Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನೀವು ‘ಸ್ವಚ್ಛ ಬೆಂಗಳೂರು’ ಬಯಸುತ್ತೀರಾ? ಹಾಗಿದ್ರೆ ‘ಕ್ಲೀನ್ ಸಿಟಿ’ಗಾಗಿ ಈ ಸಂಖ್ಯೆಗೆ ‘WhatsApp’ ಮಾಡಿ

12/06/2025 6:56 PM

ಅಹಮದಾಬಾದ್ ವಿಮಾನ ದುರಂತ: ಪತಿಯನ್ನು ಭೇಟಿಯಾಗಲು ಲಂಡನ್‌ಗೆ ತೆರಳಿದ್ದ ನವ ವಧು ದುರ್ಮರಣ

12/06/2025 6:51 PM

ಪ್ರಯಾಣಿಕರ ಗಮನಕ್ಕೆ: ಹುಬ್ಬಳ್ಳಿ – ಕುಷ್ಟಗಿ ದೈನಂದಿನ ಎಕ್ಸ್‌ಪ್ರೆಸ್ ರೈಲುಗಳ ವೇಳೆಯಲ್ಲಿ ಪರಿಷ್ಕರಣೆ

12/06/2025 6:45 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅನ್ನದಾತರಿಗೆ ಸಿಹಿ ಸುದ್ದಿ: ಅರ್ಜಿದಾರರ ‘ಮೋಜಿಣಿ’ ಶುಲ್ಕ ಇಳಿಕೆ ಮಾಡಿ ‘ರಾಜ್ಯ ಸರ್ಕಾರ’ ಆದೇಶ
KARNATAKA

ಅನ್ನದಾತರಿಗೆ ಸಿಹಿ ಸುದ್ದಿ: ಅರ್ಜಿದಾರರ ‘ಮೋಜಿಣಿ’ ಶುಲ್ಕ ಇಳಿಕೆ ಮಾಡಿ ‘ರಾಜ್ಯ ಸರ್ಕಾರ’ ಆದೇಶ

By kannadanewsnow0703/01/2024 5:40 AM

ಬೆಂಗಳೂರು: ಮೋಜಿಣಿ ವ್ಯವಸ್ಥೆ ಅಡಿ ಸಾರ್ವಜನಿಕರು ಅಳತೆ ಕೋರಿ ಸಲ್ಲಿಸುವ ಅರ್ಜಿಗಳ ಅಳತೆ ಶುಲ್ಕವನ್ನು ಮೇಲೆ ಓದಲಾದ ಕ್ರ.ಸಂ. (1) ಮತ್ತು (3) ರ ಆದೇಶಗಳಲ್ಲಿ ಈ ಕೆಳಕಂಡಂತ ನಿಗಧಿಪಡಿಸಲಾಗಿತ್ತು. ಹಾಗೆಯೇ, ಮೇಲೆ ಓದಲಾದ ಕ್ರಸಂ. (2) ರ ಸರ್ಕಾರದ ಆದೇಶದಲ್ಲಿ, ಪರವಾನಗಿ ಭೂಮಾಪಕರಿಗೆ ಪ್ರತಿ ಅರ್ಜಿಗೆ ಪಾವತಿಸುತ್ತಿರುವ ಸೇವಾ ಶುಲ್ಕವನ್ನು 800/- ರಿಂದ 1200/- ಗಳಿಗೆ ಹಾಗೂ ಬಹುಮಾಲೀಕತ್ವದ ಪ್ರತಿ ಹೆಚ್ಚುವರಿ ಬ್ಲಾಕಿಗೆ ರೂ 150/- ರಿಂದ 200/- ಗಳಿಗೆ ಪರಿಷ್ಕರಿಸಿ ಆದೇಶಿಸಲಾಗಿದೆ. ತದನಂತರ, ಮೇಲೆ ಓದಲಾದ ಕ್ರ.ಸಂ. (4) ಹಾಗೂ (5) ರ ಅದೇಶದಲ್ಲಿ ಮೋಜಣಿ ವ್ಯವಸ್ಥೆಯಡಿ ಸಲ್ಲಿಸುವ ಅರ್ಜಿಗಳ ಅಳತೆ ಶುಲ್ಕವನ್ನು ಪುನರ್ ಪರಿಷ್ಕರಿಸಿ, ಅರ್ಜಿ ಶುಲ್ಕವನ್ನು ಕಡಿಮೆಗೊಳಿಸಿ ಈ ಕೆಳಕಂಡಂತೆ ನಿಗಧಿಪಡಿಸಲಾಗಿದೆ.

