಷ್ಟು ಹೆಚ್ಚಾಗಿದೆ, ಪೆಟ್ರೋಲ್, ಡೀಸೆಲ್ ಕೊರತೆಯೂ ಇಲ್ಲ” : ಹರ್ದೀಪ್ ಸಿಂಗ್ ಪುರಿ

12/03/2026 5:00 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರದಿಂದ `CET’ಟಾಪರ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ವಿಶೇಷ ಶಿಷ್ಯ ವೇತನಕ್ಕೆ ಅರ್ಜಿ ಆಹ್ವಾನ
KARNATAKA

ರಾಜ್ಯ ಸರ್ಕಾರದಿಂದ `CET’ಟಾಪರ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ವಿಶೇಷ ಶಿಷ್ಯ ವೇತನಕ್ಕೆ ಅರ್ಜಿ ಆಹ್ವಾನ

By kannadanewsnow5730/01/2026 7:41 AM

ಬೆಂಗಳೂರು :2024ನೇ ಸಾಲಿನ CETಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ 2024-25ನೇ ಅಂತ್ಯದಲ್ಲಿ ವೈದ್ಯಕೀಯ, ಇಂಜಿನಿಯರ್, ಕೃಷಿ ಹಾಗೂ ಪಶುವಿಜ್ಞಾನ ಕೋರ್ಸ್‌ಗಳಿಗೆ ಪ್ರಥಮ ವರ್ಷಕ್ಕೆ ದಾಖಲಾದ ವಿದ್ಯಾರ್ಥಿಗಳಿಗೆ ವಿಶೇಷ ಶಿಷ್ಯ ವೇತನ ಸಿಗಲಿದೆ.

ವಿಷಯಕ್ಕೆ ಸಂಬಂಧಿಸಿದಂತೆ 2024ನೇ CET ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ 2024-25ನೇ ಸಾಲಿನಲ್ಲಿ ವೈದ್ಯಕೀಯ, ಇಂಜಿನಿಯರ್, ಕೃಷಿ ಹಾಗೂ ಪಶುವಿಜ್ಞಾನ ಕೋರ್ಸ್‌ಗಳಿಗೆ ಪ್ರಥಮ ವರ್ಷಕ್ಕೆ ದಾಖಲಾದ ವಿದ್ಯಾರ್ಥಿಗಳಿಗೆ ವಿಶೇಷ ಶಿಷ್ಯವೇತನವನ್ನು ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯ ವತಿಯಿಂದ 04 ವರ್ಷಕ್ಕೆ ಶಿಷ್ಯವೇತನ ನೀಡಲಾಗುತ್ತಿದೆ. ದಿನಾಂಕ: 14-02-2022 ಮತ್ತು 10-10-2024ರಂದು ನಡೆದ ರಾಜ್ಯ ಸಮಿತಿ ಸಭೆಯಲ್ಲಿ ಶಿಕ್ಷಕರ/ಉಪನ್ಯಾಸಕರ ಮಕ್ಕಳಿಗೆ ಸದರಿ ಧನಸಹಾಯವನ್ನು ನೀಡಲು ಅನುಮೋದನೆಯಾಗಿರುತ್ತದೆ. ಅದರಂತೆ 2024ನೇ ಸಾಲಿನ CET ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ 2024-25ನೇ ಸಾಲಿನಲ್ಲಿ ವೈದ್ಯಕೀಯ, ಇಂಜಿನಿಯರ್, ಕೃಷಿ ಮತ್ತು ಪಶುವಿಜ್ಞಾನ ಕೋರ್ಸ್‌ಗಳಿಗೆ ಪ್ರಥಮ ವರ್ಷಕ್ಕೆ ದಾಖಲಾಗಿ 2025ನೇ ಸಾಲಿನಲ್ಲಿ ಪ್ರಥಮ ವರ್ಷ ಉತ್ತೀರ್ಣರಾದ ಶಿಕ್ಷಕರ ಮಕ್ಕಳಿಂದ ಸದರಿ ವಿಶೇಷ ಶಿಷ್ಯವೇತನಕ್ಕೆ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಈ ಕೆಳಕಂಡ ಷರತ್ತುಗಳಿಗೊಳಪಟ್ಟಂತೆ ಶಿಕ್ಷಕರ ಮಕ್ಕಳಿಗೆ 04 ವರ್ಷಕ್ಕೆ ಶಿಷ್ಯವೇತನ ನೀಡಲಾಗುತ್ತದೆ.

