ಬೆಂಗಳೂರು: ಬರೋಬ್ಬರಿ 14.8 ಕೆಜಿ ಚಿನ್ನದೊಂದಿಗೆ ನಿನ್ನೆ ರಾತ್ರಿ ದುಬೈನಿಂದ ಬೆಂಗಳೂರಿಗೆ ಬಂದಾಗ ನಟಿ ರನ್ಯಾ ರಾವ್ ಡಿಆರ್ ಐ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಕೋರ್ಟ್ ಮಾರ್ಚ್.18ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ.
ನಿನ್ನೆ ರಾತ್ರಿ ದುಬೈನಿಂದ ಬೆಂಗಳೂರಿಗೆ ಬಂದಿದ್ದಂತ ನಟಿ ರನ್ಯಾ ರಾವ್ ಅವರು 14.8 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಾಟ ಪ್ರಕರಣದಲ್ಲಿ ಡಿ ಆರ್ ಐ ನಿಂದ ಬಂಧನಕ್ಕೆ ಒಳಗಾಗಿದ್ದರು. ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದಂತ ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್, ನಟಿ ರನ್ಯಾ ರಾವ್ ಅವರಿಗೆ ಮಾರ್ಚ್.18ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ. ಈ ಮೂಲಕ ಚಿನ್ನ ಅಕ್ರಮವಾಗಿ ಸಾಗಾಟ ಪ್ರಕರಣದಲ್ಲಿ ಸಿಕ್ಕಿಬಿದ್ದಂತ ನಟಿ ರನ್ಯಾ ರಾವ್ ಅವರು ಜೈಲುಪಾಲಾದಂತೆ ಆಗಿದೆ.
ಅಂದಹಾಗೇ ನಟಿ ರನ್ಯಾ ರಾವ್ ಅವರು ಕಿಚ್ಚ ಸುದೀಪ್ ಅಭಿನಯದ ಮಾಣಿಕ್ಯ, ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಪಟಾಕಿ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಅಕ್ರಮ ಚಿನ್ನ ಕಳ್ಳಸಾಗಾಣಿಕ ಕೇಸಲ್ಲಿ ಸಿಕ್ಕಿಬಿದ್ದು, ಕೃಷ್ಣನ ಜನ್ಮಸ್ಥಆನವನ್ನು ಸೇರಿದ್ದಾರೆ.
BREAKING: ಮತ್ತೆ ಮುಡಾ ಪ್ರಕರಣದಲ್ಲಿ ಸಿಎಂ ಸಿದ್ಧರಾಮಯ್ಯಗೆ ಸಂಕಷ್ಟ: ಮೇಲ್ಮನವಿ ಸಲ್ಲಿಸಿದ ದೂರುದಾರ ಸ್ನೇಹಮಯಿ ಕೃಷ್ಣ