ಬೆಂಗಳೂರು: ರಾಜ್ಯ ಸರ್ಕಾರದಿಂದ BMTC ನೌಕರರ ಕುಟುಂಬಕ್ಕೆ ಗುಡ್ ನ್ಯೂಸ್ ನೀಡಲಾಗಿದೆ. ಅದೇ ಬೆಂ.ಮ.ಸಾ.ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಅವಲಂಬಿತರಿಗೆ ಆರ್ಥಿಕ ಭದ್ರತೆ ಒದಗಿಸುವ ಹಿತದೃಷ್ಟಿಯಿಂದ ರೂ.1.00 ಕೋಟಿಯ ವಿಮಾ ಸೌಲಭ್ಯವನ್ನು ಜಾರಿಗೊಳಿಸಲಾಗಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಮೃತ ಸಿಬ್ಬಂದಿಗಳ ಅವಲಂಬಿತ ಕುಟುಂಬದವರಿಗೆ ಅನುಕೂಲವಾಗುವಂತೆ ಇಲಾಖಾ ಗುಂಪು ವಿಮಾ ಪರಿಹಾರ ರೂ.3.00 ಲಕ್ಷಗಳ ವಿಮಾ ಪರಿಹಾರವನ್ನು 2008ನೇ ಸಾಲಿನಿಂದ ಜಾರಿಗೆ ತರಲಾಗಿದ್ದು, ಪ್ರಸ್ತುತ ಈ ಯೋಜನೆಯು ಜಾರಿಯಲ್ಲಿರುತ್ತದೆ ಎಂದಿದೆ.

  • ದೇಶದ ರಸ್ತೆ ಸಾರಿಗೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕೆನರಾ ಬ್ಯಾಂಕ್‌ನಲ್ಲಿ ವೇತನ ಖಾತೆ ಹೊಂದಿ ರಸ್ತೆ ಅಪಘಾತದಿಂದ ಮರಣ ಹೊಂದಿದ ಸಿಬ್ಬಂದಿಗಳ ಕುಟುಂಬದವರಿಗೆ ರೂ.30.00 ಲಕ್ಷಗಳ ವಿಮಾ ಪರಿಹಾರವನ್ನು ಪಾವತಿಸಲು ದಿನಾಂಕ:10.08.2022 ರಂದು ಕೆನರಾ ಬ್ಯಾಂಕ್ ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಒಟ್ಟು 06 ಮೃತ ಸಿಬ್ಬಂದಿಗಳ ಅವಲಂಬಿತ ಕುಟುಂಬದವರಿಗೆ ರೂ.30.00 ಲಕ್ಷಗಳಂತೆ ವಿಮಾ ಪರಿಹಾರ ಮೊತ್ತವನ್ನು ಈಗಾಗಲೇ ನೀಡಲಾಗಿರುತ್ತದೆ.
  • ಸದರಿ ವಿಮಾ ಪರಿಹಾರವನ್ನು ಹೆಚ್ಚಿಸುವ ಸಲುವಾಗಿ ಸಂಸ್ಥೆಯು ಈ ಕೆಳಕಂಡ ಬ್ಯಾಂಕ್‌ಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಕೆಳಕಂಡ ಬ್ಯಾಂಕ್‌ಗಳಲ್ಲಿ ವೇತನ ಖಾತೆ ಹೊಂದಿರುವ ನೌಕರರು ಅಪಘಾತದಿಂದ (ಕರ್ತವ್ಯನಿರತ ಮತ್ತು ಖಾಸಗಿ ಅಪಘಾತ ಸೇರಿದಂತೆ) ಮೃತಪಟ್ಟಲ್ಲಿ ಮೃತಾವಲಂಬಿತರಿಗೆ ವೇತನ ಖಾತೆಯ ವಿಮಾ ಮೊತ್ತವನ್ನು ಪಾವತಿಸಲಾಗುವುದು.
  • ಯೂನಿಯನ್ ಬ್ಯಾಂಕ್                  – ರೂ.65.00 ಲಕ್ಷಗಳು
  • ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ (SBI)          – ರೂ.50.00 ಲಕ್ಷಗಳು
  • ಕೆನರಾ ಬ್ಯಾಂಕ್                                     –  ರೂ.50.00 ಲಕ್ಷಗಳು

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (65.00 ಲಕ್ಷಗಳು) ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು, ಅದರಲ್ಲಿ ಯೂನಿಯನ್ ಬ್ಯಾಂಕ್‌ನಲ್ಲಿ ವೇತನ ಖಾತೆ ಹೊಂದಿ ನೌಕರನ ಕುಟುಂಬಕ್ಕೆ 65.00 ಲಕ್ಷಗಳ ವಿಮಾ ಪರಿಹಾರವನ್ನು ಪಾವತಿಸಲಾಗಿವುದು.