1. ವಿದ್ಯಾರ್ಥಿಯು 2024-25ನೇ ಸಾಲಿನಲ್ಲಿ ಸರ್ಕಾರಿ/ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅರ್ಹತಾ ಪರೀಕ್ಷೆಯೂ ಸೇರಿದಂತೆ ಒಟ್ಟಾರೆ (ಅಗ್ರಿಗೇಟ್) ಗರಿಷ್ಠ ಅಂಕಗಳಿಸಿ ಪರೀಕ್ಷಾ ಪ್ರಾಧಿಕಾರದಿಂದ (ನೀಟ್/ಸಿಇಟಿ) ಹಂಚಿಕೆಯಾದ ಕಾಲೇಜಿನಲ್ಲಿ 2024-25ನೇ ಸಾಲಿನಲ್ಲಿ ದಾಖಲಾತಿ ಹೊಂದಿರಬೇಕು.

2. ವಿದ್ಯಾರ್ಥಿಯು 1 ರಿಂದ 12ನೇ ತರಗತಿಯವರೆಗೆ ಸರ್ಕಾರಿ/ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಕರ್ನಾಟಕದಲ್ಲಿಯೇ ಪೂರೈಸಿರಬೇಕು. 1 ರಿಂದ 12ನೇ ತರಗತಿಯವರೆಗೆ ಕರ್ನಾಟಕದಲ್ಲಿಯೇ ವ್ಯಾಸಂಗ ಮಾಡಿರುವ ಬಗ್ಗೆ ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರಿಂದ/ಪ್ರಾಂಶುಪಾಲರಿಂದ ಪಡೆದ ವ್ಯಾಸಂಗ ಪ್ರಮಾಣ ಪತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ದೃಢೀಕರಿಸಿ Online ಮುಖಾಂತರ Upload ಮಾಡಬೇಕು.

3. ವಿದ್ಯಾರ್ಥಿಯು ವೃತ್ತಿಪರ ಶಿಕ್ಷಣವನ್ನು ಪೂರ್ಣಗೊಳಿಸುವವರೆಗೂ ವರ್ಷಕ್ಕೊಮ್ಮೆ/ಪ್ರತಿ ಸೆಮಿಸ್ಟರ್‌ನಲ್ಲಿ ಕನಿಷ್ಠ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ ದೃಢೀಕೃತ ಅಂಕಪಟ್ಟಿಗಳ ಪ್ರತಿಯನ್ನು ವ್ಯಾಸಂಗ ಮಾಡಿರುವ ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಿಸಿ Upload ಮಾಡಬೇಕು.

4. ವಿದ್ಯಾರ್ಥಿಯು ತನ್ನ ಕೋರ್ಸ್ ಅವಧಿಯಲ್ಲಿ ಪ್ರಥಮ ದರ್ಜೆಗಿಂತಲೂ ಕಡಿಮೆ ಅಂಕ ಗಳಿಸಿ ಉತ್ತೀರ್ಣರಾಗಿದ್ದಲ್ಲಿ ಆ ಅವಧಿಯಿಂದ ಶಿಷ್ಯವೇತನವನ್ನು ಮುಂದುವರಿಸಲಾಗುವುದಿಲ್ಲ.

5. ವೃತ್ತಿಪರ ಶಿಕ್ಷಣ ಶಿಷ್ಯವೇತನ ಪಡೆಯಲು Online ಮುಖಾಂತರ ಕಾಲೇಜು ಮುಖ್ಯಸ್ಥರ ಸೂಕ್ತ ಶಿಫಾರಸ್ಸಿನೊಂದಿಗೆ (ಸಹಿ ಮತ್ತು ಮೊಹರಿನೊಂದಿಗೆ) ದೃಢೀಕರಿಸಿ ಪ್ರತಿಯನ್ನು Upload ಮಾಡಬೇಕು.

