ಬೆಂಗಳೂರು: BMTC ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ನಗರದ ಈ ಮಾರ್ಗದಲ್ಲಿ ವಾಯು ವಜ್ರ ಹಾಗೂ ಸಾಮಾನ್ಯ ಸಾರಿಗೆ ಬಸ್ ಸಂಚಾರವನ್ನು ನಿಗಮದಿಂದ ಪರಿಚಯಲಿಸಲಾಗುತ್ತಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಸೇವಾ ಸಂಸ್ಥೆಯು, ಬೆಂಗಳೂರು ನಗರ ಹಾಗೂ ಹೊರ ವಲಯದ ಪ್ರಯಾಣಿಕರ ದಟ್ಟಣೆ/ಬೇಡಿಕೆಗನುಗುಣವಾಗಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸುವ ಧ್ಯೇಯದೊಂದಿಗೆ ಪ್ರಯಾಣಿಕರಿಗೆ ದಕ್ಷ, ಉತ್ತಮ, ಸುಲಭ ಸಾರಿಗೆ ಸೇವೆಯನ್ನು ಒದಗಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಸಾರ್ವಜನಿಕ ಪ್ರಯಾಣಿಕರ ಹೊಣೆಗಾರಿಕೆಯಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಿಂದ 25.0 ಕಿ.ಮೀ. ವರೆಗೆ ಕಾರ್ಯಾಚರಣೆ ವ್ಯಾಪ್ತಿಯನ್ನು ಹೊಂದಿದ್ದು, ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಸಾರಿಗೆ ಸೌಲಭ್ಯ ಒದಗಿಸುವ ಒದಗಿಸುವ ಏಕೈಕ ಸಾರಿಗೆ ಸಂಸ್ಥೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಪ್ರತಿದಿನ 5,584 ಬಸ್ಸುಗಳಿಂದ 57,820 ಸುತ್ತುವಳಿಗಳನ್ನು 11.40 ಲಕ್ಷ ಕಿ.ಮೀ.ಗಳಲ್ಲಿ ಆಚರಣೆಗೊಳಿಸಲಾಗುತ್ತಿದೆ. ಪ್ರತಿದಿನ ಸರಾಸರಿ 40 ಲಕ್ಷ ಪ್ರಯಾಣಿಕರು ಸಂಸ್ಥೆಯ ಸಾರಿಗೆಗಳ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದಿದೆ.
ಬೆಂಗಳೂರು ನಗರದ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಸಂಸ್ಥೆಯಲ್ಲಿ ಹೊಸ ಮಾರ್ಗಗಳನ್ನು ಪರಿಚಯಿಸುವುದು, ಹಾಲಿಯಿರುವ ಮಾರ್ಗಗಳಲ್ಲಿ ಸಾರಿಗೆಗಳನ್ನು ಹೆಚ್ಚಿಸುವುದು ಮತ್ತು ಪ್ರಯಾಣಿಕರ ಸಂಚಾರ ದಟ್ಟಣೆಗನುಗುಣವಾಗಿ ಸಾರಿಗೆಗಳನ್ನು ಪರಿಷ್ಕರಿಸಿ ಕಾರ್ಯಾಚರಣೆಗೊಳಿಸಲಾಗುತ್ತಿದೆ. ಶಕ್ತಿಯೋಜನೆ ಜಾರಿಗೆ ನಂತರದಲ್ಲಿ ಪ್ರತಿದಿನ ಒಟ್ಟು 1,174 ಹೆಚ್ಚುವರಿ ಸುತ್ತುವಳಿಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಹೇಳಿದೆ.
ದಿನಾಂಕ 19.02.2024 ರಿಂದ ಜಾರಿಗೆ ಬರುವಂತೆ ಹವಾನಿಯಂತ್ರಿತ ಮತ್ತು ಹವಾನಿಯಂತ್ರಣ ರಹಿತ ಸಾರಿಗೆಗಳನ್ನು ಪರಿಚಯಿಸಿದ್ದು, ವಿವರ ಕೆಳಕಂಡಂತಿರುತ್ತದೆ.
