ಬೆಂಗಳೂರು: ಬಿಎಂಟಿಸಿಯಿಂದ ಸಂಸ್ಥೆಯ ಸಿಬ್ಬಂದಿಗಳ ಮಕ್ಕಳಿಗೆ ನೀಡುವಂತ ವಿದ್ಯಾರ್ಥಿ ವೇತನ ಮೊತ್ತವನ್ನು ಪ್ರಸ್ತುತ ಸಾಲಿನಿಂದ ಪರಿಷ್ಕರಿಸಿದೆ. ಈ ಮೂಲಕ ಬಿಎಂಟಿಸಿ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ವಿದ್ಯಾ ಸಹಾಯ ನಿಧಿಯ ವತಿಯಿಂದ ಸಂಸ್ಥೆಯ ಅಧಿಕಾರಿಗಳ/ನೌಕರರಗಳ ವಿವಿಧ ವಿದ್ಯಾಭ್ಯಾಸ ಮಾಡುತ್ತಿರುವ ಅರ್ಹ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು 2003ನೇ ಸಾಲಿನಿಂದ ನೀಡುತ್ತಾ ಬಂದಿರುತ್ತದೆ. ಪ್ರಸ್ತುತ ಸಂಸ್ಥೆಯಲ್ಲಿ 20023-24 ರ ಶೈಕ್ಷಣಿಕ ಸಾಲಿನಿಂದ ಜಾರಿಗೆ ಬರುವಂತೆ ಅಧಿಕಾರಿಗಳ/ನೌಕರರುಗಳ ಅರ್ಹ ಮಕ್ಕಳಿಗೆ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನ ಮೊತ್ತವನ್ನು ಈ ಕೆಳಕಂಡಂತೆ ಪರಿಷ್ಕರಿಸಲಾಗಿದೆ ಎಂದಿದೆ.
ಪರಿಷ್ಕೃತ ವಿದ್ಯಾರ್ಥಿ ವೇತನ ವಿವರ
ವಿದ್ಯಾಭ್ಯಾಸ | ವಿದ್ಯಾಭ್ಯಾಸದ ಅವಧಿ | ಪ್ರಸ್ತುತ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನ ಮೊತ್ತ | 2023-24 ಶೈಕ್ಷಣಿಕ ಸಾಲಿನಿಂದ ಪರಿಷ್ಕೃತ ವಿದ್ಯಾರ್ಥಿ ವೇತನ ಮೊತ್ತ
|
ಐಟಿಐ/ ಜೆಒಸಿ | 1 ರಿಂದ 2 ವರ್ಷಗಳು | ರೂ. 900/- ಪ್ರತಿ ವರ್ಷ | ರೂ. 5000/- ಪ್ರತಿ ವರ್ಷ |
ಡಿಪ್ಲೋಮ | 3 ವರ್ಷಗಳು | ರೂ. 880/- ಪ್ರತಿ ವರ್ಷ | ರೂ. 5000/- ಪ್ರತಿ ವರ್ಷ |
ಪದವಿ/ಬಿ.ಎಸ್ಸಿ. / ಬಿ.ಇ. | 4 ವರ್ಷಗಳು | ರೂ.900/- ಪ್ರತಿ ಸೆಮಿಸ್ಟರ್‌ಗೆ | ರೂ. 5000/- ಪ್ರತಿ ವರ್ಷ |
ವೈದ್ಯಕೀಯ ಪದವಿಗಳು | 4 1/2 ವರ್ಷಗಳು | ರೂ.10,350/- (4 1/2 ವರ್ಷಗಳು ಪೂರ್ಣ ಅವಧಿಗೆ) | ರೂ. 7,500/- ಪ್ರತಿ ವರ್ಷ
(ರೂ. 33,750/- ಪೂರ್ಣ ಅವಧಿಗೆ)
|
ಸ್ನಾತಕೋತ್ತರ ಪದವಿಗಳು
|
2 ವರ್ಷಗಳು | ರೂ.3600/-
ಪೂರ್ಣ ಅವಧಿಗೆ |
ರೂ. 7,000/- ಪ್ರತಿ ವರ್ಷ
(ರೂ. 14,000/- ಪೂರ್ಣ ಅವಧಿಗೆ)
|
ಸ್ನಾತಕೋತ್ತರ ಪದವಿಗಳು
|
3 ವರ್ಷಗಳು | ರೂ.5400/-
ಪೂರ್ಣ ಅವಧಿಗೆ |
ರೂ. 7,000/- ಪ್ರತಿ ವರ್ಷ
(ರೂ. 21,000/- ಪೂರ್ಣ ಅವಧಿಗೆ) |
2023-24 ನೇ ಶೈಕ್ಷಣಿಕ ಸಾಲಿನಿಂದ ಈ ಕೆಳಕಂಡ ಕೋರ್ಸ್ಗಳಿಗೂ ಸಹ ವಿದ್ಯಾ ಸಹಾಯ ನಿಧಿಯ ಸೌಲಭ್ಯವನ್ನು ವಿಸ್ತರಿಸಲಾಗಿರುತ್ತದೆ.
ವಿದ್ಯಾಭ್ಯಾಸ | 2023-24 ನೇ ಶ್ಯಕ್ಷಣಿಕ ಸಾಲಿನಿಂದ ಜಾರಿಗೊಳಿಸುವ ವಿದ್ಯಾರ್ಥಿ ವೇತನ ಮೊತ್ತ |
ಪಿ.ಯು.ಸಿ. | ರೂ. 4,೦೦೦/- ಪ್ರತಿ ವರ್ಷ |
ಪದವಿ ಬಿ.ಎ./ ಬಿ.ಕಾಂ ಹಾಗೂ ಇತರೆ ಪದವಿ | ರೂ. 5,೦೦೦/- ಪ್ರತಿ ವರ್ಷ |
ಪಿ.ಹೆಚ್.ಡಿ. | ರೂ. 25,೦೦೦/- ಪೂರ್ಣ ಅವಧಿ |
ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಯಾವುದೇ ಪದವಿ | ರೂ. 25,೦೦೦/- ಪೂರ್ಣ ಅವಧಿ |
ಈ ಸೌಲಭ್ಯದ ಪ್ರಯೋಜನವನ್ನು ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 28,620 ಅಧಿಕಾರಿ/ನೌಕರರುಗಳು ಪಡೆಯುತ್ತಾರೆ ಎಂದು ಹೇಳಿದೆ.
ಗದಗದಲ್ಲಿ ಕ್ಯಾಂಟರ್ ವಾಹನ ಪಲ್ಟಿಯಾಗಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ದುರ್ಮರಣ
ಆಧುನಿಕ ‘ಭಾಗೀರಥಿ’ಯ ಪ್ರಯತ್ನದ ಫಲ : ಅಂಗನವಾಡಿ ಮಕ್ಕಳಿಗೋಸ್ಕರ ಬಾವಿ ತೋಡಿ ನೀರು ತರಿಸಿದ ಗೌರಿ ನಾಯ್ಕ್