ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಯುತ್ತಿದೆ. ಈ ಜಾತಿಗಣತಿಯಲ್ಲಿ ತೊಡಗಿರುವಂತ ಸಮೀಕ್ಷಾದಾರರು, ಮೇಲ್ವಿಚಾರಕರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಅದೇ ಗೌರವಧನವನ್ನು ನಿಗದಿ ಪಡಿಸಿ ಆದೇಶಿಸಿದೆ.
ಈ ಕುರಿತಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿ ಅವರು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ಸಮೀಕ್ಷಾದಾರರು ಮತ್ತು ಮೇಲ್ವಿಚಾರಕರಿಗೆ ಈ ಕೆಳಕಂಡಂತೆ ಗೌರವಧನವನ್ನು ನಿಗದಿ ಪಡಿಸಲಾಗಿದೆ ಎಂದಿದೆ.
ರಾಜ್ಯ ಸರ್ಕಾರದಿಂದ ಜಾತಿಗಣತಿಯಲ್ಲಿ ತೊಡಗಿರುವಂತ ಸಮೀಕ್ಷಾದಾರರಿಗೆ ಲಮ್ ಸಂ ರೂ.5,000 ಹಾಗೂ ಪ್ರತಿ ಮನೆ ಸಮೀಕ್ಷೆಗೆ ರೂ.100 ರಂತೆ ಗೌರವಧನವನ್ನು ನಿಗದಿ ಪಡಿಸಲಾಗಿದೆ. ಮೇಲ್ವಿಚಾರಕರಿಗೆ ರೂ.10,000 ಗೌರವಧನ ನಿಗದಿ ಪಡಿಸಲಾಗಿದೆ.
ಮೊದಲ ಕಂತಿನಲ್ಲಿ ತಲಾ ರೂ.5,000ದಂತೆ ಸಮೀಕ್ಷಾದಾರರಿಗೆ ಗೌರವಧನ ಪಾವತಿಸಲು ಅನುದಾನ ಬಿಡುಗಡೆ ಮಾಡಲಾಗಿದೆ. ಸಮೀಕ್ಷಾದಾರರಿಗೆ ಬಾಕಿ ಮೊತ್ತ ಹಾಗೂ ಮೇಲ್ವಿಚಾರಕರಿಗೆ ನಿಗದಿಪಡಿಸಿದ ಗೌರವಧನವನ್ನು ಬಿಡುಗಡೆ ಮಾಡಬೇಕಾಗಿದ್ದು, ಒಂದು ಬ್ಲಾಕ್ ಗೆ ಒಂದಕ್ಕಿಂತ ಹೆಚ್ಚು ಸಮೀಕ್ಷಾದಾರರನ್ನು ನೇಮಿಸಿದ್ದಲ್ಲಿ ಪ್ರತಿ ಬ್ಲಾಕ್ ಗೆ ನಿಗದಿಪಡಿಸಿರುವ Lump-sum ಮೊತ್ತವನ್ನು ಸಮೀಕ್ಷಾದಾರರಿಗೆ ವಿಭಜಿಸಿ ನೀಡಬೇಕಾಗಿರುತ್ತದೆ ಎಂದಿದ್ದಾರೆ.