ಬೆಂಗಳೂರು: ನಗರದಲ್ಲಿ ನೀರಿನ ಆಹಾಕಾರ ಎದ್ದಿದೆ. ಇದರ ನಡುವೆ ಅಪಾರ್ಮೆಂಟ್ ನಿವಾಸಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ 35 ಸಾವಿರ ಲೀಟರ್ ನೀರು ಸರಬರಾಜು ಮಾಡಲಾಗುವುದು ಎಂಬುದಾಗಿ ಜಲಮಂಡಳಿ ತಿಳಿಸಿದೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಜಲಮಂಡಳಿ ಅಧ್ಯಕ್ಷ ಡಾ.ವಿ ರಾಮ್ ಪ್ರಸಾತ್ ಮನೋಹರ್ ಅವರು, ಪಾಲಿಕೆ ನಿಯಮಾವಳಿಗಳ ಪ್ರಕಾರ ಬೆಂಗಳೂರು ಹೊರವಲಯದ ಅಪಾರ್ಟ್ ಮೆಂಟ್ ಗೆ ದೈನಂದಿನ ಕುಡಿಯುವ ಮತ್ತು ದೈನಂದಿನ ಅಡುಗೆ ಅಗತ್ಯತೆಗಳಿಗಾಗಿ ವಾರಕ್ಕೆ 35 ಸಾವಿರ ಲೀಟರ್ ಕಾವೇರಿ ನೀರನ್ನು ಸರಬರಾದು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಹೊರವಲಯದ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಪರಿಶೀಲಿಸಿ, ನಾಗರಿಕರ ಸಮಸ್ಯೆಗಳನ್ನು ಆಲಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಪಾಲಿಕೆ ನಿಯಮಾವಳಿಗಳ ಪ್ರಕಾರ, ಅಪಾರ್ಟ್‌ಮೆಂಟ್‌ಗೆ ದೈನಂದಿನ ಕುಡಿಯುವ ಮತ್ತು ದೈನಂದಿನ ಅಡುಗೆ ಅಗತ್ಯಗಳಿಗಾಗಿ ವಾರಕ್ಕೆ 35 ಸಾವಿರ ಲೀಟರ್ ಕಾವೇರಿ ನೀರನ್ನು ಸರಬರಾಜು ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
‘ಶೃಂಗೇರಿ ಪೋಕ್ಸೋ’ ಕೇಸ್: ತಾಯಿ ಸೇರಿ ‘ನಾಲ್ವರು ಆರೋಪಿ’ಗಳಿಗೆ 25 ಸಾವಿರ ದಂಡ, ’20 ವರ್ಷ’ ಜೈಲು ಶಿಕ್ಷೆ
ದೇಶಾದ್ಯಂತ ‘CAA’ ಜಾರಿ ಸಂಬಂಧ ‘ಕೇಂದ್ರ ಸರ್ಕಾರ’ದಿಂದ ಅಧಿಸೂಚನೆ ಪ್ರಕಟ | CAA Rules