11ಇ ಸ್ಕೆಚ್, ಅಲಿನೇಷನ್ ಪೂರ್ವ ನಕ್ಷೆ ಮತ್ತು ತತ್ಕಾಲ್ ಪೋಡಿ ಪ್ರಕರಣಗಳಲ್ಲಿ ಗ್ರಾಮೀಣ ಭಾಗದ ಅರ್ಜಿದಾರರಿಗೆ ನಿಗದಿಯಾಗಿದ್ದ 2,000 ರೂ. ಸೇವಾ ಶುಲ್ಕವನ್ನು 1,500 ರೂ.ಗೆ ಇಳಿಸಲಾಗಿದೆ. ನಗರ ಪ್ರದೇಶದ ಅರ್ಜಿದಾರರಿಗೆ 2,500 ರೂ. ಶುಲ್ಕವೇ ಮುಂದುವರಿಯಲಿದೆ. ಹದ್ದುಬಸ್ತು ಪ್ರಕರಣಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿನಿಗದಿಯಾಗಿದ್ದ,500 ರೂ. ಶುಲ್ಕವನ್ನು 500 ರೂ.ಗೆ ಇಳಿಸಲಾಗಿದೆ. ನಗರ ಪ್ರದೇಶದಲ್ಲಿ 2,000 ರೂ. ಶುಲ್ಕವೇ ಮುಂದುವರಿಯಲಿದೆ. ನಿಗದಿಪಡಿಸಿರುವ ಅರ್ಜಿ ಶುಲ್ಕವನ್ನು ಪಹಣಿಯ (ಆರ್‌ಟಿಸಿ) ಕಾಲಂ -9 ರಲ್ಲಿನ ಅರ್ಜಿದಾರರ ಹಕ್ಕಿನ ವಿಸ್ತೀರ್ಣಕ್ಕೆ ಮಾತ್ರ ಪಾವತಿಸಿಕೊಳ್ಳಲು ಆದೇಶಿಸಲಾಗಿದೆ. ಈಗಾಗಲೇ ಅಳತೆಗಾಗಿ ಸ್ವೀಕೃತವಾಗಿ ಬಾಕಿ ಇರುವ ಪ್ರಕರಣಗಳಿಗೆ ಈಶುಲ್ಕ ಪರಿಷ್ಕರಣೆ ಅನ್ವಯವಾಗುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಗ್ರಾಮೀಣ ಮತ್ತು ನಗರ ಪುದೇಶದ ಪ್ರತಿ ಬಾಜುದಾರರಿಗೆ do.25/- ಮುಂದುವರಿದು, ಮೇಲೆ ಓದಲಾದ ಕ್ರ.ಸಂ (6) ರ ಅದೇಶದಲ್ಲಿ ಸಾರ್ವಜನಿಕರು ತಮ್ಮ ಸ್ವಂತ ಖಾಸಗಿ ಜಮೀನಿನಲ್ಲಿ ‘ಸ್ವಾವಲಂಬಿ ಆಪ್’ ಮೂಲಕ ಸ್ವಯಂ ಸರ್ವ ಮಾಡಿಕೊಳ್ಳುವ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಸ್ವಇಚ್ಛೆಯಿಂದ ಸ್ಕೆಚ್ ತಯಾರಿಸುವ ಅರ್ಜಿಗಳಿಗೆ ಸಂಬಂಧಿಸಿದಂತೆ ಮೇಲೆ ಓದಲಾದ ಕ್ರ.ಸಂ. (7) ರ ಆದೇಶದಲ್ಲಿ ಪ್ರತಿ ಅರ್ಜಿಗೆ ರೂ.1000/- ಮೊತ್ತವನ್ನು ಅರ್ಜಿ ಶುಲ್ಕವನ್ನಾಗಿ ನಿಗದಿಪಡಿಸಿ ಆದೇಶಿಸಲಾಗಿದೆ. ಮೇಲಿನ ಸರ್ಕಾರದ ಆದೇಶಗಳಲ್ಲಿ ಅರ್ಜಿ ಶುಲ್ಕವನ್ನು ನಿರ್ದಿಷ್ಟವಾಗಿ ಪಹಣಿ ಕಾಲಂ-3 ಅಥವಾ ಕಾಲಂ-9 ವಿಸ್ತೀರ್ಣಕ್ಕೆ ಅನುಗುಣವಾಗಿ ಪಾವತಿಸಿಕೊಳ್ಳಬೇಕೆ ಎಂಬುದರ ಬಗ್ಗೆ ಸ್ಪಷ್ಟ ನಿರ್ದೇಶನ ಇಲ್ಲದ ಕಾರಣ ಸ್ವಾವಲಂಬಿ ಯೋಜನೆಯಡಿಯಲ್ಲಿ ಸಲ್ಲಿಸುವ ಅರ್ಜಿಗಳಿಗೆ ಪಹಣಿಯ ರಲ್ಲಿನ ಪೂರ್ಣ ವಿಸ್ತೀರ್ಣಕ್ಕೆ ಅರ್ಜಿ ಶುಲ್ಕವನ್ನು ಲೆಕ್ಕ ಹಾಕಿ ಕಾಲ0-3 ಪಾವತಿಸಿಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಅದೇ ರೀತಿಯಲ್ಲಿ, ನಾಗರಿಕರು ಅಳತೆ ಕೋರಿ ಸಲ್ಲಿಸುವ ವಿವಿಧ ಅರ್ಜಿಗಳಿಗೆ ಪಹಣಿ ಕಾಲಂ-9 ರ ವಿಸ್ತೀರ್ಣಕ್ಕೆ ಶುಲ್ಕ ಪಾವತಿಸಿಕೊಳ್ಳುವ ಬದಲಾಗಿ ಏಕರೂಪ ಶುಲ್ಕ ಪದ್ಧತಿಯನ್ನು ಅನುಸರಿಸುವ ಸಲುವಾಗಿ ಪಹಣಿಯ ಕಾಲಂ-3 ರ ವಿಸ್ತೀರ್ಣಕ್ಕೆ ಅರ್ಜಿ ಶುಲ್ಕವನ್ನು ಲೆಕ್ಕ ಹಾಕಿ ಪಾವತಿಸಿಕೊಳ್ಳಲು ಮೋಜಿಣಿ ತಂತ್ರಾಂಶದಲ್ಲಿ ಮಾರ್ಪಾಡು ಮಾಡಲಾಗಿದೆ. ಆದರೆ ಪಹಣಿಯ ಕಾಲಂ-3 ರ ವಿಸ್ತೀರ್ಣ ಹೆಚ್ಚಿಗೆ ಇದ್ದು ಸಾರ್ವಜನಿಕರ ಹಕ್ಕಿನ ವಿಸ್ತೀರ್ಣ ಕಡಿಮೆ ಇದ್ದು, ಪೂರ್ಣ ವಿಸ್ತೀರ್ಣಕ್ಕೆ ಅರ್ಜಿ ಶುಲ್ಕವನ್ನು ಪಾವತಿಸಿಕೊಳ್ಳುತ್ತಿರುವ ಕಾರಣ ಸಾರ್ವಜನಿಕರಿಗೆ ಹೊರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಅಲ್ಲದೆ, 2023 ರ ಡಿಸೆಂಬರ್ ಮಾಹೆಯಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ಅರ್ಜಿ ಶುಲ್ಕ ಹೆಚ್ಚಾಗಿರುವ ಕುರಿತು ಮಾನ್ಯ ಸದಸ್ಯರುಗಳು ಸದನದಲ್ಲಿ ಪುಸ್ತಾಪಿಸಿರುತ್ತಾರೆ. ಜೊತೆಗೆ, ಅರ್ಜಿದಾರರು / ಜನಪ್ರತಿನಿಧಿಗಳಿಂದಲೂ ಸಹ ಪೋಡಿ ಶುಲ್ಕ ಹೆಚ್ಚುವರಿಯಾಗಿ ಪಾವತಿಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಸಹ ಸ್ವೀಕೃತವಾಗಿರುತ್ತವೆ.
ಈ ಮೇಲ್ಕಂಡ ಎಲ್ಲಾ ಸೇವೆಗಳನ್ನು ಸರ್ಕಾರಕ್ಕೆ ಹೊರೆಯಾಗದಂತೆ ಸಾರ್ವಜನಿಕರಿಗೆ ಸೇವೆಗಳನ್ನು ತ್ವರಿತವಾಗಿ ಒದಗಿಸಲು ಅನುವಾಗುವಂತೆ ಸರ್ಕಾರಿ ಭೂಮಾಪಕರ ಜೊತೆಗೆ ಪರವಾನಗಿ ಭೂಮಾಪಕರನ್ನು ಸಹ ಆಯ್ಕೆ ಮಾಡಿಕೊಳ್ಳಲಾಗಿದೆ. ಪರವಾನಗಿ ಭೂಮಾಪಕರು ನೀಡುವ ಸೇವೆಗೆ ಸಾರ್ವಜನಿಕರು ಪಾವತಿಸುವ ಶುಲ್ಕದಿಂದಲೇ ನಿಗಧಿತ ಸೇವಾ ಶುಲ್ಕವನ್ನು ಪಾವತಿಸಲಾಗುತ್ತಿದೆ.
ಪುಸ್ತುತ ಪೋಡಿ ಮುಕ್ತ ಗ್ರಾಮ ಅಭಿಯಾನ ಯೋಜನೆಯಡಿಯಲ್ಲಿ ಬಹುಮಾಲೀಕತ್ವ, ವಹಣಿಯಲ್ಲಿರುವ ಹಕ್ಕುದಾರರಿಗೆ ಶುಲ್ಕ ರಹಿತವಾಗಿ ಪೋಡಿ ಮಾಡಿಕೊಡುವ ಯೋಜನೆ ಜಾರಿಯಲ್ಲಿರುತ್ತದೆ. ಇದಲ್ಲದೆ ಅಲಿನೇಷನ್, ದರಖಾಸ್ತು ಪೋಡಿಗೆ ಸಂಬಂಧಿಸಿದಂತೆ ಮಂಜೂರಿ ಸಮಯದಲ್ಲಿಯೇ ಅರ್ಜಿದಾರರಿಂದ ಪೋಡಿ ಶುಲ್ಕ ಭರಿಸಿಕೊಳ್ಳಲಾಗುತ್ತಿದೆ.