ವಾಯು ವಜ್ರ ಸಾರಿಗೆ
- ನಗರದ ವಿವಿಧ ಪ್ರಮುಖ ಸ್ಥಳಗಳಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಸ್ತುತ 18 ಮಾರ್ಗಗಳಲ್ಲಿ, 144 ಅನುಸೂಚಿಗಳಿಂದ ಒಟ್ಟು 988 ಸುತ್ತುವಳಿಗಳನ್ನು ಆಚರಣೆಗೊಳಿಸುತ್ತಿದ್ದು, ಇದರ ಜೊತೆಗೆ ಸರ್ಜಾಪುರದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಸರ್ಜಾಪುರದಿಂದ ದೊಡ್ಡಕನ್ನಲ್ಲಿ, ಬೆಳ್ಳಂದೂರು ಗೇಟ್, ಸರ್ಜಾಪುರ ರಸ್ತೆ ಜಂಕ್ಷನ್, ಮಾರತಹಳ್ಳಿ ಬ್ರಿಡ್ಜ್, ಹೆಬ್ಬಾಳ ಮಾರ್ಗವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾರ್ಗ ಸಂಖ್ಯೆ: ಕೆಐಎ-8ಡಿ ರಲ್ಲಿ 4 ಅನುಸೂಚಿಗಳಿಂದ 14 ಸುತ್ತುವಳಿಗಳನ್ನು ಆಚರಣೆಗೊಳಿಸಲಾಗುವುದು.
ಕ್ರ. ಸಂ | ಮಾರ್ಗಸಂಖ್ಯೆ | ಎಲ್ಲಿಂದ | ಎಲ್ಲಿಗೆ | ಮಾರ್ಗ | ಬಸ್ಸುಗಳ ಸಂಖ್ಯೆ |
1 | ಕೆಐಎ-8ಡಿ | ಸರ್ಜಾಪುರ ಬಸ್ ನಿಲ್ದಾಣ | ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ | ದೊಮ್ಮಸಂದ್ರ, ಕೊಡತಿಗೇಟ್, ದೊಡ್ಡಕನ್ನಲ್ಲಿ, ಕಾಡುಬೀಸನಹಳ್ಳಿ, ಮಾರತ್ಹಳ್ಳಿ ಬ್ರಿಡ್ಜ್, ಹೆಬ್ಬಾಳ, ಹುಣಸಮಾರನಹಳ್ಳಿ | 4 |
ಮಾರ್ಗ ಸಂಖ್ಯೆ :ಕೆಐಎ-8ಡಿ | |
ವೇಳಾಪಟ್ಟಿ (ನಿರ್ಗಮನ ಸಮಯ) | |
ಸರ್ಜಾಪುರ ಬಸ್ ನಿಲ್ದಾಣ | ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
0700, 0800, 0900, 1010, 1950, 2130 & 2305 | 0400, 0500, 0550, 0725, 1710, 1810 & 2015 |
ವಜ್ರ ಸಾರಿಗೆ
- ಸರ್ಜಾಪುರದಿಂದ ದೊಡ್ಡಕನ್ನಲ್ಲಿ, ಬೆಳ್ಳಂದೂರು ಗೇಟ್, ಸರ್ಜಾಪುರ ರಸ್ತೆ ಜಂಕ್ಷನ್, ಮಾರತಹಳ್ಳಿ ಬ್ರಿಡ್ಜ್ ಮಾರ್ಗವಾಗಿ ಹೆಬ್ಬಾಳಕ್ಕೆ ಮಾರ್ಗ ಸಂಖ್ಯೆ: ವಿ-500-ಹೆಚ್ಎಸ್ ರಲ್ಲಿ 4 ಅನುಸೂಚಿಗಳಿಂದ 16 ಸುತ್ತುವಳಿಗಳನ್ನು ಆಚರಣೆಗೊಳಿಸಲಾಗುವುದು.
- ಶಿವಾಜಿನಗರದಿಂದ ಶಾಂತಿನಗರ, ಹುಳಿಮಾವು ಮಾರ್ಗವಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಮಾರ್ಗ ಸಂಖ್ಯೆ: ವಿ-368 ರಲ್ಲಿ 4 ಅನುಸೂಚಿಗಳಿಂದ 30 ಸುತ್ತುವಳಿಗಳನ್ನು ಆಚರಣೆಗೊಳಿಸಲಾಗುವುದು.
