Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸರ್ಕಾರದಿಂದ `ರೈತರಿಗೆ’ ಭಾರತ್ ವಿಸ್ತಾರ್ ಯೋಜನೆ ಜಾರಿ : ಒಂದೇ ಕ್ಲಿಕ್ ನಲ್ಲಿ ಎಲ್ಲಾ ಕೃಷಿ ಪ್ರಶ್ನೆಗಳಿಗೆ ನಿಮ್ಮ ಭಾಷೆಯಲ್ಲೇ ಸಿಗಲಿದೆ ಉತ್ತರ !

21/02/2026 5:49 AM

BIG NEWS : ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆ, ಕಚೇರಿಗಳ ಸಭೆ-ಸಮಾರಂಭಗಳಲ್ಲಿ `ನಂದಿನಿ ಉತ್ಪನ್ನಗಳ ಬಳಕೆ’ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ !

21/02/2026 5:47 AM

ರಾಜ್ಯದಲ್ಲಿ ಹೆಚ್ಚಾದ ಬಿಸಿಲ ತಾಪ: ಈ ಸಲಹೆ ಪಾಲಿಸುವಂತೆ ‘ಆರೋಗ್ಯ ಇಲಾಖೆ’ ಸೂಚನೆ | Heat Wave

21/02/2026 5:46 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಂಡ್ಯದಲ್ಲಿ ಜಾಗತಿಕ ಕ್ರೀಡಾ ಸೌಲಭ್ಯ; ಕೇಂದ್ರದಿಂದ ₹14 ಕೋಟಿ ಮಂಜೂರು- HDK
KARNATAKA

ಮಂಡ್ಯದಲ್ಲಿ ಜಾಗತಿಕ ಕ್ರೀಡಾ ಸೌಲಭ್ಯ; ಕೇಂದ್ರದಿಂದ ₹14 ಕೋಟಿ ಮಂಜೂರು- HDK

By kannadanewsnow0910/01/2026 6:54 PM

ನವದೆಹಲಿ: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಜಾಗತಿಕ ಗುಣಮಟ್ಟದ ಕ್ರೀಡಾ ಮೂಲಸೌಕರ್ಯ ಕಲ್ಪಿಸುವ ಉದೇಶಕ್ಕಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಮನವಿಯ ಮೇರೆಗೆ ಕೇಂದ್ರ ಸರ್ಕಾರವು ₹14 ಕೋಟಿ ಮಂಜೂರು ಮಾಡಿದೆ.

ಜಿಲ್ಲೆಯಲ್ಲಿ ಕ್ರೀಡಾ ಸೌಕರ್ಯವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಸಚಿವ ಕುಮಾರಸ್ವಾಮಿ ಅವರು ಕೇಂದ್ರದ ಕ್ರೀಡಾ ಮತ್ತು ಯುವಜನ ಸಬಲೀಕರಣ ಖಾತೆ ಸಚಿವ ಮನ್ಸುಖ್ ಮಾಂಡವೀಯ ಅವರಿಗೆ ಪತ್ರ ಬರೆದು ವಿನಂತಿಸಿದ್ದರು.

ಮನವಿಗೆ ತಕ್ಷಣ ಸ್ಪಂದಿಸಿರುವ ಕ್ರೀಡಾ ಸಚಿವರು; ಖೇಲೋ ಇಂಡಿಯಾ ಯೋಜನೆಯಡಿ ಮಂಡ್ಯ ಜಿಲ್ಲೆಯಲ್ಲಿ ಬಹುಪಯೋಗಿ ಕ್ರೀಡಾ ಸೌಲಭ್ಯ ನಿರ್ಮಾಣಕ್ಕೆ ₹14 ಕೋಟಿ ಮಂಜೂರು ಮಾಡಿದ್ದಾರೆ.