ಮೋಜಣಿ ಈ ಹಿನ್ನೆಲೆಯಲ್ಲಿ, ಮೋಜಿಣಿ ವ್ಯವಸ್ಥೆಯಡಿ ಸ್ವೀಕೃತವಾಗುವ ಅಳತೆ ಅರ್ಜಿಗಳಿಗೆ ಸಂಬಂಧಿಸಿದಂತೆ ಶುಲ್ಕ ಪಾವತಿಸಿಕೊಳ್ಳುವ ಕುರಿತು ಸರ್ಕಾರದ ಸೂಕ್ತ ನಿರ್ದೇಶನ ಕೋರಿ ಮೇಲೆ ಓದಲಾದ ಕ್ರ.ಸಂ. (8) ರ ಕಡತದಲ್ಲಿ ಆಯುಕ್ತರು, ಭೂಮಾಪನ ಇಲಾಖೆ ಇವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಆಯುಕ್ತರು, ಭೂಮಾಪನ ಇಲಾಖೆ ಇವರ ಪುಸ್ತಾವನೆಯನ್ನು ಪರಿಶೀಲಿಸಿ, ಮೇಲೆ ಓದಲಾದ ಕ್ರ.ಸಂ (4) ಮತ್ತು (5) ರ ಸರ್ಕಾರದ ಆದೇಶಗಳಲ್ಲಿ ಮೋಜಿಣಿ ವ್ಯವಸ್ಥೆಯಡಿಯಲ್ಲಿ ಸ್ವೀಕರಿಸುವ ವಿವಿಧ ರೀತಿಯ ಅಳತೆ / ಹದ್ದುಬಸ್ತು ಅರ್ಜಿಗಳಿಗೆ ನಿಗದಿಪಡಿಸಿರುವ ಮೋಜಿಣಿ ಶುಲ್ಕವನ್ನು ಪಾವತಿಸಿಕೊಳ್ಳುವ ಕುರಿತು ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಕಂಇ 238 ಎಸ್‌ಎಸ್‌ಸಿ 2021 ಬೆಂಗಳೂರು, ದಿನಾಂಕ: 29-12-2023 ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸಾರ್ವಜನಿಕರಿಂದ ಅಳತೆಗಾಗಿ ಮೋಜಿಣಿ ವ್ಯವಸ್ಥೆಯಡಿಯಲ್ಲಿ ಸ್ವೀಕರಿಸುವ ವಿವಿಧ ರೀತಿಯ ಅರ್ಜಿಗಳಿಗೆ ಸಂಬಂಧಿಸಿದಂತೆ ಸರ್ಕಾರದ ಆದೇಶದ ಸಂಖ್ಯೆ: ಕಂಇ 238 ಎಸ್‌ಎಸ್‌ 2021, ದಿನಾಂಕ 09-02-2022 ಮತ್ತು ಕಂಇ ಎಸ್‌ಎಸ್‌ಸಿ 238 2021 (1), ದಿನಾಂಕ ರಲ್ಲಿ ಕೆಳಕಂಡಂತೆ ನಿಗದಿಪಡಿಸಿರುವ ಅರ್ಜಿ ಶುಲ್ಕವನ್ನು ಪಹಣಿಯ (RTC) ಕಾಲಂ ನಂ-9 ರಲ್ಲಿನ ಅರ್ಜಿದಾರರ ಹಕ್ಕಿನ ವಿಸ್ತೀರ್ಣಕ್ಕೆ ಮಾತ್ರ ಪಾವತಿಸಿಕೊಳ್ಳಲು ಆದೇಶಿಸಿದೆ. ‘ಸ್ವಾವಲಂಬಿ’ ಯೋಜನೆಯಡಿ ಸ್ವಇಚ್ಛೆಯಿಂದ ಸ್ಕೆಚ್ ತಯಾರಿಸಲು ಸಲ್ಲಿಸುವ ಪ್ರತಿ ಅರ್ಜಿಗೆ ರೂ.1000/- ಮೊತ್ತವನ್ನು ಅರ್ಜಿ ಶುಲ್ಕವನ್ನಾಗಿ ನಿಗದಿಪಡಿಸಿ ಆದೇಶಿಸಿರುವುದನ್ನು ಮುಂದುವರೆಸಿದೆ. ಈ ಆದೇಶವು ದಿನಾಂಕ: 01-01-2024 ರಿಂದ ಭವಿಷ್ಯಾನ್ಯಯವಾಗಿ ಜಾರಿಯಾಗಲಿದ್ದು, ಈಗಾಗಲೇ ಅಳತೆಗಾಗಿ ಸ್ವೀಕೃತವಾಗಿ ಬಾಕಿ ಇರುವ ಪ್ರಕರಣಗಳಿಗೆ ಅನ್ವಯಿಸುವಂತಿಲ್ಲ.

