ಬೆಂಗಳೂರು: ಒಣ ಮರ ಏಕೆ ಬಿಟ್ಕೊಂಡಿದ್ದೀರಿ.? ಅನಾಹುತ ಆಗ್ಲಿ ಅಂತನಾ? ಎಂಬುದಾಗಿ ಬೆಂಗಳೂರು ಸಿಟಿ ರೌಂಡ್ಸ್ ವೇಳೆಯಲ್ಲಿ ಅಧಿಕಾರಿಗಳನ್ನು ಸಿಎಂ ಸಿದ್ಧರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಬೆಂಗಳೂರಿನ ಸೌಂದರ್ಯಕ್ಕೆ ಹೆಚ್ಚು ಆದ್ಯತೆ ನೀಡುವಂತೆ ಸೂಚಿಸಿದರು.
ಇಂದು ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಬೆಂಗಳೂರು ಸಿಟಿ ರೌಂಡ್ಸ್ ನಡೆಸುತ್ತಿದ್ದಾರೆ. ಬೆಂಗಳೂರಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಪದ್ಮನಾಭನಗರಕ್ಕೆ ಭೇಟಿ ನೀಡಿದಂತ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ರಸ್ತೆಯುದ್ಧಕ್ಕೂ ಬಿಬಿಎಂಪಿ ವಹಿಸಿದಂತ ಮುಂಜಾಗ್ರತಾ ಕ್ರಮಗಳ್ನು ಪರಿಶೀಲನೆ ನಡೆಸಿದರು.
ಒಣಗಿದಂತ ಮರಗಳನ್ನು ಕಂಡಂತ ಸಿಎಂ ಸಿದ್ಧರಾಮಯ್ಯ, ಇವುಗಳನ್ನು ಏಕೆ ಬಿಟ್ಟುಕೊಂಡಿದ್ದೀರಿ.? ಅನಾಹುತ ಆಗ್ಲಿ ಅಂತನ ಎಂಬುದಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರದಲ್ಲಿನ ಒಣ ಮರಗಳು, ಅಪಾಯಕಾರಿ ಮರಗಳನ್ನು ತೆರವುಗೊಳಿಸಿ. ಬೆಂಗಳೂರಿನ ಸೌಂದರ್ಯಕ್ಕೆ ಹೆಚ್ಚು ಆದ್ಯತೆ ನೀಡುವಂತೆ ಸೂಚಿಸಿದರು. ಅಲ್ಲದೇ ಪದ್ಮನಾಭನಗರದಲ್ಲಿನ ಪ್ಲೈಓವರ್ ಬಳಿಯ ಪುಟ್ ಪಾತ್ ಸರಿಪಡಿಸುವಂತೆ ಸೂಚಿಸಿದರು.
ರೈತರೇ ನಿಮ್ಮ ಖಾತೆಗೆ ‘ಬೆಳೆ ಪರಿಹಾರ’ದ ಹಣ ಬಂದಿಲ್ವ?: ಈ ಕೆಲಸ ತಪ್ಪದೇ ಮಾಡಿ, ಜಮಾ
BREAKING : ಮತ್ತೆ ವಕ್ಕರಿಸುತ್ತಾ ಮಹಾಮಾರಿ.? ದೇಶದಲ್ಲಿ ಕೊರೊನಾ ಹೊಸ ರೂಪಾಂತರ ‘KP.1, KP.2’ ಪತ್ತೆ