ಬೆಂಗಳೂರು : 2025-26 ನೇ ಸಾಲಿನ ಪ್ರಧಾನಮಂತ್ರಿ ಆವಾಸ್ (ನಗರ)2.0 ಯೋಜನೆಯಡಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಒಂಟಿ ಮಹಿಳೆಯರು, ಅಂಗವಿಕಲರು, ಹಿರಿಯ ನಾಗರಿಕರು, ತೃತೀಯ ಲಿಂಗಿಗಳು, ಎಸ್ಸಿ/ಎಸ್ಟಿ/ಹಿಂದುಳಿದ/ಅಲ್ಪ ಸಂಖ್ಯಾತ ವರ್ಗದವರು, ಸ್ವಚ್ಛತಾ ಕಾರ್ಮಿಕರು, PM-SAVnidhi ಯೋಜನೆಯಡಿ ಗುರುತಿಸಲ್ಪಟ್ಟ ಬೀದಿ ವ್ಯಾಪಾರಿಗಳು ಮತ್ತು ಪ್ರಧಾನಮಂತ್ರಿ ವಿಶ್ವ ಕರ್ಮ ಯೋಜನೆಯಡಿ ಗುರುತಿಸಿದ ಕುಶಲ ಕರ್ಮಿಗಳು, ಅಂಗನವಾಡಿ ಕಾರ್ಯಕರ್ತರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಕೈಗಾರಿಕೆ ಕಾರ್ಮಿಕರು, ವಲಸೆ ಬಂದ ಕುಟುಂಬದವರು ತಮ್ಮ ಅರ್ಜಿಗಳನ್ನು ಜುಲೈ 15 ರೊಳಗಾಗಿ https://pmayurban.gov.in ನಲ್ಲಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಿದ ನಂತರ ಅರ್ಜಿ ಪ್ರತಿಯೊಂದಿಗೆ ಆಧಾರ್ ಕಾರ್ಡ್ (ಮನೆಯ ಯಜಮಾನ/ನಿ ಹಾಗೂ ತಂದೆ/ತಾಯಿಯ ಮತ್ತು ಪಡಿತರ ಚೀಟಿಯಲ್ಲಿ ಇರುವಂತೆ ಕುಟುಂಬ ಸದಸ್ಯರ ಆಧಾರ್ ಕಾರ್ಡ್ಗಳು), ವಸತಿ ರಹಿತರಾದಲ್ಲಿ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು (ಹಕ್ಕುಪತ್ರ/ಕ್ರಯಪತ್ರ /ದಾನಪತ್ರ/ಉಡುಗೊರೆ ಪತ್ರ/ಖಾತಾ), ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಬ್ಯಾಂಕ್ ಪಾಸ್ಬುಕ್ ಪ್ರತಿ, ನಿಗದಿತ ನಮೂನೆ (Annexure-2A/2B/2C) ಯಲ್ಲಿ Self Undertaking ಸಲ್ಲಿಸುವುದು. ಮೊಬೈಲ್ ಸಂಖ್ಯೆ, ಪ್ಯಾನ್ ಕಾರ್ಡ್ (ಲಭ್ಯವಿದ್ದಲ್ಲಿ ಮಾತ್ರ) ಗಳನ್ನು ಲಗತ್ತಿಸಿ ಪಟ್ಟಣ ಪಂಚಾಯತಿ ಕಾರ್ಯಾಲಯಕ್ಕೆ ಸಲ್ಲಿಸಬೇಕು. ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಶಾಖೆಯ ಅಧಿಕಾರಿಗಳನ್ನು ಕಛೇರಿಯ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.