ಶಿವಮೊಗ್ಗ : 2024-25ನೇ ಸಾಲಿನಲ್ಲಿ ಪ್ರಥಮ ವರ್ಷದ ಪೂರ್ಣಾವಧಿ ಪಿಹೆಚ್.ಡಿ. ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಅರ್ಹ ಹೊಸ ವಿದ್ಯಾರ್ಥಿಗಳಿಂದ ಮಾಸಿಕ ವ್ಯಾಸಂಗ ವೇತನ/ಫೆಲೋಶಿಫ್‌ಗಾಗಿ ಆಫ್‌ಲೈನ್ ಮೂಲಕ ಆಹ್ವಾನಿಸಲಾಗಿದ್ದ ಅರ್ಜಿ ಅವಧಿಯನ್ನು ಫೆ.10 ರವರೆಗೆ ವಿಸ್ತರಿಸಲಾಗಿದೆ. ಅರ್ಜಿಗಳನ್ನು ಆಹ್ವಾನಿಸಲಾಗಿದೆ.
2024-25ನೇ ಸಾಲಿನಲ್ಲಿ ಪೂರ್ಣಾವಧಿ ಪಿಹೆಚ್.ಡಿ. ಅಧ್ಯಯನ ಪ್ರಾರಂಭಿಸಿರುವ ದಿನಾಂಕ:10.1.2024 ಮತ್ತು ಅದರ ನಂತರ ಪ್ರಥಮ ವರ್ಷದ ಪಿಹೆಚ್.ಡಿ ಪ್ರಾರಂಭಿಸಿರುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ- 1, II(ಎ), III(ಎ) ಹಾಗೂ III(ಬಿ)ಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್‌ಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕರ್ನಾಟಕದ ಶಾಸನಬದ್ಧ ವಿಶ್ವವಿದ್ಯಾಲಯಗಳಲ್ಲಿ/ಅಧೀನಕ್ಕೆ ಒಳಪಡುವ ಸಂಸ್ಥೆಗಳಲ್ಲಿ ಪ್ರಥಮ ವರ್ಷದ ಪಿಹೆಚ್.ಡಿ. ಅಧ್ಯಯನ ಮಾಡುತ್ತಿರುವ ಹೊಸ ವಿದ್ಯಾರ್ಥಿಗಳು ಮಾತ್ರ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ದಿನಾಂಕ:20-01-2025 ಕೊನೆಯ ದಿನಾಂಕವೆಂದು ನಿಗದಿಪಡಿಸಲಾಗಿತ್ತು. ವಿದ್ಯಾರ್ಥಿಗಳ ಮತ್ತು ಪೋಷಕರ ಮನವಿಯಂತೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಫೆ.10 ರವರೆಗೆ ವಿಸ್ತರಿಸಲಾಗಿದೆ.
ವಿದ್ಯಾರ್ಥಿಗಳು ಆನ್‌ಲೈನ್ ಅರ್ಜಿ ಪ್ರತಿ ಹಾಗೂ ಒಂದು ಸೆಟ್ ದೃಢೀಕೃತ ದಾಖಲೆಗಳನ್ನು ಸಂಬಂಧಪಟ್ಟ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಗೆ ಸಲ್ಲಿಸುವುದು. ಹೆಚ್ಚಿನ ವಿವರಗಳಿಗಾಗಿ ಇಲಾಖಾ ವೆಬ್‌ಸೈಟ್ https://www.bcwd.karnataka.gov.in ನೋಡಬಹುದು.
ಹಾಗೂ ಸಹಾಯವಾಣಿ ಸಂಖ್ಯೆ:8050770004 ಮತ್ತು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಕಛೇರಿ ಶಿವಮೊಗ್ಗ ದೂರವಾಣಿ ಸಂಖ್ಯೆ: 08182-222129 ನ್ನು ಸಂಪರ್ಕಿಸಬಹುದೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
SHOCKING : ಹಾಸ್ಟೆಲ್ ನಲ್ಲಿ `ಲೋ ಬಿಪಿ’ಯಿಂದ ಕುಸಿದು ಬಿದ್ದು 8 ನೇ ತರಗತಿ ವಿದ್ಯಾರ್ಥಿ ಸಾವು.!