ಮುಂದುವರೆದು, ಮಾರಣಾಂತಿಕ ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದ ಮರಣ ಹೊಂದಿದ ಸಿಬ್ಬಂದಿಗಳ ಅವಲಂಬಿತ ಕುಟುಂಬದವರಿಗೆ ಅಂದರೆ, ಕ್ಯಾನ್ಸರ್, ಪಾರ್ಶ್ವವಾಯು, ಹೃದಯಘಾತ, ಕಿಡ್ನಿ ವೈಫಲ್ಯ ಸೇರಿದಂತೆ ಇತರೆ ಕಾಯಿಲೆಗಳಿಂದ ತಮ್ಮ ಸೇವಾವಧಿಯಲ್ಲಿ ಮರಣ ಹೊಂದುವ ಸಿಬ್ಬಂದಿಗಳ ಅವಲಂಬಿತ ಕುಟುಂಬದವರು ಅನುಭವಿಸುವ ಕಷ್ಟಗಳನ್ನು ಗಮನಿಸಿ, ಸಂಸ್ಥೆಯಿಂದ ಅವರ ಕಷ್ಟಕ್ಕೆ ನೆರವಾಗಲು ಪ್ರಸ್ತುತ ನೀಡುತ್ತಿದ್ದ ರೂ.3.00 ಲಕ್ಷಗಳ ಇಲಾಖಾ ಗುಂಪು ವಿಮಾ ಮೊತ್ತವನ್ನು ರೂ.10.00 ಲಕ್ಷಗಳಿಗೆ ಹೆಚ್ಚಿಸಲಾಗಿದೆ. ಇದರಿಂದ ಮೃತರ ಅವಲಂಬಿತ ಕುಟುಂಬದವರಿಗೆ ರೂ.7.00 ಲಕ್ಷಗಳ ಹೆಚ್ಚುವರಿ ವಿಮಾ ಪರಿಹಾರ ಮೊತ್ತ ಲಭ್ಯವಾಗುತ್ತದೆ. ಸದರಿ ಯೋಜನೆಗೆ ಸಿಬ್ಬಂದಿಗಳ ಮಾಸಿಕ ವಂತಿಕೆ ಪ್ರಸ್ತುತ ರೂ.70/- ಕಡಿತವಾಗುತ್ತಿದ್ದು, ರೂ.350/-ಕ್ಕೆ ಹೆಚ್ಚಿಸಿ ಹಾಗೂ ಸಂಸ್ಥೆಯ ವತಿಯಿಂದ ಪ್ರತಿ ಸಿಬ್ಬಂದಿಗಳ ಪರವಾಗಿ ರೂ.150/-ಗಳ ವಂತಿಗೆಯನ್ನು ಸೇರಿಸಿ ಒಟ್ಟು ರೂ.500/- ಗುಂಪು ವಿಮಾ ವಂತಿಗೆಯನ್ನು ಕಡಿತಗೊಳಿಸಲಾಗುವುದು. ಈ ವಂತಿಗೆಯಿಂದ ಅಪಘಾತ (ಕರ್ತವ್ಯನಿರತ/ಖಾಸಗಿ ಅಪಘಾತ ಸೇರಿದಂತೆ) ದಿಂದ ಮೃತಪಟ್ಟ ಸಿಬ್ಬಂದಿಗಳ ಅವಲಂಬಿತರಿಗೆ ಸಂಸ್ಥೆಯ ವತಿಯಿಂದ ರೂ.50.00 ಲಕ್ಷಗಳ ವಿಮಾ ಪರಿಹಾರವನ್ನು ಪಾವತಿಸಲಾಗುತ್ತದೆ