6. ಆಯಾ ಸಾಲಿನಲ್ಲಿ ವ್ಯಾಸಂಗ ಪ್ರಮಾಣ ಪತ್ರವನ್ನು ಕಾಲೇಜು ಮುಖ್ಯಸ್ಥರ ಸೂಕ್ತ ಶಿಫಾರಸ್ಸಿನೊಂದಿಗೆ (ಸಹಿ ಮತ್ತು ಮೊಹರಿನೊಂದಿಗೆ) ದೃಢೀಕರಿಸಿ Upload ಮಾಡಬೇಕು. ಹಾಗೂ ಪ್ರತಿಗಳನ್ನು ನಿಧಿಗಳ ಕಛೇರಿಗೆ ಸಲ್ಲಿಸುವುದು.

7. CBSE/ICSE ಪಠ್ಯಕ್ರಮ ಹೊರತುಪಡಿಸಿ ರಾಜ್ಯ ಪಠ್ಯಕ್ರಮದಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸತಕ್ಕದು.

ಅದರಂತೆ ಈ ಮೇಲ್ಕಂಡ ಎಲ್ಲಾ ಷರತ್ತಿನಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು. CET MBBS-70, BE-70, BSC-Agriculture-70 BVSC-70 ಒಟ್ಟು 280 ವಿದ್ಯಾರ್ಥಿಗಳಿಗೆ ಧನಸಹಾಯ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. Onlineನಲ್ಲಿ ದಿನಾಂಕ: 01-02-2026 ರಿಂದ 15-02-2026ರವರೆಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ

ಅರ್ಹ ವಿದ್ಯಾರ್ಥಿಗಳು ನಿಯಂತ್ರಣಾಧಿಕಾರಿಗಳ ಶಿಫಾರಸ್ಸಿನೊಂದಿಗೆ ದಿನಾಂಕ: 15-02-2026 .ರೊಳಗೆ ಈ ಕಛೇರಿಗೆ ಪ್ರಸ್ತಾವನೆಯನ್ನು Online ಮುಖಾಂತರ ಸಲ್ಲಿಸಲು ತಿಳಿಸಿದೆ. ಹಾಗೂ ಪ್ರಸ್ತಾವನೆಯನ್ನು ನಿಧಿಗಳ ಕಛೇರಿಗೆ ಸಲ್ಲಿಸಲು ಕೊನೆಯ ದಿನಾಂಕ: 20-02-2026. ಇಲಾಖಾ ವೆಬ್‌ಸೈಟ್ www.schooleducation.kar.nic.in SWF/TWF ONLINE SERVICE ಈಗಾಗಲೇ Online ಮುಖಾಂತರ ಆಜೀವ ಸದಸ್ಯತ್ವ (LIFE MEMBERSHIP CARD) ಪಡೆದಿರುವ ಶಿಕ್ಷಕರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅಂತಿಮ ದಿನಾಂಕದ ನಂತರ ಸ್ವೀಕೃತವಾಗುವ ಪ್ರಸ್ತಾವನೆಯನ್ನು ಪರಿಗಣಿಸಲಾಗುವುದಿಲ್ಲ.

Good news for CET toppers from the state government: Applications invited for special scholarship
Share. Facebook Twitter LinkedIn WhatsApp Email

Related Posts

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ‘ವುಮೆನ್‌-ಆಥಾನ್‌’ನಲ್ಲಿ 1,500ಕ್ಕೂ ಹೆಚ್ಚು ಮಹಿಳೆಯರು ಭಾಗಿ

12/03/2026 5:12 PM1 Min Read

ಸಾಗರದಲ್ಲಿ ‘SSLC ವಿದ್ಯಾರ್ಥಿ’ಗಳ ಪರೀಕ್ಷಾ ಭಯ ದೂರವಾಗಿಸಿದ ‘ಸುದ್ದಿ ಸಹ್ಯಾದ್ರಿ’: ನೇರ ಫೋನ್ ಇನ್ ಕಾರ್ಯಕ್ರಮಕ್ಕೆ ತೆರೆ

