ನವದೆಹಲಿ: ಭಾರತದ ಮೇಲೆ ದಾಳಿ ನಡೆಸುವ ಬಗ್ಗೆ ಉದ್ಧಟತನದ ಹೇಳಿಕೆ ನೀಡಿದ್ದ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್‌ಗೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಒಂದು ವೇಳೆ ಪಾಕಿಸ್ತಾನವು ಬಂಗಾಳದ ಮೇಲೆ ಕಣ್ಣಿಟ್ಟರೆ, ಈ ಬಾರಿ ಆ ದೇಶ ಎಷ್ಟು ತುಂಡುಗಳಾಗಿ ವಿಭಜನೆಯಾಗುತ್ತದೆಯೋ ದೇವರಿಗೇ ಗೊತ್ತು” ಎಂದು ಸಿಂಗ್ ಎಚ್ಚರಿಸಿದ್ದಾರೆ.
ಹಿನ್ನೆಲೆ: ಇತ್ತೀಚೆಗಷ್ಟೇ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್, ಭಾರತವು ಏನಾದರೂ ಸಾಹಸಕ್ಕೆ ಕೈಹಾಕಿದರೆ ನಾವು ‘ಕೋಲ್ಕತ್ತಾ’ ಮೇಲೆ ದಾಳಿ ನಡೆಸುತ್ತೇವೆ ಎಂದು ಪ್ರಚೋದನಾತ್ಮಕವಾಗಿ ಮಾತನಾಡಿದ್ದರು. ಭಾರತವು ಪಾಕಿಸ್ತಾನದ ವಶದಲ್ಲಿರುವ ವ್ಯಕ್ತಿಗಳನ್ನು ಬಳಸಿ ‘ಫಾಲ್ಸ್ ಫ್ಲಾಗ್ ಆಪರೇಷನ್’ (ನಕಲಿ ಕಾರ್ಯಾಚರಣೆ) ನಡೆಸಲು ಸಂಚು ರೂಪಿಸುತ್ತಿದೆ ಎಂದು ಆಸಿಫ್ ಯಾವುದೇ ಪುರಾವೆಗಳಿಲ್ಲದೆ ಆರೋಪಿಸಿದ್ದರು.
ರಾಜನಾಥ್ ಸಿಂಗ್ ನೀಡಿದ ಎಚ್ಚರಿಕೆ: ಪಾಕ್ ಸಚಿವನ ಈ ಹೇಳಿಕೆಗೆ ತಿರುಗೇಟು ನೀಡಿದ ರಾಜನಾಥ್ ಸಿಂಗ್ ಅವರು 1971ರ ಯುದ್ಧದ ಇತಿಹಾಸವನ್ನು ನೆನಪಿಸಿದ್ದಾರೆ:
-
ಪಾಕಿಸ್ತಾನದ ರಕ್ಷಣಾ ಸಚಿವರು ಇಂತಹ ಪ್ರಚೋದನಾತ್ಮಕ ಹೇಳಿಕೆ ನೀಡಬಾರದಿತ್ತು.
-
55 ವರ್ಷಗಳ ಹಿಂದೆ ಪಾಕಿಸ್ತಾನವು ಎರಡು ಭಾಗಗಳಾಗಿ ವಿಭಜನೆಯಾದಾಗ ಅವರು ಅನುಭವಿಸಿದ ಪರಿಣಾಮಗಳನ್ನು ಮರೆಯಬಾರದು.
-
ಈ ಬಾರಿ ಪಾಕಿಸ್ತಾನವು ಭಾರತದ ವಿರುದ್ಧ ಅತಿರೇಕದ ನಡೆ ಪ್ರದರ್ಶಿಸಿದರೆ ಅದರ ಪರಿಣಾಮ ಘೋರವಾಗಿರಲಿದೆ.
ಕಳೆದ ವರ್ಷ ಏಪ್ರಿಲ್ 22 ರಂದು ಪಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ನಾಲ್ಕು ದಿನಗಳ ಕಾಲ ಸಂಘರ್ಷ ನಡೆದಿತ್ತು. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ಮತ್ತೆ ವಾಕ್ಸಮರ ತೀವ್ರಗೊಂಡಿದೆ.
ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ರಾಜೀನಾಮೆ: ಉತ್ತರಾಧಿಕಾರಿಯ ಆಯ್ಕೆವರೆಗೆ ಮುಂದುವರಿಕೆ – ಸಂಸ್ಥೆ ಸ್ಪಷ್ಟನೆ








