ಬೆಂಗಳೂರು: ಹಳದಿ ಹಾಗೂ ಹಸಿರು ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭಿಸಲಾಗಿದೆ. ಬೆಂಗಳೂರಿನ ಜನತೆಗೆ ಉತ್ತಮ ಸೇವೆಯನ್ನು ನಮ್ಮ ಮೆಟ್ರೋ ನೀಡುತ್ತಿದೆ. ಈ ಬೆನ್ನಲ್ಲೇ ಶೀಘ್ರದಲ್ಲೇ ಬೆಂಗಳೂರಿಗರಿಗೆ ಗುಡ್ ನ್ಯೂಸ್ ಎನ್ನುವಂತೆ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆರಂಭಗೊಳ್ಳಲಿದೆ.
ಹಳದಿ ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭದ ಬಗ್ಗೆ ಬಿಎಂಆಆರ್ ಸಿಎಲ್ ಬಿಗ್ ಅಪ್ ಡೇಟ್ ನೀಡಿದ್ದು, ನಮ್ಮ ಮೆಟ್ರೋ ರೀಚ್-5 (ಹಳದಿ ಮಾರ್ಗ) ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಪಗತಿಯ ಸ್ಥಿತಿ ಸಿವಿಲ್ / ಸಿಸ್ಟಂ ಕಾಮಗಾರಿಗಳು ಗಣನೀಯವಾಗಿ ಪೂರ್ಣಗೊಂಡಿವೆ ಎಂದಿದೆ.
ಪ್ರಗತಿಯ ಯೋಜನೆ
• ಪ್ರೋಟೋ-ಟೈಪ್ ರೈಲಿನ ಪರೀಕ್ಷೆ ಪ್ರಗತಿಯಲ್ಲಿದೆ.
• ರೈಲ್ವೆ ಮಂಡಳಿಯು ಟ್ರಾಕ್ಷನ್‌ಗೆ ಸಂಬಂಧಿಸಿದಂತೆ ತಾಂತ್ರಿಕ ಮಂಜೂರಾತಿ ನೀಡಿದೆ.
• ಸಿಗ್ನಲಿಂಗ್ ಸಿಸ್ಮಮ್ ಮತ್ತು ರೋಲಿಂಗ್ ಸ್ಟಾಕ್ ಪೂರ್ವಭಾವಿ ಹಂತದಲ್ಲಿದೆ.
ರೋಲಿಂಗ್ ಸ್ಕ್ಯಾಕ್ ಲಭ್ಯತೆ
• ನವೆಂಬರ್-ಡಿಸೆಂಬರ್ 2024ರ ವೇಳೆಗೆ 3 ರೈಲು ಸೆಟ್‌ಗಳು ಲಭ್ಯವಿರಲಿದೆ
• ಜನವರಿ 2025 ರ ವೇಳೆಗೆ ಈ ಮಾರ್ಗದಲ್ಲಿ ಮೂರು ರೈಲುಗಳೊಂದಿಗೆ 30 ನಿಮಿಷಗಳ ಆವರ್ತನದಲ್ಲಿ ಕಾರ್ಯಾರಂಭಿಸುವ ಗುರಿಯನ್ನು ಹೊಂದಿದೆ.
• ಡಿಸೆಂಬರ್ 2024ರಲ್ಲಿ ರೈಲ್ವೆ ಸುರಕ್ಷತ ಆಯುಕ್ತರಿಂದ ಶಾಸನಬದ್ಧ ಪರೀಕ್ಷೆ ನಡೆಸಲು ಯೋಜಿಸಲಾಗಿದೆ
• ಮಾರ್ಚ್ 2025 ರಿಂದ ಪ್ರತಿ ತಿಂಗಳು 2 ರೈಲು ಸೆಟ್ ಗಳನ್ನು ಟಿಆರ್ ಎಸ್ ಎಲ್ ಸಂಸ್ಥೆಯಿಂದ ಪಡೆಯಲಾಗುತ್ತದೆ ಹಾಗೂ ಹಂತ ಹಂತವಾಗಿ ಪಯಾಣದ ಆವರ್ತನವನ್ನು ಕಡಿಮೆ ಗೊಳಿಸಲಾಗುವುದು.
• ಆಗಸ್ಟ್ 2025 ರೊಳಗೆ ರೀಚ್ 5 ಮಾರ್ಗಕ್ಕೆ ಬೇಕಾಗಿರುವ ಎಲ್ಲಾ 15 ರೈಲುಗಳ ಸೆಟ್‌ಗಳು ಲಭ್ಯವಿರುತ್ತವೆ ಎಂದು ತಿಳಿಸಿದೆ.
ರೀಚ್-5 (ಹಳದಿ ಮಾರ್ಗ) ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಇಂದಿನ ಪ್ರಗತಿಯ ಸ್ಥಿತಿ
Status on Commissioning of Reach-5 Line (Yellow Line)
from R.V. Road to Bommasandra-as on date pic.twitter.com/YEpTTApKXw— ನಮ್ಮ ಮೆಟ್ರೋ (@OfficialBMRCL) October 5, 2024
ವೈದ್ಯಕೀಯ ವ್ಯಾಸಂಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ನೋಂದಣಿಗೆ ದಿನಾಂಕ ವಿಸ್ತರಿಸಿ KEA ಆದೇಶ
‘ಸಾವರ್ಕರ್ ಮಾನನಷ್ಟ ಮೊಕದ್ದಮೆ’: ರಾಹುಲ್ ಗಾಂಧಿಗೆ ಪುಣೆ ಕೋರ್ಟ್ ಸಮನ್ಸ್