Good news for annadatas: State govt orders reduction in 'mojini' fee for petitioners ಅನ್ನದಾತರಿಗೆ ಸಿಹಿ ಸುದ್ದಿ: ಅರ್ಜಿದಾರರ 'ಮೋಜಿಣಿ' ಶುಲ್ಕ ಇಳಿಕೆ ಮಾಡಿ 'ರಾಜ್ಯ ಸರ್ಕಾರ' ಆದೇಶ
Share. Facebook Twitter LinkedIn WhatsApp Email

Related Posts

ನೀವು ‘ಸ್ವಚ್ಛ ಬೆಂಗಳೂರು’ ಬಯಸುತ್ತೀರಾ? ಹಾಗಿದ್ರೆ ‘ಕ್ಲೀನ್ ಸಿಟಿ’ಗಾಗಿ ಈ ಸಂಖ್ಯೆಗೆ ‘WhatsApp’ ಮಾಡಿ

12/06/2025 6:56 PM2 Mins Read

ಪ್ರಯಾಣಿಕರ ಗಮನಕ್ಕೆ: ಹುಬ್ಬಳ್ಳಿ – ಕುಷ್ಟಗಿ ದೈನಂದಿನ ಎಕ್ಸ್‌ಪ್ರೆಸ್ ರೈಲುಗಳ ವೇಳೆಯಲ್ಲಿ ಪರಿಷ್ಕರಣೆ

