ಬಾಗಲಕೋಟೆ: ಹೊರಗೆ ತೆಗೆದುಕೊಂಡು ಹೋದ್ರೆ ಕಳ್ಳರು ಕದ್ದೊಯ್ಯಬಹುದು ಎಂಬುದಾಗಿ ಕಳ್ಳರಿಗೆ ಹೆದರಿ ಮನೆಯಲ್ಲೇ ಬಚ್ಚಿಟ್ಟು ಹೋಗಿದ್ದ ಬರೋಬ್ಬರಿ 12 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಲಾಗಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ 12 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಆಭರಣ ಧರಿಸಿ ದೇವಸ್ಥಾನಕ್ಕೆ ಹೋದರೆ ಕಳ್ಳತನವಾದೀತೆಂಬ ಭೀತಿಯಿಂದ ಮನೆಯಲ್ಲೇ ಕುಟುಂಬಸ್ಥರು ಬಚ್ಚಿಟ್ಟು ಹೋಗಿದ್ದರು.
ಇಳಕಲ್ ನಲ್ಲಿ ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಪುನೀತ್ ಕುಂಬಾರ್ ಎಂಬುವರ ಕುಟುಂಬ ತೆರಳಿತ್ತು. ತೆರಳುವಾಗ ಮೈಮೇಲೆ ಹಾಕಿಕೊಂಡು ಹೋದರೇ ಕಳ್ಳರ ಕಣ್ಣು ಬೀಳಬಹುದು ಎಂಬುದಾಗಿ ತಮ್ಮ ಮನೆಯಲ್ಲೇ 90 ಗ್ರಾಂ ಚಿನ್ನಾಭರಣ, 270 ಗ್ರಾಂ ಬೆಳ್ಳಿ, 10 ಸಾವಿರ ನಗದನ್ನು ಬಚ್ಚಿಟ್ಟು ಹೋಗಿದ್ದರು.
ಹೀಗೆ ಅತ್ತ ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಪುನೀತ್ ಕುಂಬಾರ ಕುಟುಂಬ ತೆರಳಿದರೇ, ಇತ್ತ ಅದೇ ದಿನ ರಾತ್ರಿ ಅವರ ಮನೆಗೆ ಕಳ್ಳರು ಕನ್ನ ಹಾಕಿ, 12 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಕೊಂಡು ಹೋಗಿದ್ದಾರೆ.
75 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿ, 10,000 ನಗದು ಹಣವನ್ನು ಕಳ್ಳತನ ಮಾಡಲಾಗಿದೆ. ಈ ಸಂಬಂಧ ಇಳಕಲ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
GOOD NEWS: ಡಿಸೆಂಬರ್ 2025ರಿಂದ ಹುಬ್ಬಳ್ಳಿ-ಬೆಂಗಳೂರು, ಯಶವಂತಪುರ-ವಿಜಯಪುರ ವಿಶೇಷ ರೈಲುಗಳು ನಿಯಮಿತವಾಗಿ ಸಂಚಾರ
ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ನವೆಂಬರ್ ನಲ್ಲಿ ಕ್ರಾಂತಿ ನೂರಕ್ಕೆ ನೂರರಷ್ಟು ಸತ್ಯ: ಎಂ.ಪಿ ರೇಣುಕಾಚಾರ್ಯ ಭವಿಷ್ಯ