12/03/2026 5:08 PM2 Mins Read

ಗೃಹಬಳಕೆ ಅಡುಗೆ ಅನಿಲದ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ: ಮಂಡ್ಯ ಡಿಸಿ ಡಾ.ಕುಮಾರ ಸ್ಪಷ್ಟನೆ

12/03/2026 4:56 PM2 Mins Read
Recent News

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ‘ವುಮೆನ್‌-ಆಥಾನ್‌’ನಲ್ಲಿ 1,500ಕ್ಕೂ ಹೆಚ್ಚು ಮಹಿಳೆಯರು ಭಾಗಿ

12/03/2026 5:12 PM

ಸಾಗರದಲ್ಲಿ ‘SSLC ವಿದ್ಯಾರ್ಥಿ’ಗಳ ಪರೀಕ್ಷಾ ಭಯ ದೂರವಾಗಿಸಿದ ‘ಸುದ್ದಿ ಸಹ್ಯಾದ್ರಿ’: ನೇರ ಫೋನ್ ಇನ್ ಕಾರ್ಯಕ್ರಮಕ್ಕೆ ತೆರೆ

12/03/2026 5:08 PM

BREAKING : “LPG ಉತ್ಪಾದನೆ 5 ದಿನಗಳಲ್ಲಿ ಶೇ. 28ರಷ್ಟು ಹೆಚ್ಚಾಗಿದೆ, ಪೆಟ್ರೋಲ್, ಡೀಸೆಲ್ ಕೊರತೆಯೂ ಇಲ್ಲ” : ಹರ್ದೀಪ್ ಸಿಂಗ್ ಪುರಿ

12/03/2026 5:00 PM

ಗೃಹಬಳಕೆ ಅಡುಗೆ ಅನಿಲದ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ: ಮಂಡ್ಯ ಡಿಸಿ ಡಾ.ಕುಮಾರ ಸ್ಪಷ್ಟನೆ

12/03/2026 4:56 PM
State News
KARNATAKA

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ‘ವುಮೆನ್‌-ಆಥಾನ್‌’ನಲ್ಲಿ 1,500ಕ್ಕೂ ಹೆಚ್ಚು ಮಹಿಳೆಯರು ಭಾಗಿ

By kannadanewsnow0912/03/2026 5:12 PM KARNATAKA 1 Min Read

ಬೆಂಗಳೂರು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತವಾಗಿ “ನಾರಿ ಪವರ್‌ ಟೀಂ” ಆಯೋಜಿಸಿದ್ದ “ವುಮೆನ್‌-ಆಥಾನ್‌ 4 ನೇ ಆವೃತ್ತಿ” ಯಲ್ಲಿ 1,500…

ಸಾಗರದಲ್ಲಿ ‘SSLC ವಿದ್ಯಾರ್ಥಿ’ಗಳ ಪರೀಕ್ಷಾ ಭಯ ದೂರವಾಗಿಸಿದ ‘ಸುದ್ದಿ ಸಹ್ಯಾದ್ರಿ’: ನೇರ ಫೋನ್ ಇನ್ ಕಾರ್ಯಕ್ರಮಕ್ಕೆ ತೆರೆ

12/03/2026 5:08 PM

ಗೃಹಬಳಕೆ ಅಡುಗೆ ಅನಿಲದ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ: ಮಂಡ್ಯ ಡಿಸಿ ಡಾ.ಕುಮಾರ ಸ್ಪಷ್ಟನೆ

12/03/2026 4:56 PM

ಲೆಕ್ಕ ಕೇಳೋ ಹಕ್ಕಿರೋದು ಜನತೆಗೆ, ಮಂಡ್ಯ ಸಂಸದರಲ್ಲ: ಸಚಿವ ಚಲುವರಾಯಸ್ವಾಮಿ ತಿರುಗೇಟು

12/03/2026 4:53 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.