ಕ್ರ. ಸಂ | ಮಾರ್ಗಸಂಖ್ಯೆ | ಎಲ್ಲಿಂದ | ಎಲ್ಲಿಗೆ | ಮಾರ್ಗ | ಬಸ್ಸುಗಳ ಸಂಖ್ಯೆ |
1 | ವಿ-500ಹೆಚ್ಎಸ್ | ಸರ್ಜಾಪುರ ಬಸ್ ನಿಲ್ದಾಣ | ಹೆಬ್ಬಾಳ | ದೊಮ್ಮಸಂದ್ರ, ಕೊಡತಿಗೇಟ್, ದೊಡ್ಡಕನ್ನಲ್ಲಿ, ಕಾಡುಬೀಸನಹಳ್ಳಿ, ಮಾರತ್ಹಳ್ಳಿ ಬ್ರಿಡ್ಜ್ | 4 |
2 | ವಿ-368 | ಶಿವಾಜಿನಗರ ಬಸ್ ನಿಲ್ದಾಣ | ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ | ಶಾಂತಿನಗರ ಟಿಟಿಎಂಸಿ, ಡೈರಿ ಸರ್ಕಲ್, ಗುರಪ್ಪನಪಾಳ್ಯ, ಗೊಟ್ಟಿಗೆರೆ | 4 |
ಮಾರ್ಗ ಸಂಖ್ಯೆ : 500ಹೆಚ್ಎಸ್ | |
ವೇಳಾಪಟ್ಟಿ (ನಿರ್ಗಮನ ಸಮಯ) | |
ಸರ್ಜಾಪುರ ಬಸ್ ನಿಲ್ದಾಣ | ಹೆಬ್ಬಾಳ |
0730, 0800, 0830, 0900, 1945, 2015, 2045 & 2115 | 0520, 0545. 0615, 0645, 1730, 1800, 1830 & 1900 |
ಮಾರ್ಗ ಸಂಖ್ಯೆ : ವಿ-368 | |
ವೇಳಾಪಟ್ಟಿ (ನಿರ್ಗಮನ ಸಮಯ) | |
ಶಿವಾಜಿನಗರ ಬಸ್ ನಿಲ್ದಾಣ | ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ |
0610, 0640, 0710, 0745, 0915, 0950, 1045, 1115, 1430, 1545, 1615, 1645, 1845, 1915 & 1945 | 0915, 1115, 1200, 1230, 1300, 1620, 1715, 1745 & 1815, |
ಜಿಗಣಿ | |
0745, 0810, 0845, 2045, 2115 & 2145 |
ಸಾಮಾನ್ಯ ಸಾರಿಗೆ
- ಶಿವಾಜಿನಗರದಿಂದ ಶಾಂತಿನಗರ, ಹುಳಿಮಾವು ಮಾರ್ಗವಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಮಾರ್ಗ ಸಂಖ್ಯೆ: 368 ರಲ್ಲಿ 8 ಅನುಸೂಚಿಗಳಿಂದ 60 ಸುತ್ತುವಳಿಗಳನ್ನು ಆಚರಣೆಗೊಳಿಸಲಾಗುವುದು.
