ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಪುನರ್ರಚಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಮುಂದುವರಿಕೆಗೆ ಅನುಮೋದನೆ ನೀಡಿದೆ.
ಅದ್ರಂತೆ, 2021-22 ರಿಂದ 2025-26 ರವರೆಗೆ ಒಟ್ಟಾರೆ 69,515.71 ಕೋಟಿ ರೂ.ಗಳ ವೆಚ್ಚದೊಂದಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಪುನರ್ರಚಿಸಿದ್ದು, ಹವಾಮಾನ ಆಧಾರಿತ ಈ ಬೆಳೆ ವಿಮಾ ಯೋಜನೆಯನ್ನು 2025-26ರವರೆಗೆ ಸರ್ಕಾರ ಮುಂದುವರಿಸಲಿದೆ.
ಈ ಕುರಿತು ಮಾಹಿತಿ ನೀಡಿದ ಸಚಿವ ಅಶ್ವಿನಿ ವೈಷ್ಣವ್, ಕೇಪ್ ಆಫ್ ಗುಡ್ ಹೋಪ್ ಮೂಲಕ ಹೆಚ್ಚಿನ ಸಾರಿಗೆ ವೆಚ್ಚದಿಂದಾಗಿ ಮುಕ್ತ ಮಾರುಕಟ್ಟೆಯಲ್ಲಿ ಡಿಎಪಿ ಚೀಲದ ಬೆಲೆ 3,000 ರೂ.ಗಿಂತ ಹೆಚ್ಚು; ನಾವು 50 ಕೆಜಿ ಚೀಲಕ್ಕೆ 1350 ರೂ.ಗೆ ನೀಡುತ್ತಿದ್ದೇವೆ ಎಂದರು. ಇನ್ನು ನಮ್ಮಲ್ಲಿ ಸಾಕಷ್ಟು ಪೂರೈಕೆ ಮತ್ತು ಡಿಎಪಿ ರಸಗೊಬ್ಬರದ ವಿತರಣೆ ಇದೆ ಎಂದು ಸಚಿವರು ಹೇಳಿದರು.
ಅಲ್ಲದೆ, 824.77 ಕೋಟಿ ರೂ.ಗಳ ಕಾರ್ಪಸ್ನೊಂದಿಗೆ ಫಂಡ್ ಫಾರ್ ಇನ್ನೋವೇಶನ್ ಅಂಡ್ ಟೆಕ್ನಾಲಜಿ (ಫಿಯೆಟ್) ರಚಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ.
ಈ ನಿಧಿಯಡಿ ತಾಂತ್ರಿಕ ಉಪಕ್ರಮಗಳಾದ ಯೆಸ್-ಟೆಕ್, ವಿಂಡ್ಸ್ ಇತ್ಯಾದಿಗಳಿಗೆ ಧನಸಹಾಯ ನೀಡಲು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಅಧ್ಯಯನಗಳಿಗೆ ಬಳಸಲಾಗುವುದು.
ICC Test Ranking : ಇತಿಹಾಸ ಸೃಷ್ಟಿಸಿದ ‘ಜಸ್ಪ್ರೀತ್ ಬುಮ್ರಾ’ : ಟೆಸ್ಟ್ ಬೌಲರ್’ಗಳ ರ್ಯಾಂಕಿಂಗ್’ನಲ್ಲಿ ಅಗ್ರಸ್ಥಾನ
BREAKING : ಟೆಕ್ಕಿ ಅತುಲ್ ಬಳಿಕ ಪತ್ನಿಯ ಕಿರುಕುಳಕ್ಕೆ ಮತ್ತೊಂದು ಬಲಿ : ದೆಹಲಿಯಲ್ಲಿ ಬೇಕರಿ ಮಾಲೀಕ ನೇಣಿಗೆ ಶರಣು!