ನವದೆಹಲಿ : ಮುಂದಿನ ವರ್ಷದಿಂದ ಕೆಲವು ತರಗತಿಗಳಿಗೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಪಠ್ಯಪುಸ್ತಕಗಳ ಬೆಲೆ ಕಡಿಮೆಯಾಗಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ (ಡಿಸೆಂಬರ್ 17, 2024) ಪ್ರಕಟಿಸಿದ್ದಾರೆ.
ಪ್ರಸ್ತುತ ವರ್ಷಕ್ಕೆ 5 ಕೋಟಿ ಪಠ್ಯಪುಸ್ತಕಗಳನ್ನ ಮುದ್ರಿಸುವ ಕೌನ್ಸಿಲ್, ಮುಂದಿನ ವರ್ಷದಿಂದ ಸಾಮರ್ಥ್ಯವನ್ನು 15 ಕೋಟಿಗೆ ಹೆಚ್ಚಿಸಲು ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. 2026-27ರ ಶೈಕ್ಷಣಿಕ ವರ್ಷದಿಂದ 9-12ನೇ ತರಗತಿಯ ಪರಿಷ್ಕೃತ ಪಠ್ಯಕ್ರಮದ ಪ್ರಕಾರ ಹೊಸ ಪಠ್ಯಪುಸ್ತಕಗಳು ಲಭ್ಯವಾಗಲಿವೆ ಎಂದು ಸಚಿವರು ಮಾಹಿತಿ ನೀಡಿದರು.
ಮುಂದಿನ ಶೈಕ್ಷಣಿಕ ವರ್ಷದಲ್ಲಿ NCERT 15 ಕೋಟಿ ಗುಣಮಟ್ಟದ ಮತ್ತು ಕೈಗೆಟುಕುವ ಪುಸ್ತಕಗಳನ್ನ ಪ್ರಕಟಿಸಲಿದೆ. ಪ್ರಸ್ತುತ ಇದು ಸುಮಾರು 5 ಕೋಟಿ ಪಠ್ಯಪುಸ್ತಕಗಳನ್ನ ಪ್ರಕಟಿಸುತ್ತದೆ. ಈ ಹಿಂದೆ ಪಠ್ಯಪುಸ್ತಕಗಳ ಬೇಡಿಕೆ ಮತ್ತು ಪೂರೈಕೆ ಸಮಸ್ಯೆಯ ಬಗ್ಗೆ ಕಳವಳಗಳಿದ್ದವು, ಆದರೆ ಈಗ ಅದನ್ನು ಪರಿಹರಿಸಲಾಗುವುದು” ಎಂದು ಪ್ರಧಾನ್ ಸುದ್ದಿಗಾರರಿಗೆ ತಿಳಿಸಿದರು.
ಇನ್ನು “ಪುಸ್ತಕಗಳ ಮುದ್ರಣದ ಪ್ರಮಾಣವು ಹೆಚ್ಚಾಗುವುದರಿಂದ, ಕೆಲವು ತರಗತಿಗಳ ಪಠ್ಯಪುಸ್ತಕಗಳ ಬೆಲೆಯನ್ನ ಕಡಿಮೆ ಮಾಡಲಾಗುವುದು. ಆದಾಗ್ಯೂ, ಪೋಷಕರಿಗೆ ಯಾವುದೇ ಆರ್ಥಿಕ ಹೊರೆಯಾಗದಂತೆ ನೋಡಿಕೊಳ್ಳಲು ಯಾವುದೇ ತರಗತಿಗೆ ಬೆಲೆಯನ್ನ ಹೆಚ್ಚಿಸಲಾಗುವುದಿಲ್ಲ” ಎಂದು ಅವರು ಹೇಳಿದರು.
ಡಿ.21ರಂದು ರಾಜಸ್ಥಾನದಲ್ಲಿ 55ನೇ ‘GST ಕೌನ್ಸಿಲ್ ಸಭೆ’ ನಿಗದಿ : ಏನೆಲ್ಲಾ ನಿರೀಕ್ಷಿಸ್ಬೋದು ಗೊತ್ತಾ.?