ನವದೆಹಲಿ: 25 ವರ್ಷಗಳಲ್ಲಿ ಮೊದಲ ಬಾರಿಗೆ, ಅಪರೂಪದ ಮೆದುಳಿನ ಕ್ಯಾನ್ಸರ್‌ಗೆ ಪ್ರಮುಖ ಚಿಕಿತ್ಸೆ ಭಾರತದಲ್ಲಿ ಲಭ್ಯವಾಗಿದೆ.
ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಭಾರತದಲ್ಲಿ ವೊರಾಸಿನಿಬ್ (ವೊರಾನಿಗೊ) ಔಷಧವನ್ನು ಮಾರಾಟ ಮಾಡಲು ಸರ್ವಿಯರ್ ಇಂಡಿಯಾಕ್ಕೆ ಅನುಮೋದನೆ ನೀಡಿದೆ.
ಕಳೆದ ವರ್ಷ ಆಗಸ್ಟ್ ನಲ್ಲಿ ಈ ಔಷಧವನ್ನು US FDA ಅನುಮೋದಿಸಿತು. ಗ್ರೇಡ್ 2 IDH ರೂಪಾಂತರಿತ ಗ್ಲಿಯೊಮಾ ಹೊಂದಿರುವ 12 ವರ್ಷಕ್ಕಿಂತ ಮೇಲ್ಪಟ್ಟ ರೋಗಿಗಳಿಗೆ ಚಿಕಿತ್ಸೆ ನೀಡಲು ವೊರಾನಿಗೊವನ್ನು ಬಳಸಲಾಗುತ್ತದೆ.
ಭಾರತದಲ್ಲಿ ಕಡಿಮೆ ಬೆಲೆಗೆ ಔಷಧವನ್ನು ಲಭ್ಯವಾಗುವಂತೆ ಮಾಡಲು ಸರ್ವಿಯರ್ ಯೋಜಿಸಿದೆ. ಭಾರತದಲ್ಲಿ, ಈ ರೀತಿಯ ಮೆದುಳಿನ ಕ್ಯಾನ್ಸರ್ ಪ್ರಕರಣಗಳು ವರ್ಷಕ್ಕೆ 4,500 ಮೀರುತ್ತದೆ. ಕೀಮೋಥೆರಪಿಗಿಂತ ಭಿನ್ನವಾಗಿ, ಆರೋಗ್ಯಕರ ಕೋಶಗಳಿಗೆ ಹಾನಿಯಾಗದಂತೆ ವೊರಾನಿಗೊ IDH1/IDH2 ರೂಪಾಂತರಗಳನ್ನು ನಿರ್ಬಂಧಿಸುವ ಮೂಲಕ ಗೆಡ್ಡೆಯ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ. ಏತನ್ಮಧ್ಯೆ, ಸರ್ವಿಯರ್ ಈಗಾಗಲೇ ರಕ್ತ ಕ್ಯಾನ್ಸರ್ ಚಿಕಿತ್ಸೆಗಾಗಿ ಟಿಬ್ಸೊವೊ ಔಷಧವನ್ನು ಮಾರಾಟ ಮಾಡುತ್ತದೆ.








