ನವದೆಹಲಿ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ಜೀವನವನ್ನ ಸುಧಾರಿಸಲು ಹಲವಾರು ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಅದರಲ್ಲಿ ಈ ಯೋಜನೆ ಕೂಡ ಒಂದು. ಈ ಹಿನ್ನೆಲೆಯಲ್ಲಿ ಸರ್ಕಾರಗಳು ಆಧುನಿಕ ತಂತ್ರಜ್ಞಾನಗಳು ಮತ್ತು ಸೌಲಭ್ಯಗಳನ್ನ ಎಲ್ಲರಿಗೂ ಲಭ್ಯವಾಗುವಂತೆ ಮಾಡುವಲ್ಲಿ ಪ್ರಗತಿ ಸಾಧಿಸುತ್ತಿವೆ.
2016 ರಲ್ಲಿ, ಕೇಂದ್ರ ಸರ್ಕಾರವು ಅರಣ್ಯನಾಶವನ್ನು ತಡೆಗಟ್ಟುವುದರ ಜೊತೆಗೆ ಮನೆಯಲ್ಲಿ ಅಡುಗೆ ಮಾಡುವ ಪ್ರಕ್ರಿಯೆಯನ್ನ ಸುಲಭಗೊಳಿಸುವ ಉದ್ದೇಶದಿಂದ ಎಲ್ಲಾ ಅರ್ಹ ಜನರಿಗೆ ಉಚಿತ ಗ್ಯಾಸ್ ಸಂಪರ್ಕವನ್ನು ನೀಡಲು ಪ್ರಾರಂಭಿಸಿತು. ಇದರ ಭಾಗವಾಗಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ವರ್ಷಕ್ಕೆ 3 ಸಿಲಿಂಡರ್’ಗಳನ್ನ ನೀಡುವ ಯೋಜನೆಯನ್ನು ಪರಿಚಯಿಸಿದೆ. ಆದರೆ ಬಿಪಿಎಲ್ ಪಡಿತರ ಚೀಟಿದಾರರು ಮಾತ್ರ ಈ ಯೋಜನೆಯ ಮೂಲಕ 3 ಸಿಲಿಂಡರ್ ಪಡೆಯಲು ಅರ್ಹರಾಗಿರುತ್ತಾರೆ. 2016ರಲ್ಲಿ ಆರಂಭವಾದ ಈ ಯೋಜನೆ ಈಗಲೂ ಮುಂದುವರಿದಿದೆ. ಈ ಯೋಜನೆಯಿಂದ ಈಗಾಗಲೇ ಅನೇಕ ಅರ್ಹರು ಪ್ರಯೋಜನ ಪಡೆದಿದ್ದಾರೆ.
ಈ ಯೋಜನೆಯ ಮೂಲಕ ಪ್ರಯೋಜನಗಳನ್ನ ಪಡೆಯಲು, ನೀವು ಖಚಿತವಾಗಿ ಅರ್ಜಿ ಸಲ್ಲಿಸಬೇಕು. ಅಲ್ಲದೆ ಅರ್ಜಿದಾರರು ಬಿಪಿಎಲ್ ಪಡಿತರ ಚೀಟಿ ಹೊಂದಿರಬೇಕು. ಆಗ ಮಾತ್ರ ನೀವು ಈ ಯೋಜನೆಗೆ ಅರ್ಹರಾಗುತ್ತೀರಿ. ಆದ್ದರಿಂದ ಅರ್ಹ ಕುಟುಂಬಗಳು ಈ ಯೋಜನೆಯ ಪ್ರಯೋಜನಗಳನ್ನ ಪಡೆಯಲು ವೆಬ್‌ಸೈಟ್ www.pmuy.gov.in ಮೂಲಕ ಅರ್ಜಿ ಸಲ್ಲಿಸಬಹುದು.
ಅಗತ್ಯ ದಾಖಲೆಗಳು.!
ಈ ಯೋಜನೆಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಬ್ಯಾಂಕ್ ವಿವರಗಳು ಮತ್ತು ಇತರ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.
ವರ್ಷಕ್ಕೆ ಮೂರು ಉಚಿತ ಸಿಲಿಂಡರ್‌ಗಳು.!
ಈ ಯೋಜನೆಯ ಮೂಲಕ ಪ್ರತಿ ವರ್ಷ ಮೂರು ಉಚಿತ ಸಿಲಿಂಡರ್’ಗಳನ್ನ ನೀಡುವ ಮೂಲಕ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಬೆಂಬಲ ನೀಡುವ ಗುರಿಯನ್ನ ಕೇಂದ್ರ ಸರ್ಕಾರ ಹೊಂದಿದೆ. ಸಾಂಪ್ರದಾಯಿಕ ಮರದ ಆಧಾರಿತ ಅಡುಗೆ ವಿಧಾನಗಳಿಂದ ಆಧುನಿಕ ಅಡುಗೆ ವಿಧಾನಗಳಿಗೆ ಬದಲಾಗುವುದು ಮತ್ತು ಮುಖ್ಯವಾಗಿ ಗೃಹಿಣಿಯರಿಗೆ ಅಡುಗೆಯನ್ನ ಸುಲಭಗೊಳಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.