ಕ್ರ. ಸಂ | ಮಾರ್ಗಸಂಖ್ಯೆ | ಎಲ್ಲಿಂದ | ಎಲ್ಲಿಗೆ | ಮಾರ್ಗ | ಬಸ್ಸುಗಳ ಸಂಖ್ಯೆ |
1 | 368 | ಶಿವಾಜಿನಗರ ಬಸ್ ನಿಲ್ದಾಣ | ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ | ಶಾಂತಿನಗರ ಟಿಟಿಎಂಸಿ, ಡೈರಿ ಸರ್ಕಲ್ , ಗುರಪ್ಪನಪಾಳ್ಯ, ಗೊಟ್ಟಿಗೆರೆ | 8 |
ಮಾರ್ಗ ಸಂಖ್ಯೆ : 368 | |
ವೇಳಾಪಟ್ಟಿ (ನಿರ್ಗಮನ ಸಮಯ) | |
ಶಿವಾಜಿನಗರ ಬಸ್ ನಿಲ್ದಾಣ | ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ |
0600, 0625, 0655, 0715, 0730, 0800, 0830, 0900, 0930, 1000, 1015, 1030, 1100, 1130, 1200, 1330, 1400, 1420, 1500, 1530, 1600, 1630, 1700, 1730, 1800, 1830, 1900, 1930, 2000, 2030, 2100 &2200 | 0450, 0740, 0810, 0830, 0845, 0900, 0930, 1000, 1530, 1700, 1730, 1800, 1830, 1900, 1930 & 2000 |
ಜಿಗಣಿ | |
0530, 0600, 0630, 0700, 1145, 1200, 1215, 1330, 1400, 1430, 1500, 1600 & 1620 |
ಕಾರ್ಮಿಕ ಉಪಕ್ರಮಗಳು
- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಮೃತ ಸಿಬ್ಬಂದಿಗಳ ಅವಲಂಬಿತ ಕುಟುಂಬದವರಿಗೆ ಅನುಕೂಲವಾಗುವಂತೆ ಇಲಾಖಾ ಗುಂಪು ವಿಮಾ ಪರಿಹಾರ ರೂ.3.00 ಲಕ್ಷಗಳ ವಿಮಾ ಪರಿಹಾರವನ್ನು 2008ನೇ ಸಾಲಿನಿಂದ ಜಾರಿಗೆ ತರಲಾಗಿದ್ದು, ಪ್ರಸ್ತುತ ಈ ಯೋಜನೆಯು ಜಾರಿಯಲ್ಲಿರುತ್ತದೆ.
- ದೇಶದ ರಸ್ತೆ ಸಾರಿಗೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕೆನರಾ ಬ್ಯಾಂಕ್ನಲ್ಲಿ ವೇತನ ಖಾತೆ ಹೊಂದಿ ರಸ್ತೆ ಅಪಘಾತದಿಂದ ಮರಣ ಹೊಂದಿದ ಸಿಬ್ಬಂದಿಗಳ ಕುಟುಂಬದವರಿಗೆ ರೂ.30.00 ಲಕ್ಷಗಳ ವಿಮಾ ಪರಿಹಾರವನ್ನು ಪಾವತಿಸಲು ದಿನಾಂಕ:10.08.2022 ರಂದು ಕೆನರಾ ಬ್ಯಾಂಕ್ ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಒಟ್ಟು 06 ಮೃತ ಸಿಬ್ಬಂದಿಗಳ ಅವಲಂಬಿತ ಕುಟುಂಬದವರಿಗೆ ರೂ.30.00 ಲಕ್ಷಗಳಂತೆ ವಿಮಾ ಪರಿಹಾರ ಮೊತ್ತವನ್ನು ಈಗಾಗಲೇ ನೀಡಲಾಗಿರುತ್ತದೆ.
- ಸದರಿ ವಿಮಾ ಪರಿಹಾರವನ್ನು ಹೆಚ್ಚಿಸುವ ಸಲುವಾಗಿ ಸಂಸ್ಥೆಯು ಈ ಕೆಳಕಂಡ ಬ್ಯಾಂಕ್ಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಕೆಳಕಂಡ ಬ್ಯಾಂಕ್ಗಳಲ್ಲಿ ವೇತನ ಖಾತೆ ಹೊಂದಿರುವ ನೌಕರರು ಅಪಘಾತದಿಂದ (ಕರ್ತವ್ಯನಿರತ ಮತ್ತು ಖಾಸಗಿ ಅಪಘಾತ ಸೇರಿದಂತೆ) ಮೃತಪಟ್ಟಲ್ಲಿ ಮೃತಾವಲಂಬಿತರಿಗೆ ವೇತನ ಖಾತೆಯ ವಿಮಾ ಮೊತ್ತವನ್ನು ಪಾವತಿಸಲಾಗುವುದು.
