ಬೆಂಗಳೂರು: ಕೇಂದ್ರಿಯ ತನಿಖಾ ಸಂಸ್ಥೆಗಳ ಕಟ್ಟಡಗಳಿಗೆ ಬಾಡಿಗೆ ಕಟ್ಟುವ ಬದಲು ಬಿಜೆಪಿ ಕಚೇರಿಯಲ್ಲೇ ಅವರಿಗೆ ಜಾಗ ಕೊಡಿ. ಕಳಂಕಿತರನ್ನು ರಕ್ಷಿಸಲು ನಿಮಗೆ ಅನುಕೂಲವಾಗುತ್ತದೆ. ಇಂತಹ ಎಲ್ಲಾ ಪ್ರಕರಣಗಳನ್ನು ಇಥ್ಯರ್ತ ಮಾಡಲು ನಿಮಗೂ ಅನುಕೂಲವಾಗುತ್ತದೆ. ಕಳಂಕಿತರನ್ನು ಸಂಪುಟದಲ್ಲಿ ಇಟ್ಟುಕೊಂಡಿರುವ ಬಿಜೆಪಿ ಅವರೇ ನಿಮಗೆ ನೈತಿಕತೆ ಇದೆಯೇ? ಎಂಬುದಾಗಿ ಮಾಜಿ ವಿಧಾನಪರಿಷತ್ ಸದಸ್ಯ ರಮೇಶ್ ಬಾಬು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, 2005 ರಿಂದ ಇಲ್ಲಿಯತನಕ 5 ಸಾವಿರ ಪ್ರಕರಣಗಳು ದಾಖಲಾಗಿದೆ. ಇದರಲ್ಲಿ ಚಾರ್ಜ್ ಶೀಟ್ ಹಾಕಿರುವುದು 1,116 ಪ್ರಕರಣಗಳ ಮೇಲೆ ಮಾತ್ರ. ತನಿಖೆ ಮುಗಿಸಿರುವ ಪ್ರಕರಣಗಳು ಕೇವಲ 26. ಯಾವ ಕಾರಣಕ್ಕೆ ಈ ತಾರತಮ್ಯ ಮಾಡುತ್ತಿದ್ದೀರಿ ಮೋದಿ ಅವರೇ? ನೀವು ಮತ್ತು ನಿಮ್ಮ ಸರ್ಕಾರ ಯಾರನ್ನು ಕಾಪಾಡುತ್ತಿದೆ ಹೇಳುವಿರಾ? ಎಂದು ಪ್ರಶ್ನಿಸಿದರು.
ಈ ದೇಶದಲ್ಲಿ ಸುಪ್ರೀಂ ಕೋರ್ಟ್ ಇರಲಿಲ್ಲ ಎಂದಿದ್ದರೇ ಈ ದೇಶದ ಅತಿದೊಡ್ಡ ಚುನಾವಣ ಬಾಂಡ್ ಹಗರಣ ಬೆಳಕಿಗೆ ಬರುತ್ತಿರಲಿಲ್ಲ. ಮಾನ್ಯ ಪ್ರಧಾನಿ ಅವರೇ ಇದಕ್ಕೆ ಉತ್ತರ ಕೊಡುವಷ್ಟು ವ್ಯವದಾನ ನಿಮ್ಮಲ್ಲಿ ಇದೆಯೇ? ಯಾವ ಕಾರಣಕ್ಕೆ ಶೋಭಾ ಕರಂದ್ಲಾಜೆ ಅವರನ್ನು ಯಾವ ಆಧಾರದ ಮೇಲೆ ಅಭ್ಯರ್ಥಿಗಳನ್ನಾಗಿ ಮಾಡಿದ್ದೀರಿ ಎಂದು ಬಿಜೆಪಿ ನಾಯಕರು ಉತ್ತರಿಸಬೇಕಾಗಿದೆ ಎಂದರು.
ಕೇಂದ್ರ ಸಚಿವರನ್ನಾಗಿರುವ ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಸಾರ್ವಜನಿಕರೊಬ್ಬರು 27.03.24 ರಂದು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಇದರ ಮೇಲೆ ,ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕು. ಇಂತಹ ಕಳಂಕಿತರನ್ನು ಸಂಪುಟದಲ್ಲಿ ಇಟ್ಟುಕೊಂಡರೆ ಸಾಕ್ಷ್ಯನಾಶ ಮಾಡುವ ಸಾಧ್ಯತೆ ಇರುತ್ತದೆ. ಇಂತಹ ಕಳಂಕಿತರನ್ನು ಸಂಪುಟದಲ್ಲಿ ಇಟ್ಟುಕೊಂಡಿರುವುದು ಬಿಜೆಪಿಗೆ ಅಂಟಿರುವ ಕಳಂಕ ಎಂದು ಗುಡುಗಿದರು
ಈ ವಿಚಾರವಾಗಿ ಪ್ರಧಾನಿಗಳು ಸಾರ್ವಜನಿಕವಾಗಿ ಉತ್ತರವನ್ನು ಕೊಡಬೇಕು. ಇಲ್ಲದಿದ್ದರೇ ಸಾರ್ವಜನಿಕರ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಪಕ್ಷ ಒತ್ತಾಯಿಸುತ್ತದೆ. ಮತ್ತು ಸಂಪುಟದಿಂದ ತೆಗದುಹಾಕಬೇಕು ಎಂದು ಒತ್ತಾಯಿಸಿದರು.
BREAKING: ಏ.3ರಂದು ‘ಮಂಡ್ಯ’ದಲ್ಲೇ ಸಭೆ ಮಾಡಿ ‘ನನ್ನ ನಿರ್ಧಾರ’ ಪ್ರಕಟ – ಸುಮಲತಾ ಅಂಬರೀಶ್
SSLC ಪರೀಕ್ಷೆ: ಇಂದು ‘8.41 ಲಕ್ಷ ವಿದ್ಯಾರ್ಥಿ’ಗಳು ಹಾಜರ್, ಓರ್ವ ಡಿಬಾರ್ | SSLC Exam