ಬೆಂಗಳೂರು: ನಿನ್ನೆ ಕುಸಿತಗೊಂಡಿದ್ದಂತ ಬಂಗಾರವು ಇಂದು ಮತ್ತೆ ಏರಿಕೆ ಕಂಡಿದೆ. ಆ ಮೂಲಕ ಬಂಗಾರದ ಬೆಲೆಯೇ ಸ್ಪೋಟಗೊಂಡಿದೆ. ಇಂದು 10 ಗ್ರಾಂ ಚಿನ್ನದ ಬೆಲೆಯು 1 ಲಕ್ಷದ 60 ಸಾವಿರ ರೂಪಾಯಿಗೆ ತಲುಪಿದೆ.
ಇಂದು ಎಂಸಿಎಕ್ಸ್ ಚಿನ್ನದ ಮಾರುಕಟ್ಟೆಯಲ್ಲಿ ಗರಿಷ್ಠ ಬೆಲೆಯೊಂದಿಗೆ ಚಿನ್ನದ ವಹಿವಾಟು ಆರಂಭಗೊಂಡಿದೆ. ಬಂಗಾರದ ಬೆಲೆ ದಿಢೀರ್ ಸ್ಪೋಟಗೊಂಡಿದ್ದು, ನಿನ್ನೆ ಕುಸಿತಗೊಂಡಿದ್ದ ಚಿನ್ನ, ಇಂದು ಏರಿಕೆ ಕಂಡು, ಆಭರಣ ಪ್ರಿಯರಿಗೆ ಶಾಕ್ ನೀಡಲಾಗಿದೆ.
ಬೆಂಗಳೂರಲ್ಲಿ 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆಯು ರೂ.15,917ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ ಪ್ರತಿ ಗ್ರಾಂ ಚಿನ್ನದ ಬೆಲೆಯು ರೂ.540 ಏರಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಇಂದು ರೂ.1,59,300 ತಲುಪಿದೆ. 22 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ ರೂ.495 ಏರಿಕೆಯಾದ ಪರಿಣಾಮ, ಗ್ರಾಂಗೆ ರೂ.14,640 ತಲುಪಿದೆ.
ಇನ್ನೂ 18 ಕ್ಯಾರೆಟ್ ಚಿನ್ನವು 1 ಗ್ರಾಂ ಬೆಲೆ ರೂ.405 ಏರಿಕೆಯಾದ ಪರಿಣಾಮ ಪ್ರತಿ ಗ್ರಾಂ ಚಿನ್ನದ ಬೆಲೆಯು ರೂ.11,978ಕ್ಕೆ ಮುಟ್ಟಿದೆ. ಆ ಮೂಲಕ ಆಭರಣ ಪ್ರಿಯರಿಗೆ ಬಿಗ್ ಶಾಕ್ ಅನ್ನು ಇಂದು ಒಂದೇ ದಿನ ನೀಡಿದೆ.