- ಯೂನಿಯನ್ ಬ್ಯಾಂಕ್ – ರೂ.65.00 ಲಕ್ಷಗಳು
- ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ (SBI) – ರೂ.50.00 ಲಕ್ಷಗಳು
- ಕೆನರಾ ಬ್ಯಾಂಕ್ – ರೂ.50.00 ಲಕ್ಷಗಳು
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (65.00 ಲಕ್ಷಗಳು) ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು, ಅದರಲ್ಲಿ ಯೂನಿಯನ್ ಬ್ಯಾಂಕ್ನಲ್ಲಿ ವೇತನ ಖಾತೆ ಹೊಂದಿ ನೌಕರನ ಕುಟುಂಬಕ್ಕೆ 65.00 ಲಕ್ಷಗಳ ವಿಮಾ ಪರಿಹಾರವನ್ನು ಪಾವತಿಸಲಾಗಿವುದು.
ಮುಂದುವರೆದು, ಮಾರಣಾಂತಿಕ ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದ ಮರಣ ಹೊಂದಿದ ಸಿಬ್ಬಂದಿಗಳ ಅವಲಂಬಿತ ಕುಟುಂಬದವರಿಗೆ ಅಂದರೆ, ಕ್ಯಾನ್ಸರ್, ಪಾರ್ಶ್ವವಾಯು, ಹೃದಯಘಾತ, ಕಿಡ್ನಿ ವೈಫಲ್ಯ ಸೇರಿದಂತೆ ಇತರೆ ಕಾಯಿಲೆಗಳಿಂದ ತಮ್ಮ ಸೇವಾವಧಿಯಲ್ಲಿ ಮರಣ ಹೊಂದುವ ಸಿಬ್ಬಂದಿಗಳ ಅವಲಂಬಿತ ಕುಟುಂಬದವರು ಅನುಭವಿಸುವ ಕಷ್ಟಗಳನ್ನು ಗಮನಿಸಿ, ಸಂಸ್ಥೆಯಿಂದ ಅವರ ಕಷ್ಟಕ್ಕೆ ನೆರವಾಗಲು ಪ್ರಸ್ತುತ ನೀಡುತ್ತಿದ್ದ ರೂ.3.00 ಲಕ್ಷಗಳ ಇಲಾಖಾ ಗುಂಪು ವಿಮಾ ಮೊತ್ತವನ್ನು ರೂ.10.00 ಲಕ್ಷಗಳಿಗೆ ಹೆಚ್ಚಿಸಲಾಗಿದೆ. ಇದರಿಂದ ಮೃತರ ಅವಲಂಬಿತ ಕುಟುಂಬದವರಿಗೆ ರೂ.7.00 ಲಕ್ಷಗಳ ಹೆಚ್ಚುವರಿ ವಿಮಾ ಪರಿಹಾರ ಮೊತ್ತ ಲಭ್ಯವಾಗುತ್ತದೆ. ಸದರಿ ಯೋಜನೆಗೆ ಸಿಬ್ಬಂದಿಗಳ ಮಾಸಿಕ ವಂತಿಕೆ ಪ್ರಸ್ತುತ ರೂ.70/- ಕಡಿತವಾಗುತ್ತಿದ್ದು, ರೂ.350/-ಕ್ಕೆ ಹೆಚ್ಚಿಸಿ ಹಾಗೂ ಸಂಸ್ಥೆಯ ವತಿಯಿಂದ ಪ್ರತಿ ಸಿಬ್ಬಂದಿಗಳ ಪರವಾಗಿ ರೂ.150/-ಗಳ ವಂತಿಗೆಯನ್ನು ಸೇರಿಸಿ ಒಟ್ಟು ರೂ.500/- ಗುಂಪು ವಿಮಾ ವಂತಿಗೆಯನ್ನು ಕಡಿತಗೊಳಿಸಲಾಗುವುದು. ಈ ವಂತಿಗೆಯಿಂದ ಅಪಘಾತ (ಕರ್ತವ್ಯನಿರತ/ಖಾಸಗಿ ಅಪಘಾತ ಸೇರಿದಂತೆ) ದಿಂದ ಮೃತಪಟ್ಟ ಸಿಬ್ಬಂದಿಗಳ ಅವಲಂಬಿತರಿಗೆ ಸಂಸ್ಥೆಯ ವತಿಯಿಂದ ರೂ.50.00 ಲಕ್ಷಗಳ ವಿಮಾ ಪರಿಹಾರವನ್ನು ಪಾವತಿಸಲಾಗುತ್ತದೆ