₹14 ಕೋಟಿ ಅನುಮೋದಿತ ವೆಚ್ಚದಲ್ಲಿ ಮಂಡ್ಯದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಬಹುಪಯೋಗಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಸಚಿವ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ಅನೇಕ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ಮತ್ತು ರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ. ಅನೇಕ ಯುವ ಪ್ರತಿಭೆಗಳು ಜಿಲ್ಲೆಯಲ್ಲಿ ಅವಕಾಶ ಸಿಗದೆ ಹೊರ ಭಾಗಗಳಲ್ಲಿ ತರಬೇತಿಗೆ ಹೋಗುತ್ತಿದ್ದಾರೆ. ಅನೇಕ ಕ್ರೀಡಾಪಟುಗಳು ರಾಷ್ಟ್ರೀಯ ಶಿಬಿರಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇಂತಹ ಸೌಕರ್ಯವನ್ನು ಮಂಡ್ಯದಲ್ಲಿಯೇ ಒದಗಿಸುವ ಉದೇಶದಿಂದ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಇದು ಉತ್ತಮ.ಯೋಜನೆಯಾಗಿದೆ. ನನ್ನ ಮನವಿಗೆ ಸ್ಪಂದಿಸಿದ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಸಚಿವರು ಹೇಳಿದ್ದಾರೆ.

ಜಿಲ್ಲೆಯ ಕ್ರೀಡೆಗೆ ಬಹುದೊಡ್ಡ ಉತ್ತೇಜನ:

ಕೇಂದ್ರದ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ದೇಶದ ಉದ್ದಗಲಕ್ಕೂ ಜಾಗತಿಕ ಗುಣಮಟ್ಟದ ಕ್ರೀಡಾ ಸೌಕರ್ಯ ಅಭಿವೃದ್ಧಿಪಡಿಸಿ ಗ್ರಾಮೀಣ ಮಟ್ಟದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಈ ಯೋಜನೆಯ ಭಾಗವಾಗಿ ಮಂಡ್ಯದಲ್ಲಿ ₹14 ಕೋಟಿ ವೆಚ್ಚದಲ್ಲಿ ಅತ್ಯುತ್ತಮ ಗುಣಮಟ್ಟದ ಕ್ರೀಡಾ ಸೌಲಭ್ಯವನ್ನು ನಿರ್ಮಾಣ ಮಾಡಲಾಗುವುದು ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಹುಪಯೋಗಿ ಕ್ರೀಡಾ ಸೌಲಭ್ಯಕ್ಕೆ ಈಗ ಅನುಮೋದನೆ ದೊರೆತಿರುವುದರಿಂದ ಮಂಡ್ಯ ಕ್ರೀಡಾ ಅಭಿವೃದ್ಧಿ ಮತ್ತು ಉತ್ತೇಜನದಲ್ಲಿ ಹೊಸ ಯುಗಕ್ಕೆ ನಾಂದಿಯಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದ ಕೇಂದ್ರ ಸಚಿವರು; ಈ ಕ್ರೀಡಾ ಸಮುಚ್ಚಯದಲ್ಲಿ ಯುವ ಕ್ರೀಡಾಪಟುಗಳ ತರಬೇತಿ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸುವುದು, ಸಾರ್ವಜನಿಕರಲ್ಲಿ ಫಿಟ್‌ನೆಸ್ ಅನ್ನು ಉತ್ತೇಜಿಸುವ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಈ ಮಂಜೂರಾತಿಯು ಮಂಡ್ಯಕ್ಕೆ ಮಹತ್ವದ ಕೊಡುಗೆಯಾಗಿದೆ ಎಂದರು.

ಕೃಷಿ ಆಧರಿತವಾದ ಮಂಡ್ಯ ಜಿಲ್ಲೆಯೂ ಪ್ರತಿಭೆಗಳ ಆಗರ. ಆನೇಕ ಪ್ರತಿಭಾವಂತರು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಈ ನಿಟ್ಟಿನಲ್ಲಿ ಕ್ರೀಡೆಯನ್ನು ಉತ್ತೇಜಿಸುವುದು ಅಗತ್ಯವಾಗಿದೆ. ಆರೋಗ್ಯವಂತ ಸಶಕ್ತ ಮಂಡ್ಯ ಜಿಲ್ಲೆ ನಿರ್ಮಾಣಕ್ಕೆ ಈ ಯೋಜನೆ ಪೂರಕವಾಗಿದೆ. ಇದು ಪ್ರಧಾನಿ ಮೋದಿ ಅವರ ಕನಸು ಕೂಡ ಆಗಿದೆ ಎಂದು ಸಚಿವರು ಹೇಳಿದ್ದಾರೆ.

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆ, ಕಚೇರಿಗಳ ಸಭೆ-ಸಮಾರಂಭಗಳಲ್ಲಿ `ನಂದಿನಿ ಉತ್ಪನ್ನಗಳ ಬಳಕೆ’ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ !

21/02/2026 5:47 AM1 Min Read

ರಾಜ್ಯದಲ್ಲಿ ಹೆಚ್ಚಾದ ಬಿಸಿಲ ತಾಪ: ಈ ಸಲಹೆ ಪಾಲಿಸುವಂತೆ ‘ಆರೋಗ್ಯ ಇಲಾಖೆ’ ಸೂಚನೆ | Heat Wave

21/02/2026 5:46 AM2 Mins Read

‘ರಾಜ್ಯ ಸರ್ಕಾರಿ ನೌಕರ’ರ ಗಮನಕ್ಕೆ: ಹೀಗಿದೆ ಕಂಪ್ಯೂಟರ್ ಆಧಾರಿತ ಪರೀಕ್ಷೆ(CLT)ಯ ಹೊಸ ಪಠ್ಯಕ್ರಮ

21/02/2026 5:05 AM3 Mins Read
Recent News

ಸರ್ಕಾರದಿಂದ `ರೈತರಿಗೆ’ ಭಾರತ್ ವಿಸ್ತಾರ್ ಯೋಜನೆ ಜಾರಿ : ಒಂದೇ ಕ್ಲಿಕ್ ನಲ್ಲಿ ಎಲ್ಲಾ ಕೃಷಿ ಪ್ರಶ್ನೆಗಳಿಗೆ ನಿಮ್ಮ ಭಾಷೆಯಲ್ಲೇ ಸಿಗಲಿದೆ ಉತ್ತರ !

21/02/2026 5:49 AM

BIG NEWS : ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆ, ಕಚೇರಿಗಳ ಸಭೆ-ಸಮಾರಂಭಗಳಲ್ಲಿ `ನಂದಿನಿ ಉತ್ಪನ್ನಗಳ ಬಳಕೆ’ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ !

21/02/2026 5:47 AM

ರಾಜ್ಯದಲ್ಲಿ ಹೆಚ್ಚಾದ ಬಿಸಿಲ ತಾಪ: ಈ ಸಲಹೆ ಪಾಲಿಸುವಂತೆ ‘ಆರೋಗ್ಯ ಇಲಾಖೆ’ ಸೂಚನೆ | Heat Wave

21/02/2026 5:46 AM

CBSE ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ ; ಬೋರ್ಡ್ ಪರೀಕ್ಷೆ ಬರೆಯಲು ’12-ಅಂಕಿಯ ಗುರುತಿನ ಸಂಖ್ಯೆ’ ಕಡ್ಡಾಯ

21/02/2026 5:45 AM
State News
KARNATAKA

BIG NEWS : ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆ, ಕಚೇರಿಗಳ ಸಭೆ-ಸಮಾರಂಭಗಳಲ್ಲಿ `ನಂದಿನಿ ಉತ್ಪನ್ನಗಳ ಬಳಕೆ’ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ !

By kannadanewsnow5721/02/2026 5:47 AM KARNATAKA 1 Min Read

ಬೆಂಗಳೂರು : ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಕಛೇರಿಗಳು…

ರಾಜ್ಯದಲ್ಲಿ ಹೆಚ್ಚಾದ ಬಿಸಿಲ ತಾಪ: ಈ ಸಲಹೆ ಪಾಲಿಸುವಂತೆ ‘ಆರೋಗ್ಯ ಇಲಾಖೆ’ ಸೂಚನೆ | Heat Wave

21/02/2026 5:46 AM

‘ರಾಜ್ಯ ಸರ್ಕಾರಿ ನೌಕರ’ರ ಗಮನಕ್ಕೆ: ಹೀಗಿದೆ ಕಂಪ್ಯೂಟರ್ ಆಧಾರಿತ ಪರೀಕ್ಷೆ(CLT)ಯ ಹೊಸ ಪಠ್ಯಕ್ರಮ

21/02/2026 5:05 AM

ರಾಜ್ಯದ ಮಡಿವಾಳ ಸಮುದಾಯದವರ ಗಮನಕ್ಕೆ: 3 ಲಕ್ಷದವರೆಗೆ ಸಹಾಯಧನದಲ್ಲಿ ಮೊಬೈಲ್ ಕ್ಯಾಂಟಿನ್ ತೆರಯಲು ಅರ್ಜಿ ಆಹ್ವಾನ

20/02/2026 8:43 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.