ನವದೆಹಲಿ: ರಕ್ಷಾ ಬಂಧನಕ್ಕೂ ಮುನ್ನ ಸರ್ಕಾರವು ಕೇಂದ್ರ ನೌಕರರಿಗೆ ದೊಡ್ಡ ಉಡುಗೊರೆಯನ್ನು ನೀಡಬಹುದು ಅಂತ ಊಹಿಸಲಾಗಿತ್ತು. ಈಗ ಕೇಂದ್ರ ಸಚಿವ ಸಂಪುಟ ಬುಧವಾರ ತುಟ್ಟಿ ಭತ್ಯೆ (ಡಿಎ)ಯಲ್ಲಿ ಶೇ.3 ರಷ್ಟು ಹೆಚ್ಚಳಕ್ಕೆ ಅನುಮೋದನೆ ಎನ್ನಲಾಗುತ್ತಿದೆ.
ಇದರೊಂದಿಗೆ, ಅದು ಈಗ ಪ್ರಸ್ತುತ 55 ಪ್ರತಿಶತದಿಂದ 58 ಪ್ರತಿಶತಕ್ಕೆ ಹೆಚ್ಚಾಗಬಹುದು ಎನ್ನಲಾಗಿದೆ. ಸಾಮಾನ್ಯವಾಗಿ ಕೇಂದ್ರ ಸರ್ಕಾರವು ವರ್ಷಕ್ಕೆ ಎರಡು ಬಾರಿ ತುಟ್ಟಿ ಭತ್ಯೆಯನ್ನು ಪರಿಷ್ಕರಿಸುತ್ತದೆ, ಇದನ್ನು ಅಧಿಕೃತವಾಗಿ ನಂತರ ಘೋಷಿಸಲಾಗುತ್ತದೆ. ಸರ್ಕಾರಿ ನೌಕರರಿಗೆ ಡಿಎ ನೀಡಲಾಗುತ್ತದೆ, ಆದರೆ ಡಿಆರ್ (ತುಟ್ಟಿ ಪರಿಹಾರ) ಪಿಂಚಣಿದಾರರಿಗೆ ನೀಡಲಾಗುತ್ತದೆ.