ಬಳ್ಳಾರಿ : ಮೀನುಗಾರಿಕೆ ಇಲಾಖೆ ವತಿಯಿಂದ 2024-25 ನೇ ಸಾಲಿನ ಮತ್ತು ಹಿಂದಿನ ಸಾಲಿನಲ್ಲಿ ಅನುಷ್ಠಾನವಾಗದೇ ಬಾಕಿ ಉಳಿದ ಗುರಿಗಳಿಗೆ ಫಲಾನುಭವಿ ಆಧಾರಿತ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ವಿವಿಧ ಘಟಕಗಳಿಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಹೊಸ ಸಿಹಿನೀರಿನ ಫಿನ್‌ಫಿಶ್ ಮೊಟ್ಟೆ ಕೇಂದ್ರಗಳ ಸ್ಥಾಪನೆ, ಲವಣಯುಕ್ತ/ಕ್ಷಾರೀಯ ಪ್ರದೇಶಗಳಿಗೆ ಹೊಸ ಕೊಳದ ನಿರ್ಮಾಣ, ಹೊಸ ಬೆಳೆಯುವ ಕೊಳ, ಲವಣಯುಕ್ತ, ಸೌಮ್ಯ, ಕ್ಷಾರೀಯಕ್ಕಾಗಿ ಬಯೋಫ್ಲಾಕ್ ಕೊಳಗಳ ನಿರ್ಮಾಣ ಮತ್ತು ದಿನಕ್ಕೆ 2 ಟನ್ ಉತ್ಪಾದನಾ ಸಾಮರ್ಥ್ಯದ ಮಿನಿ ಫೀಡ್ ಗಿರಣಿಗಳು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಗೂ ಮಹಿಳಾ ಫಲಾನುಭವಿಗಳಿಗೆ ಘಟಕ ವೆಚ್ಚದ ಶೇ.60ರಷ್ಟು ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಘಟಕ ವೆಚ್ಚದ ಶೇ.40 ರಂತೆ ಸಹಾಯಧನ ನೀಡಲಾಗುವುದು.
ಅರ್ಜಿ ಸಲ್ಲಿಸಲು ಮೇ 03 ಕೊನೆಯ ದಿನವಾಗಿದ್ದು, ಅರ್ಜಿಗಳನ್ನು ಸಂಬಂಧಿಸಿದ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೂ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಉಪ ನಿರ್ದೇಶಕರ ಕಚೇರಿ- ಮೊ.9449593156, ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಬಳ್ಳಾರಿ-ಮೊ.7406508971 ಮತ್ತು ಸಂಡೂರು ಮೊ.7204911897 ಗೆ ಸಂಪರ್ಕಿಸಬಹುದು ಎಂದು ಬಳ್ಳಾರಿ ಮೀನುಗಾರಿಕೆ ಉಪನಿರ್ದೇಶಕ ಶಿವಣ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