ಈ ಮೇಲಿನ ಮೂರು ಬ್ಯಾಂಕ್ಗಳಲ್ಲಿ ವೇತನ ಖಾತೆ ಹೊಂದಿರುವ ಸಿಬ್ಬಂದಿಗಳು ಅಪಘಾತ (ಕರ್ತವ್ಯನಿರತ/ಖಾಸಗಿ ಅಪಘಾತ ಸೇರಿದಂತೆ) ದಿಂದ ಮೃತಪಟ್ಟಲ್ಲಿ, ಅವರ ಅವಲಂಬಿತ ಕುಟುಂಬದವರಿಗೆ ಬ್ಯಾಂಕ್ ವತಿಯಿಂದ ರೂ.50.00 ಲಕ್ಷಗಳು ಮತ್ತು ಸಂಸ್ಥೆ ವತಿಯಿಂದ ರೂ.50.00 ಲಕ್ಷಗಳು ಒಟ್ಟು ರೂ.1.00 ಕೋಟಿ ವಿಮಾ ಪರಿಹಾರ ಮೊತ್ತ ಪಡೆಯಲು ಅರ್ಹರಿರುತ್ತಾರೆ. ಕಾರ್ಮಿಕರ ಜೀವ ಅಮೂಲ್ಯವಾದದ್ದು, ಜೀವಕ್ಕೆ ಯಾವುದೇ ರೀತಿಯಿಂದ ಬೆಲೆಕಟ್ಟಲಾಗುವುದಿಲ್ಲ. ಆದರೆ ಸಿಬ್ಬಂದಿಗಳು ಮರಣ ಹೊಂದಿದಲ್ಲಿ ಅವರ ಅವಲಂಬಿತ ಕುಟುಂಬದವರಿಗೆ ಆದಷ್ಟು ಆರ್ಥಿಕವಾಗಿ ನೆರವು ನೀಡುವುದು ಸಂಸ್ಥೆಯ ಸದುದ್ದೇಶವಾಗಿದೆ. ಸದರಿ ಯೋಜನೆಯು ದಿನಾಂಕ:19.02.2024 ರಿಂದ ಜಾರಿಗೆ ಬರಲಿದ್ದು, ಈ ದಿನಾಂಕದ ನಂತರದಲ್ಲಿ ಉಂಟಾಗುವ ಮರಣ ಪ್ರಕರಣಗಳಿಗೆ ಮತ್ತು ಅಪಘಾತ ಪ್ರಕರಣಗಳಿಗೆ ಈ ಯೋಜನೆಯು ಅನ್ವಯಿಸುತ್ತದೆ.
ಈಗಾಗಲೇ ಇದ್ದ 50 ಲಕ್ಷ ವೇತನ ಖಾತೆಯ ಮತ್ತು 3 ಲಕ್ಷ ಗುಂಪು ವಿಮಾ ಪರಿಹಾರ ಮೊತ್ತವನ್ನು ಒಟ್ಟು 1 ಕೋಟಿ 15 ಲಕ್ಷದವರೆಗ ಹೆಚ್ಚಿಸಿ, ನೌಕರರ ಮತ್ತು ಅವರ ಕುಟುಂಬದ ಒಳಿತಿನ ಸದುದ್ದೇಶದಿಂದ ಬೆಂ.ಮ.ಸಾ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು, ರಾಚಂದ್ರನ್.ಆರ್ ಕ್ರಮ ಕೈಗೊಂಡಿರುತ್ತಾರೆ.
BREAKING: ಭಾರತೀಯ ವೃತ್ತಿಪರರಿಗೆ ಬ್ಯಾಲೆಟ್ ಸಿಸ್ಟಮ್ ಮೂಲಕ 3,000 ವೀಸಾ ನೀಡಲು ‘ಯುಕೆ’ ಒಪ್ಪಿಗೆ
ಹೇಗಿದೆ ನೋಡಿ ಮೊದಲ ‘ಚಾಲಕ ರಹಿತ’ ನಮ್ಮ ಮೆಟ್ರೋ ರೈಲು : ಫೋಟೋ ರಿವಿಲ್ ಮಾಡಿದ ಬಿಎಂಆರ್ಸಿಎಲ್