ಈ ಮೇಲಿನ ಮೂರು ಬ್ಯಾಂಕ್‌ಗಳಲ್ಲಿ ವೇತನ ಖಾತೆ ಹೊಂದಿರುವ ಸಿಬ್ಬಂದಿಗಳು ಅಪಘಾತ (ಕರ್ತವ್ಯನಿರತ/ಖಾಸಗಿ ಅಪಘಾತ ಸೇರಿದಂತೆ) ದಿಂದ ಮೃತಪಟ್ಟಲ್ಲಿ, ಅವರ ಅವಲಂಬಿತ ಕುಟುಂಬದವರಿಗೆ ಬ್ಯಾಂಕ್ ವತಿಯಿಂದ ರೂ.50.00 ಲಕ್ಷಗಳು ಮತ್ತು ಸಂಸ್ಥೆ ವತಿಯಿಂದ ರೂ.50.00 ಲಕ್ಷಗಳು ಒಟ್ಟು ರೂ.1.00 ಕೋಟಿ ವಿಮಾ ಪರಿಹಾರ ಮೊತ್ತ ಪಡೆಯಲು ಅರ್ಹರಿರುತ್ತಾರೆ. ಕಾರ್ಮಿಕರ ಜೀವ ಅಮೂಲ್ಯವಾದದ್ದು, ಜೀವಕ್ಕೆ ಯಾವುದೇ ರೀತಿಯಿಂದ ಬೆಲೆಕಟ್ಟಲಾಗುವುದಿಲ್ಲ. ಆದರೆ ಸಿಬ್ಬಂದಿಗಳು ಮರಣ ಹೊಂದಿದಲ್ಲಿ ಅವರ ಅವಲಂಬಿತ ಕುಟುಂಬದವರಿಗೆ ಆದಷ್ಟು ಆರ್ಥಿಕವಾಗಿ ನೆರವು ನೀಡುವುದು ಸಂಸ್ಥೆಯ ಸದುದ್ದೇಶವಾಗಿದೆ. ಸದರಿ ಯೋಜನೆಯು ದಿನಾಂಕ:19.02.2024 ರಿಂದ ಜಾರಿಗೆ ಬರಲಿದ್ದು, ಈ ದಿನಾಂಕದ ನಂತರದಲ್ಲಿ ಉಂಟಾಗುವ ಮರಣ ಪ್ರಕರಣಗಳಿಗೆ ಮತ್ತು ಅಪಘಾತ ಪ್ರಕರಣಗಳಿಗೆ ಈ ಯೋಜನೆಯು ಅನ್ವಯಿಸುತ್ತದೆ.

ಈಗಾಗಲೇ ಇದ್ದ 50 ಲಕ್ಷ ವೇತನ ಖಾತೆಯ ಮತ್ತು  3 ಲಕ್ಷ ಗುಂಪು ವಿಮಾ ಪರಿಹಾರ ಮೊತ್ತವನ್ನು ಒಟ್ಟು 1 ಕೋಟಿ 15 ಲಕ್ಷದವರೆಗ ಹೆಚ್ಚಿಸಿ, ನೌಕರರ ಮತ್ತು ಅವರ ಕುಟುಂಬದ ಒಳಿತಿನ ಸದುದ್ದೇಶದಿಂದ ಮಾನ್ಯ ವ್ಯವಸ್ಥಾಪಕ ನಿರ್ದೇಶಕರು, ಶ್ರೀ ರಾಚಂದ್ರನ್.ಆರ್ ಬೆಂ.ಮ.ಸಾ.ಸಂಸ್ಥೆಯವರು ಕ್ರಮ ಕೈಗೊಂಡಿರುತ್ತಾರೆ ಎಂದು ತಿಳಿಸಿದೆ.

ಇದೇ ಮೊದಲು: KSRTC ಬಸ್ ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕರ ಅವಲಂಬಿತರಿಗೆ 10 ಲಕ್ಷ ಪರಿಹಾರ ವಿತರಣೆ

BIGG NEWS: ನಾಮಫಲಕ ವಿವಾದ: ಐಎಎಸ್ ಅಧಿಕಾರಿ ಪಿ. ಮಣಿವಣ್ಣನ್ ವರ್ಗಾವಣೆ!?

Share.
Exit mobile version