ನವದೆಹಲಿ : ಕೇಂದ್ರ ಸರ್ಕಾರವು ತುಟ್ಟಿಭತ್ಯೆ (Dearness Allowance-DA) ಹೆಚ್ಚಳವನ್ನು ಘೋಷಿಸಿದೆ. ಈ ಹೆಚ್ಚಳವು 5 ಮತ್ತು 6ನೇ ವೇತನ ಆಯೋಗದ ಪ್ರಕಾರ ವೇತನ ಪಡೆಯುತ್ತಿರುವ ಕೇಂದ್ರ ನೌಕರರು ಮತ್ತು ಸ್ವಾಯತ್ತ ಸಂಸ್ಥೆಗಳ (ಸಾರ್ವಜನಿಕ ಉದ್ಯಮಗಳ ಇಲಾಖೆ) ಉದ್ಯೋಗಿಗಳಿಗೆ ಅನ್ವಯಿಸುತ್ತದೆ. ಈ ನಿಟ್ಟಿನಲ್ಲಿ, ಹಣಕಾಸು ಸಚಿವಾಲಯದ ಸಾರ್ವಜನಿಕ ಉದ್ಯಮಗಳ ಇಲಾಖೆ 7 ನವೆಂಬರ್ 2024 ರಂದು ಕಚೇರಿ ಜ್ಞಾಪಕ ಪತ್ರವನ್ನು ಹೊರಡಿಸಿದೆ.
6ನೇ ವೇತನ ಆಯೋಗದ ಶಿಫಾರಸಿನಂತೆ ತುಟ್ಟಿಭತ್ಯೆ ಹೊಸ ದರ.!
6ನೇ ವೇತನ ಆಯೋಗದ ಪ್ರಕಾರ, ಸಂಬಳ ಪಡೆಯುವ ಉದ್ಯೋಗಿಗಳಿಗೆ ತುಟ್ಟಿಭತ್ಯೆಯನ್ನ ಪ್ರಸ್ತುತ ಇರುವ 239% ರಿಂದ 246% ಕ್ಕೆ ಹೆಚ್ಚಿಸಲಾಗಿದೆ. ಈ ಹೆಚ್ಚಳವು ಜುಲೈ 1, 2024 ರಿಂದ ಅನ್ವಯವಾಗಲಿದೆ. ಆರನೇ ವೇತನ ಆಯೋಗದ ಶಿಫಾರಸಿನಂತೆ ತುಟ್ಟಿಭತ್ಯೆಯಲ್ಲಿ ಶೇ.7ರಷ್ಟು ಹೆಚ್ಚಳ ಮಾಡಲಾಗಿದೆ. ಉದಾಹರಣೆಗೆ, ಒಬ್ಬ ಉದ್ಯೋಗಿಯ ಮೂಲ ವೇತನವು ₹ 43,000 ಆಗಿದ್ದರೆ, ಈ ಹಿಂದೆ 239% ಡಿಎ ಅಡಿಯಲ್ಲಿ, ಅವರು ₹1,02,770 ಪಡೆಯುತ್ತಿದ್ದರು. 246% ಹೊಸ ದರದ ಪ್ರಕಾರ, ಅವರ ಡಿಎ ಈಗ 1,05,780 ರೂ.ಗೆ ಹೆಚ್ಚಾಗುತ್ತದೆ. ಅಂದರೆ, ಸಂಬಳವು ನೇರವಾಗಿ ಮಾಸಿಕ 3,000 ರೂ.ಗಳಷ್ಟು ಹೆಚ್ಚಾಗುತ್ತದೆ.
5ನೇ ವೇತನ ಆಯೋಗದ ಪ್ರಕಾರ, ಸಂಬಳ ಪಡೆಯುವ ನೌಕರರ ತುಟ್ಟಿಭತ್ಯೆಯನ್ನ ಈಗಿರುವ 443% ರಿಂದ 455% ಕ್ಕೆ ಹೆಚ್ಚಿಸಲಾಗಿದೆ. ಇದು ಜುಲೈ 1, 2024 ರಿಂದ ಜಾರಿಗೆ ಬರಲಿದೆ. ಅಂದರೆ, ಡಿಎಯನ್ನು ನೇರವಾಗಿ ಶೇಕಡಾ 12 ರಷ್ಟು ಹೆಚ್ಚಿಸಲಾಗಿದೆ.
7 ನೇ ವೇತನ ಆಯೋಗದ ಅಡಿಯಲ್ಲಿ ಡಿಎ ದರಗಳು.!
7 ನೇ ವೇತನ ಆಯೋಗದ ಅಡಿಯಲ್ಲಿ ವೇತನ ಪಡೆಯುವ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರವನ್ನು 50% ರಿಂದ 53% ಕ್ಕೆ ಹೆಚ್ಚಿಸಲಾಗಿದೆ. ಈ ಹೆಚ್ಚಳವು ಜುಲೈ 1, 2024 ರಿಂದ ಜಾರಿಗೆ ಬಂದಿದೆ.
ತುಟ್ಟಿಭತ್ಯೆ ಪ್ರಯೋಜನಗಳು.!
ಹಣದುಬ್ಬರದಿಂದ ಪರಿಹಾರ ಒದಗಿಸಲು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ನೀಡಲಾಗುತ್ತದೆ. ನಗರ, ಅರೆ-ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಅನುಗುಣವಾಗಿ ಇದನ್ನು ನಿರ್ಧರಿಸಲಾಗುತ್ತದೆ. ಕೇಂದ್ರ ಸರ್ಕಾರವು ಪ್ರತಿವರ್ಷ ಎರಡು ಬಾರಿ ತುಟ್ಟಿಭತ್ಯೆಯ ದರಗಳನ್ನ ಪರಿಷ್ಕರಿಸುತ್ತದೆ – ಜನವರಿ ಮತ್ತು ಜುಲೈನಲ್ಲಿ. ಈ ಬಾರಿ ಪರಿಷ್ಕರಣೆಯ ಮೂಲಕ, 5 ಮತ್ತು 6ನೇ ವೇತನ ಆಯೋಗದ ಅಡಿಯಲ್ಲಿ ಸಂಬಳ ಪಡೆಯುವ ನೌಕರರು ಡಿಎ ಹೆಚ್ಚಳದ ಪ್ರಯೋಜನವನ್ನ ಪಡೆಯುತ್ತಾರೆ.
BREAKING : ನಿರ್ದೇಶಕ ‘ರಾಮ್ ಗೋಪಾಲ್ ವರ್ಮಾ’ಗೆ ಆಂಧ್ರ ಪೊಲೀಸರಿಂದ ಸಮನ್ಸ್ ; ವಿಚಾರಣೆಗೆ ಬುಲಾವ್
BIG NEWS : ವೇತನ ತಡೆಹಿಡಿದ ರಾಜ್ಯ ಸರ್ಕಾರ : ಮತ್ತೆ ಪ್ರತಿಭಟನೆ ಎಚ್ಚರಿಕೆ ನೀಡಿದ ‘108’ ಆಂಬುಲೆನ್ಸ್ ಸಿಬ್ಬಂದಿ