ಬೆಂಗಳೂರು: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಡಿಜಿಪಿ ರಾಮಚಂದ್ರ ರಾವ್ ತಮ್ಮ ಮಗಳಿಗಾಗಿ ಪ್ರೋಟೋಕಾಲ್ ದುರುಪಯೋಗ ಮಾಡಿಕೊಂಡಿರೋದಾಗಿ ಸರ್ಕಾರಕ್ಕೆ ತನಿಖಾ ಸಮಿತಿ ಸಲ್ಲಿಸಿದಂತ ವರದಿಯಿಂದ ಬಹಿರಂಗಗೊಂಡಿದೆ.
ನಟಿ ರನ್ಯಾ ರಾವ್ ವಿರುದ್ಧದ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ತನಿಖೆಗೆ ಐಎಎಸ್ ಅಧಿಕಾರಿ ಗೌರವ್ ಗುಪ್ತ ನೇತೃತ್ವದಲ್ಲಿ ಸಮಿತಿಯನ್ನು ಸರ್ಕಾರ ರಚಿಸಿತ್ತು. ಈ ಸಮಿತಿಗೆ ಡಿಜಿಪಿ ರಾಮಚಂದ್ರರಾವ್ ಅವರು ಮಗಳಿಗಾಗಿ ಪ್ರೋಟೋಕಾಲ್ ದುರುಪಯೋಗದ ಬಗ್ಗೆಯೂ ತನಿಖೆ ನಡೆಸುವಂತೆ ವಹಿಸಲಾಗಿತ್ತು.
ಈ ಸಂಬಂಧ ರಾಜ್ಯ ಸರ್ಕಾರಕ್ಕೆ ತನಿಖಾ ಸಮಿತಿಯಿಂದ ವರದಿ ಸಲ್ಲಿಸಲಾಗಿದೆ. ಈ ವರದಿಯಲ್ಲಿ ನಟಿ ರನ್ಯಾ ರಾವ್ ಅವರಿಗಾಗಿ ಡಿಜಿಪಿ ರಾಮಚಂದ್ರ ರಾವ್ ಪ್ರೋಟೋಕಾಲ್ ದುರುಪಯೋಗ ಮಾಡಿಕೊಂಡಿರೋದಾಗಿ ಸಾಕ್ಷಿಗಳಿಂದ ದೃಢಪಟ್ಟಿದೆ ಎಂಬುದಾಗಿ ತಿಳಿದು ಬಂದಿದೆ.
ಮಗಳಿಗಾಗಿ ಡಿಜಿಪಿ ರಾಮಚಂದ್ರ ರಾವ್ ಪ್ರೋಟೋಕಾಲ್ ದುರುಪಯೋಗ ಮಾಡಿಕೊಂಡಿರೋ ಬಗ್ಗೆ ಸಾಕ್ಷಿಗಳ ಸಹಿತ ಸರ್ಕಾರಕ್ಕೆ ಐಎಎಸ್ ಅಧಿಕಾರಿ ಗೌರವ್ ಗುಪ್ತ ಸಲ್ಲಿಸಿದಂತ ವರದಿಯಲ್ಲಿ ತಿಳಿಸಲಾಗಿದೆ ಎಂಬುದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಬೇಕಿದೆ.
ಶಿವಕುಮಾರ ಸ್ವಾಮೀಜಿಗಳಿಗೆ ‘ಭಾರತ ರತ್ನ’ ನೀಡಲು ಕೇಂದ್ರ ಸರಕಾರಕ್ಕೆ ಮನವಿ: ಡಿಸಿಎಂ ಡಿ.ಕೆ.ಶಿವಕುಮಾರ್
BREAKING : ಮೈಸೂರಲ್ಲಿ 2 ಬೈಕ್ ಗಳ ಮಧ್ಯ ಮುಖಾಮುಖಿ ಡಿಕ್ಕಿ : ಸ್ಥಳದಲ್ಲೇ ಇಬ್ಬರ ಸಾವು, ಮೂವರಿಗೆ ಗಾಯ