ಬೆಂಗಳೂರು : ಸಾಮಾನ್ಯ ರೈಲುಗಳು, ಶತಾಬ್ದಿ ಎಕ್ಸ್‌ಪ್ರೆಸ್, ಗರೀಬ್ರಧ್ ರೈಲುಗಳು… ಇವೆಲ್ಲವೂ ಆಯ್ತು. ಈಗ ವಂದೇ ಭಾರತ್ ರೈಲುಗಳು ಬಂದಿವೆ. ವಂದೇ ಭಾರತ್ ಸ್ಲೀಪರ್ ರೈಲುಗಳು ಬರಲಿವೆ. ಇನ್ನು ಈಗ ಭಾರತೀಯ ರೈಲ್ವೇಯು ಗೇಮ್ ಚೇಂಜರ್ ಎಂದು ಕರೆಯಲ್ಪಡುವ ಹೈಸ್ಪೀಡ್ ಬುಲೆಟ್ ರೈಲು ಯೋಜನೆಯನ್ನ ತ್ವರಿತವಾಗಿ ಪೂರ್ಣಗೊಳಿಸುತ್ತಿದೆ. ಮೊದಲ ಹೈಸ್ಪೀಡ್ ರೈಲು ಕಾರಿಡಾರ್ ಮುಂಬೈ-ಅಹಮದಾಬಾದ್ ನಡುವೆ ಬರಲಿದ್ದು, ಎರಡನೇ ಹೈಸ್ಪೀಡ್ ರೈಲು ಚೆನ್ನೈ-ಮೈಸೂರು ನಡುವೆ ಓಡಲಿದೆ. ಈ ಹೈಸ್ಪೀಡ್ ಬುಲೆಟ್ ರೈಲು ಚೆನ್ನೈನಿಂದ ಬೆಂಗಳೂರಿನ ಮೂಲಕ ಮೈಸೂರಿಗೆ ಚಲಿಸಲಿದೆ. ಈ ಎರಡು ನಗರಗಳ ನಡುವಿನ ಅಂತರ ಕೇವಲ 90 ನಿಮಿಷಕ್ಕೆ ಕಡಿಮೆಯಾಗಲಿದೆ.
11 ನಿಲ್ದಾಣಗಳು.. ಹೈ ಸ್ಪೀಡ್.!
ಎರಡನೇ ಹೈಸ್ಪೀಡ್ ಬುಲೆಟ್ ಟ್ರೈನ್ ಕಾರಿಡಾರ್’ನ್ನ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕ ಮೂರು ರಾಜ್ಯಗಳನ್ನ ಸಂಪರ್ಕಿಸುವ 463 ಕಿಲೋಮೀಟರ್’ಗಳಿಗೆ ವಿಸ್ತರಿಸಲಾಗುವುದು. ಚೆನ್ನೈ-ಮೈಸೂರು ನಡುವೆ ಓಡುವ ಈ ಬುಲೆಟ್ ರೈಲು ಕೇವಲ 11 ನಿಲ್ದಾಣಗಳನ್ನು ಹೊಂದಿದೆ. ಚೆನ್ನೈ, ಪೂನಮಲ್ಲಿ, ಚಿತ್ತೂರು, ಕೋಲಾರ, ಕೋಡಹಳ್ಳಿ, ವೈಟ್‌ಫೀಲ್ಡ್, ಬೈಯಪ್ಪನಹಳ್ಳಿ, ಎಲೆಕ್ಟ್ರಾನಿಕ್ಸ್ ಸಿಟಿ, ಕೆಂಗೇರಿ, ಮಂಡ್ಯ, ಮೈಸೂರು ಈ ಮಾರ್ಗದಲ್ಲಿ ನಿಲುಗಡೆಯಾಗಲಿದೆ. ಗಂಟೆಗೆ 350 ಕಿ.ಮೀ, 320 ಕಿ.ಮೀ ಮತ್ತು ಸರಾಸರಿ 250 ಕಿ.ಮೀ ವೇಗದಲ್ಲಿ ಚಲಿಸುವ ಈ ರೈಲುಗಳಿಗೆ ರೈಲ್ವೆ ಇಲಾಖೆ ಹೈಸ್ಪೀಡ್ ಕನೆಕ್ಟಿವಿಟಿ ಕಾರಿಡಾರ್ ನಿರ್ಮಿಸಲಿದೆ. ಮುಂಬೈ-ಅಹಮದಾಬಾದ್ ಕಾರಿಡಾರ್ ನಡುವಿನ ಭಾರತದ ಮೊದಲ ಬುಲೆಟ್ ರೈಲು ಯೋಜನೆಯು ಪೂರ್ಣ ವೇಗದಲ್ಲಿ ಪ್ರಗತಿಯಲ್ಲಿದೆ. ಇದಾದ ಬಳಿಕ ಮೈಸೂರು-ಬೆಂಗಳೂರು-ಚೆನ್ನೈ ಕಾರಿಡಾರ್ ಆರಂಭವಾಗಲಿದೆ.
ಸುರಂಗ ಕಾಮಗಾರಿ..!
ಈ ಯೋಜನೆಗಾಗಿ ಚೆನ್ನೈನಲ್ಲಿ 2.5 ಕಿಮೀ, ಚಿತ್ತೂರಿನಲ್ಲಿ 11.8 ಕಿಮೀ, ಬೆಂಗಳೂರು ಗ್ರಾಮಾಂತರದಲ್ಲಿ 2 ಕಿಮೀ ಮತ್ತು ಬೆಂಗಳೂರು ನಗರದಲ್ಲಿ 14 ಕಿಮೀ ಉದ್ದದ 30 ಕಿಮೀ ಸುರಂಗ ಜಾಲವಿರುತ್ತದೆ. ಮೊದಲ ಹಂತದ ಯೋಜನೆಯು ಚೆನ್ನೈನಿಂದ ಬೆಂಗಳೂರಿನವರೆಗೆ 306 ಕಿ.ಮೀ ಮತ್ತು ಎರಡನೇ ಹಂತವು ಬೆಂಗಳೂರಿನಿಂದ ಮೈಸೂರಿನವರೆಗೆ 157 ಕಿ.ಮೀ. ಒಟ್ಟು 313 ಪಟ್ಟಣಗಳು ಮತ್ತು ಹಳ್ಳಿಗಳು ಈ ಯೋಜನೆಯ ಭಾಗವಾಗಲಿವೆ. ಏತನ್ಮಧ್ಯೆ, ಮೈಸೂರು-ಬೆಂಗಳೂರು-ಚೆನ್ನೈ ಹೈಸ್ಪೀಡ್ ಬುಲೆಟ್ ರೈಲು ಯೋಜನೆ.. ಇದು ದಕ್ಷಿಣದಲ್ಲಿ ಆರ್ಥಿಕ ಬೆಳವಣಿಗೆ, ವೇಗದ ಪ್ರಯಾಣ ಮತ್ತು ಪ್ರವಾಸೋದ್ಯಮವನ್ನ ಸುಧಾರಿಸುತ್ತದೆ ಎನ್ನಲಾಗ್ತಿದೆ.
Watch Video : ಖದೀಯಲು ಬಂದ ಕಳ್ಳನೇ ಮನೆಯಲ್ಲಿ ’20 ರೂಪಾಯಿ’ ಇಟ್ಟು ಹೊರಟ, ವಿಲಕ್ಷಣ ವಿಡಿಯೋ ವೈರಲ್