ಬೆಂಗಳೂರು: ನಟಿ ರನ್ಯಾ ರಾವ್ ಅವರನ್ನು ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿದೆ. ಇಂತಹ ಅವರು ಜಾಮೀನು ಕೋರಿ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆಯನ್ನು ಆರ್ಥಿಕ ಅಪರಾಧಗಳ ನ್ಯಾಯಾಲಯ ನಡೆಸಿತು. ವಾದ, ಪ್ರತಿವಾದವನ್ನು ಆಲಿಸಿದಂತ ಕೋರ್ಟ್ ಮಾರ್ಚ್.14ಕ್ಕೆ ಜಾಮೀನು ಅರ್ಜಿಯ ಆದೇಶದ ತೀರ್ಪು ಕಾಯ್ದಿರಿಸಿದ್ದರು. ಇದೀಗ ತನ್ನ ತೀರ್ಪು ಪ್ರಕಟಿಸಿರುವಂತ ನ್ಯಾಯಾಲಯವು ನಟಿ ರನ್ಯಾ ರಾವ್ ಗೆ ಬಿಗ್ ಶಾಕ್ ಎನ್ನುವಂತೆ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಬಂಧಿಸಲಾಗಿದೆ. ಅವರಿಗೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪ್ರಕರಣದಲ್ಲಿ ಜಾಮೀನು ನೀಡುವಂತೆ ಬೆಂಗಳೂರಿನ ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ವೇಳೆ ಡಿ ಆರ್ ಐ ಪರ ವಕೀಲ ಮಧು ರಾವ್ ವಾದ ಮಂಡಿಸಿದ್ದರು.
ಕಸ್ಟಡಿ ಅವಧಿಯಲ್ಲಿ ನಟಿ ರನ್ಯಾ ರಾವ್ ಅವರು ತನಿಖೆಗೆ ಯಾವುದೇ ರೀತಿಯಲ್ಲಿ ಸಹಕರಿಸಿಲ್ಲ. ಅಪರಾಧದ ಮನಸ್ಥಿತಿಯ ಬಗ್ಗೆ ಪರಿಶೀಲಿಸಬೇಕು. ಜಾಮೀನು ನೀಡಿದರೇ ಸಮಸ್ಯೆ ಆಗಲಿದೆ. ಮಹಿಳೆಯಾಗಿದ್ದರೂ ಕೂಡ ಬೇಲ್ ನೀಡಬಾರದು. ದೊಡ್ಡ ಮಟ್ಟದ ಸ್ಮಗ್ಲಿಂಗ್ ಆಗಿರುವುದು ಪರಿಗಣಿಸಬೇಕು ಎಂಬುದಾಗಿ ವಾದಿಸಿದ್ದರು.
ವಾದ ಪ್ರತಿವಾದವನ್ನು ಆಲಿಸಿದಂತ ಬೆಂಗಳೂರಿನ ಆರ್ಥಿಕ ಅಪರಾಧಗಳ ನ್ಯಾಯಾಲಯವು, ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ಆದೇಶವನ್ನು ಮಾರ್ಚ್.14ಕ್ಕೆ ಕಾಯ್ದಿರಿಸಿತ್ತು.
ಇನ್ನೂ ರನ್ಯಾ ರಾವ್ ಬಂಧನ ಪ್ರಕರಣ ಸಂಬಂಧದ ವಿಚಾರಣೆಯ ವೇಳೆಯಲ್ಲಿ ಈ ಪ್ರಕರಣಕ್ಕೆ ಅಂತಾರಾಷ್ಟ್ರೀಯ ಲಿಂಕ್ ಗಳಿದ್ದಾವೆ. ಕಸ್ಟಮ್ಸ್ ಬ್ಯಾಗೇಜ್ ನಿಯಮ ಉಲ್ಲಂಘನೆ ಮಾಡಲಾಗಿದೆ. ನಟಿ ರನ್ಯಾ ರಾವ್ ಹೊರ ಬಂದಲ್ಲಿ ಸಾಕ್ಷ್ಯ ನಾಶ ಮತ್ತು ಮಿಸ್ ಲೀಡ್ ಮಾಡಬಹುದು ಎಂಬುದಾಗಿಯೂ ಡಿಆರ್ ಐ ಪರ ವಕೀಲರು ವಾದಿಸಿದ್ದರು.
ಇದಷ್ಟೇ ಅಲ್ಲದೇ ನಟಿ ರನ್ಯಾ ರಾವ್ ಅವರು 1 ವರ್ಷದಲ್ಲಿ 27 ಬಾರಿ ವಿದೇಶಿ ಪ್ರಯಾಣ ಮಾಡಿದ್ದಾರೆ. ಇದರಿಂದ 38 ಪರ್ಸೆಂಟ್ ಕಸ್ಟಮ್ಸ್ ಸುಂಕ ವಂಚನೆಯಾಗಿದೆ. ಒಟ್ಟು 4,83,72,694 ರೂ ವಂಚನೆಯಾಗಿದೆ. ಆಕೆಯ ಬಳಿಯಲ್ಲಿ ದುಬೈ ರೆಸಿಡೆಂಟ್ ಐಡೆಂಟಿಟಿ ಕಾರ್ಡ್ ಇದೆ. ಹೀಗಾಗಿ ಜಾಮೀನು ನೀಡದಂತೆ ಮನವಿ ಮಾಡಲಾಗಿತ್ತು. ಈ ಮನವಿ ಪುರಸ್ಕರಿಸಿರುವಂತ ಕೋರ್ಟ್, ಇಂದು ನಟಿ ರನ್ಯಾ ರಾವ್ ಚಿನ್ನಸಾಗಾಣಿಕೆ ಕೇಸಲ್ಲಿ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಭಾರತದಲ್ಲಿ ಶೇ.57ರಷ್ಟು ಕಾರ್ಪೊರೇಟ್ ಪುರುಷರು ವಿಟಮಿನ್ ಬಿ12 ಕೊರತೆ ಎದುರಿಸುತ್ತಿದ್ದಾರೆ: ಸಮೀಕ್ಷೆ