12/06/2025 6:45 PM2 Mins Read

BREAKING : ಅಹಮದಾಬಾದ್ ವಿಮಾನ ದುರಂತ ; ಕರ್ನಾಟಕ ಮೂಲಕ ಕೋ ಪೈಲಟ್ ‘ಕ್ಲೈವ್ ಕುಂದರ್’ ದುರ್ಮರಣ

12/06/2025 6:40 PM1 Min Read
Recent News

ನೀವು ‘ಸ್ವಚ್ಛ ಬೆಂಗಳೂರು’ ಬಯಸುತ್ತೀರಾ? ಹಾಗಿದ್ರೆ ‘ಕ್ಲೀನ್ ಸಿಟಿ’ಗಾಗಿ ಈ ಸಂಖ್ಯೆಗೆ ‘WhatsApp’ ಮಾಡಿ

12/06/2025 6:56 PM

ಅಹಮದಾಬಾದ್ ವಿಮಾನ ದುರಂತ: ಪತಿಯನ್ನು ಭೇಟಿಯಾಗಲು ಲಂಡನ್‌ಗೆ ತೆರಳಿದ್ದ ನವ ವಧು ದುರ್ಮರಣ

12/06/2025 6:51 PM

ಪ್ರಯಾಣಿಕರ ಗಮನಕ್ಕೆ: ಹುಬ್ಬಳ್ಳಿ – ಕುಷ್ಟಗಿ ದೈನಂದಿನ ಎಕ್ಸ್‌ಪ್ರೆಸ್ ರೈಲುಗಳ ವೇಳೆಯಲ್ಲಿ ಪರಿಷ್ಕರಣೆ

12/06/2025 6:45 PM

BREAKING : ಅಹಮದಾಬಾದ್ ವಿಮಾನ ದುರಂತ ; ಕರ್ನಾಟಕ ಮೂಲಕ ಕೋ ಪೈಲಟ್ ‘ಕ್ಲೈವ್ ಕುಂದರ್’ ದುರ್ಮರಣ

12/06/2025 6:40 PM
State News
KARNATAKA

ನೀವು ‘ಸ್ವಚ್ಛ ಬೆಂಗಳೂರು’ ಬಯಸುತ್ತೀರಾ? ಹಾಗಿದ್ರೆ ‘ಕ್ಲೀನ್ ಸಿಟಿ’ಗಾಗಿ ಈ ಸಂಖ್ಯೆಗೆ ‘WhatsApp’ ಮಾಡಿ

By kannadanewsnow0912/06/2025 6:56 PM KARNATAKA 2 Mins Read

ಬೆಂಗಳೂರು: ಬೆಂಗಳೂರು ನಗರ ಸ್ವಚ್ಛ, ಸುಂದರವಾಗಿ ಕಾಣುವ ನಿಟ್ಟಿನಲ್ಲಿ ಪೌರಕಾರ್ಮಿಕರು ಸದಾ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಾರೆ. ಅದರ ಜೊತೆಗೆ ರಸ್ತೆ ಬದಿ ಬಿಸಾಡುವಂತಹ…

ಪ್ರಯಾಣಿಕರ ಗಮನಕ್ಕೆ: ಹುಬ್ಬಳ್ಳಿ – ಕುಷ್ಟಗಿ ದೈನಂದಿನ ಎಕ್ಸ್‌ಪ್ರೆಸ್ ರೈಲುಗಳ ವೇಳೆಯಲ್ಲಿ ಪರಿಷ್ಕರಣೆ

12/06/2025 6:45 PM

BREAKING : ಅಹಮದಾಬಾದ್ ವಿಮಾನ ದುರಂತ ; ಕರ್ನಾಟಕ ಮೂಲಕ ಕೋ ಪೈಲಟ್ ‘ಕ್ಲೈವ್ ಕುಂದರ್’ ದುರ್ಮರಣ

12/06/2025 6:40 PM

KSRTC ನೂತನ ಎಂಡಿಯಾಗಿ ಐಎಎಸ್ ಅಧಿಕಾರಿ ಅಕ್ರಂ ಪಾಷ ಅಧಿಕಾರ ಸ್ವೀಕಾರ

12/06/2025 6:33 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.