ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ ಅಪಘಾತ ವಿಮಾ ಪರಿಹಾರವನ್ನು 1 ಕೋಟಿಗೆ ಹೆಚ್ಚಳ ಮಾಡಲಾಗಿತ್ತು. ಈ ಬೆನ್ನಲ್ಲೇ ಬಿಎಂಟಿಸಿ ನೌಕರರಿಗೂ 3 ಲಕ್ಷ ಇದ್ದಂತ ಅಪಘಾತ ವಿಮಾ ಪರಿಹಾರ ಮೊತ್ತವನ್ನು 1 ಕೋಟಿಗೆ ಹೆಚ್ಚಳ ಮಾಡಿ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಬಿಎಂಟಿಸಿ ಎಂ.ಡಿ ರಾಮಚಂದ್ರನ್ ಅವರು, ಬಿಎಂಟಿಸಿ ನೌಕರರಿಗೆ ಅಪಘಾತ ವಿಮಾ ಪರಿಹಾರದ ಮೊತ್ತವನ್ನು 1 ಕೋಟಿಗೆ ಹೆಚ್ಚಳ ಮಾಡಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕೆಎಸ್ ಆರ್ ಟಿಸಿ ನೌಕರರಂತೆ ಬಿಎಂಟಿಸಿ ನೌಕರರಿಗೂ ಅಪಘಾತ ವಿಮಾ ಪರಿಹಾರದ ಮೊತ್ತವನ್ನು 1 ಕೋಟಿಗೆ ಹೆಚ್ಚಿಸೋದಕ್ಕೆ ಸೂಚಿಸಿದ್ದರು. ಅವರ ಸೂಚನೆ ಮೇರೆಗೆ ಹೆಚ್ಚಳ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅಂದಹಾಗೇ ಈಗಾಗಲೇ ಕೆ ಎಸ್ ಆರ್ ಟಿ ಸಿ ನೌಕರರಿಗೆ ಕರ್ತವ್ಯ ನಿರತರಾದಂತ ಸಂದರ್ಭದಲ್ಲಿಯೇ ಅಪಘಾತದಿಂದ ಮೃತಪಟ್ಟರೇ ಅವರ ಅವಲಂಬಿತರು, ಕುಟುಂಬಸ್ಥರಿಗೆ 1 ಕೋಟಿ ಅಪಘಾತ ವಿಮಾ ಪರಿಹಾರವನ್ನು ಜಾರಿಗೊಳಿಸಲಾಗಿದೆ. ಆ ಯೋಜನೆಯನ್ನು ಈಗ ಬಿಎಂಟಿಸಿ ನೌಕರರಿಗೂ ಜಾರಿಗೊಳಿಸಲಾಗಿದೆ.
ಬಿಎಂಟಿಸಿ ನೌಕರರಿಗೆ ಅಪಘಾತ ವಿಮಾ ಪರಿಹಾರವನ್ನು 3 ಲಕ್ಷದಿಂದ 1 ಕೋಟಿಗೆ ಹೆಚ್ಚಳ ಮಾಡಲಾಗಿದ್ದು, ಈ ಯೋಜನೆ ಇಂದಿನಿಂದಲೇ ಜಾರಿಗೊಳ್ಳಲಿದೆ. ಈ ಮೂಲಕ ಬಿಎಂಟಿಸಿ ನೌಕರರಿಗೆ ಗುಡ್ ನ್ಯೂಸ್ ನೀಡಲಾಗಿದೆ.
ಟಾಟಾ ಸಮೂಹದ ಮಾರುಕಟ್ಟೆ ಮೌಲ್ಯವು ಈಗ ಪಾಕಿಸ್ತಾನದ ‘ಸಂಪೂರ್ಣ ಆರ್ಥಿಕತೆಗಿಂತ’ ಹೆಚ್ಚು
BIGG NEWS: ನಾಮಫಲಕ ವಿವಾದ: ಐಎಎಸ್ ಅಧಿಕಾರಿ ಪಿ. ಮಣಿವಣ್ಣನ್ ವರ್ಗಾವಣೆ!?