ನವದೆಹಲಿ : ಅಸ್ತಮಾ ಎಲ್ಲಾ ವಯಸ್ಸಿನ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಆದ್ರೆ, ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಲ್ಲಿಯವರೆಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಇಲ್ಲಿಯವರೆಗೆ ವೈದ್ಯರು ಆಹಾರ ಮತ್ತು ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳ ಮೂಲಕ ಚಿಕಿತ್ಸೆ ನೀಡುತ್ತಿದ್ದರು. ಇದು ದೀರ್ಘಕಾಲದ ಆರೋಗ್ಯ ಸಮಸ್ಯೆಯಾಗಿ ಬದಲಾಗಿದೆ.
ಆದರೆ ಇತ್ತೀಚೆಗೆ, ಅಸ್ತಮಾ ಚಿಕಿತ್ಸೆಯಲ್ಲಿ ವಿಜ್ಞಾನಿಗಳು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಸುಮಾರು 50 ವರ್ಷಗಳ ಕಠಿಣ ಪರಿಶ್ರಮದ ನಂತ್ರ ಅವರು ಇದಕ್ಕೆ ಮದ್ದು ಕಂಡುಕೊಂಡರು. ತೀವ್ರತರವಾದ ಅಸ್ತಮಾಗೆ ‘ಬೆನ್ರಾಲಿಝುಮಾಬ್’ ಎಂಬ ಔಷಧವನ್ನ ಕಂಡುಹಿಡಿದಿರುವುದಾಗಿ ವಿಜ್ಞಾನಿಗಳು ಹೇಳಿದ್ದಾರೆ. ತುರ್ತು ಆಸ್ಪತ್ರೆಗೆ ದಾಖಲಾಗುವುದನ್ನ ಕಡಿಮೆ ಮಾಡಲು ಮತ್ತು ಆಸ್ತಮಾ ಮತ್ತು COPD ಪರಿಸ್ಥಿತಿಗಳನ್ನು ತಡೆಯಲು ಇದನ್ನು ಬಳಸಬಹುದು ಎಂದು ಅವರು ಹೇಳುತ್ತಾರೆ.
ಬೆನ್ರಾಲಿಜುಮಾಬ್ ಒಂದು ಮೊನೊಕ್ಲೋನಲ್ ಪ್ರತಿಕಾಯವಾಗಿದೆ. ಶ್ವಾಸಕೋಶದ ಉರಿಯೂತವನ್ನು ಕಡಿಮೆ ಮಾಡಲು ಇಯೊಸಿನೊಫಿಲ್ಸ್ ಎಂಬ ನಿರ್ದಿಷ್ಟ ಬಿಳಿ ರಕ್ತ ಕಣಗಳನ್ನು ಗುರಿಯಾಗಿಟ್ಟುಕೊಂಡು ಇದು ಕಾರ್ಯನಿರ್ವಹಿಸುತ್ತದೆ. ಇದನ್ನು ಅಸ್ತಮಾ ಚಿಕಿತ್ಸೆಗೆ ಬಳಸಲಾಗುತ್ತದೆ.
‘ಬೆನ್ರಾಲಿಜುಮಾಬ್’ ಸಂಪೂರ್ಣ ಸುರಕ್ಷಿತ ಮತ್ತು ಪರಿಣಾಮಕಾರಿ ಔಷಧ ಎನ್ನುತ್ತಾರೆ ವೈದ್ಯರು. ಈಗಾಗಲೇ ತೀವ್ರವಾದ ಅಸ್ತಮಾ ಇರುವವರ ಚಿಕಿತ್ಸೆಯಲ್ಲಿ ಇದನ್ನು ಬಳಸಬಹುದು ಎಂದು ಹೇಳಲಾಗುತ್ತದೆ. ಪ್ರಸ್ತುತ ಲಭ್ಯವಿರುವ ಏಕೈಕ ಚಿಕಿತ್ಸೆಯಾದ ಸ್ಟೀರಾಯ್ಡ್ ಮಾತ್ರೆಗಳಿಗಿಂತ ಇದು ಹೆಚ್ಚು ಪರಿಣಾಮಕಾರಿ ಎಂದು ವಿಜ್ಞಾನಿಗಳು ಹೇಳುತ್ತಾರೆ.