ಬೆಂಗಳೂರು: ನಮಗೆ ಹಣ ಬೇಡ ಅಕ್ಕಿ ಕೊಡಿ ಎಂಬುದಾಗಿ ರಾಜ್ಯದ ಅನ್ನಭಾಗ್ಯ ಫಲಾನುಭವಿಗಳ ಒತ್ತಾಯವಾಗಿದೆ. ಇದರ ನಡುವೆ ಅಕ್ಕಿ ಸಿಗೋವರೆಗೂ ಹೆಚ್ಚುವರಿ 5 ಕೆಜಿ ಅಕ್ಕಿಗೆ ಹಣ ನೀಡುವುದಾಗಿ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕೆಲವು ಕಡೆ ಅಕ್ಕಿ ಬೇಕು. ನಮಗೆ ಹಣ ಬೇಡ ಎಂಬುದಾಗಿ ಅನ್ನಭಾಗ್ಯ ಫಲಾನುಭವಿಗಳು ಕೇಳುತ್ತಿದ್ದಾರೆ. ಹೆಚ್ಚುವರಿ 5 ಕೆಜಿ ಅಕ್ಕಿ ವಿತರಣೆಗಾಗಿ ಅಕ್ಕಿಗಾಗಿ ಸರ್ಕಾರ ಹುಡುಕಾಟ ಮುಂದುವರೆಸಿದೆ ಎಂದರು.
ಹೆಚ್ಚುವರಿ 5 ಕೆಜಿ ಅಕ್ಕಿಯನ್ನೇ ವಿತರಣೆ ಮಾಡೋದಕ್ಕಾಗಿ ರಾಜ್ಯ ಸರ್ಕಾರದಿಂದ ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ವಿವಿಧ ಕಡೆಗಳಿಂದ ಖರೀದಿಗೆ ಕ್ರಮವಹಿಸಲಾಗಿದೆ. ಆದ್ರೇ ಸೂಕ್ತ ಬೆಲೆ ನಿಗದಿಯಾಗುತ್ತಿಲ್ಲ. ಅದರಲ್ಲೂ ಈ ಸಲ ಮಳೆ ಕಡಿಮೆಯಾಗಿರೋ ಕಾರಣ ಉತ್ಪಾದನೆಯೂ ಕುಂಠಿತಗೊಂಡಿದೆ ಎಂದರು.
ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಅಕ್ಕಿ ಬದಲಾಗಿ ಸದ್ಯಕ್ಕೆ ಹಣವನ್ನೇ ನೀಡಲಾಗುತ್ತದೆ. ಅನ್ನಭಾಗ್ಯ ಫಲಾನುಭವಿಗಳಿಗೆ ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ಹಣವನ್ನು ಜಮಾ ಮಾಡಲಾಗುತ್ತದೆ. ಅಕ್ಕಿ ದೊರೆತ ಕೂಡಲೇ ವಿತರಣೆ ಮಾಡೋದಾಗಿ ತಿಳಇಸಿದರು.
ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ: ‘ಪ್ರಧಾನಿ ಮೋದಿ’ ವಿರುದ್ಧ ಹೇಳಿಕೆಗೆ ‘ಮಾಲ್ಡೀವ್ಸ್ ಸರ್ಕಾರ’ ಎಚ್ಚರಿಕೆ
ಬೆಂಗಳೂರಲ್ಲಿ ‘ರೇಷ್ಮೆ ಭವನ’ ನಿರ್ಮಾಣಕ್ಕೆ ಹೂಡಿಕೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