ಶಿವಮೊಗ್ಗ: ಸಾಗರ ತಾಲೂಕಿನ ಕಾರು ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರಾಗಿ ಉದ್ಯಮಿಗಳು, ಕಾಂಗ್ರೆಸ್ ಪಕ್ಷದ ಮುಖಂಡರಾದ ಗಿರೀಶ್ ಕೋವಿ ಸತತವಾಗಿ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದಿನ ವಾರ್ಷಿಕ ಮಹಾ ಸಭೆಯಲ್ಲಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಸಾಗರ ತಾಲ್ಲೂಕು ಕಾರು ಚಾಲಕರು ಮತ್ತು ಮಾಲೀಕರ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಈ ಸಭೆಯಲ್ಲಿ ಭಾಗವಹಿಸಿ ಮಾತನಾಡಿದಂತ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್ ಅವರು, ಸೇವೆಯೇ ಧರ್ಮ ಎನ್ನುವ ಉದ್ದೇಶದೊಂದಿಗೆ ಸಮೋಹಕ್ಕೆ ಸೇವೆಯನ್ನು ಕೊಡುವುದು ನಿಟ್ಟಿನಲ್ಲಿ ಕಾರು ಚಾಲಕರು ಕೆಲಸ ಮಾಡುತ್ತಿದ್ದಾರೆ. ಕಾರು ಚಾಲಕರ ಸೇವೆ ನಿಜವಾಗಲೂ ಶ್ಲಾಘನೀಯವೇ ಸರಿ ಎಂದರು.
ಕಾರು ಚಾಲಕ, ಮಾಲೀಕರಿಗೆ ಕಾನೂನಿನ ಅರಿವಿರಬೇಕು. ಅದರಲ್ಲೂ ಇನ್ಸೂರೆನ್ಸ್ ಬಗ್ಗೆ ಗಮನ ಇರಬೇಕು. ಅಪಘಾತವಾದಾಗ ವಾಹನಗಳಿಗೆ ವಿಮೆ ದೊರೆಯಲಿದೆ. ಅದೇ ಚಾಲಕ ಯಾವುದೋ ಮರಕ್ಕೋ, ಇತರೆ ಕಡೆಗೆ ಗುದ್ದಿ ಅಪಘಾತವಾದಾಗ ಥರ್ಡ್ ಪಾರ್ಟಿ ಇನ್ಸೂರೆನ್ಸ್ ಇಲ್ಲದೇ ಇದ್ದಾಗ ಸಮಸ್ಯೆ ಎದುರಾಗಲಿದೆ. ಚಾಲಕ ಗಾಯಗೊಂಡಾಗ ಮಾಲೀಕರು ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಥರ್ಡ್ ಪಾರ್ಟಿ ಇನ್ಸೂರೆನ್ಸ್ ಮಾಡಿಸುವಂತೆ ಕಿವಿಮಾತು ಹೇಳಿದರು.
ರಸ್ತೆಯ ಮೇಲೆ ಇರುವವರಿಗೆ ಅತೀ ಹೆಚ್ಚಿನ ಜವಾಬ್ದಾರಿ ಇರಬೇಕು. ನಾನು ರಸ್ತೆ ಸುರಕ್ಷತಾ ಕಾನೂನು ಪಾಲನೆಯ ನಿಟ್ಟಿನಲ್ಲಿ ದಂಡ ವಿಧಿಸುವಂತ ಕೆಲಸ ಮಾಡಲಾಗುತ್ತಿದೆ ಎಂದರು.
ನೂತನ ಅಧ್ಯಕ್ಷ ಗಿರೀಶ್ ಕೋವಿ ಮಾತನಾಡಿ ನಮ್ಮ ಸಂಘ ಸ್ಥಾಪನೆಯಾಗಿ 25 ವರ್ಷವಾಯಿತು. ಇಲ್ಲಿಯವರೆಗೆ ಯಾವುದೇ ಲೋಪದೋಷವಿಲ್ಲದೇ ಮುಂದುವರೆಯುತ್ತಿದೆ. ಸಾಗರದಲ್ಲಿ ಉತ್ತಮ ರೀತಿಯಲ್ಲಿ ಸಂಘವನ್ನು ಮುನ್ನಡೆಸಿಕೊಂಡು ಬಂದು 25 ವರ್ಷ ಪೂರೈಸಿದ ಸಂಘಗಳಲ್ಲಿ ನಮ್ಮದೇ ಮೊದಲಿರಬೇಕು ಎಂದು ಹೇಳಿದರು.
ನಾನು ಯಾವುದೇ ರಾಜ್ಯ, ರಾಷ್ಟ್ರೀಯ ಹಬ್ಬವಿರಲಿ ತಪ್ಪದೇ ಮಾಡಿಕೊಂಡು ಬರುತ್ತಿದ್ದೇವೆ. ಚಾಲಕ ಮತ್ತು ಮಾಲೀಕರ ಸಂಘದಿಂದ ಕಷ್ಟದಲ್ಲಿರುವಂತ ಸಂಘದ ಸದಸ್ಯರಿಗೆ ನೆರವಾಗುವ ಕೆಲಸ ಮಾಡಲಾಗುತ್ತಿದೆ. ಚೌಡಮ್ಮನ ಕಟ್ಟೆ ಮರ ಬಿದ್ದು ಹಾಳಾದಂತ ಸಂದರ್ಭದಲ್ಲಿ ಪುನರ್ ನಿರ್ಮಿಸಿಕೊಡಲಾಯಿತು ಎಂದರು.
ಸಾಗರ ನಗರಸಭೆಯಿಂದ ಸಂಘಕ್ಕೊಂದು ಕಚೇರಿ ಮಾಡಿಸಿಕೊಡುವಂತೆ ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಅವರನ್ನು ಮನವಿ ಮಾಡಿದರು. ಪರ್ಮಿಟ್ ಇಲ್ಲದ ಖಾಸಗಿ ಬಸ್ ಗಳನ್ನು ತಪಾಸಣೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಡಿವೈಎಸ್ಪಿಗೆ ಮನವಿ ಮಾಡಿದರು.
ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಮಾತನಾಡಿ ನಿಮ್ಮ ಸಂಘದ ವಾರ್ಷಿಕ ವರದಿಯನ್ನು ನೋಡಿದೆ. ನಿಮ್ಮ ಸಾಮಾಜಿಕ ಸೇವೆಯನ್ನು ಕಂಡು ಸಂತೋಷವಾಯಿತು. ನಿಮ್ಮ ಸಮಸ್ಯೆಗಳಿಗೆ ನಮ್ಮ ನಗರಸಭೆಯಿಂದ ಸಹಕಾರ ಯಾವಾಗಲೂ ಇರಲಿದೆ. ಸದಾ ನಗರಸಭೆ ನಿಮ್ಮ ಜೊತೆಗೆ ಇರಲಿದೆ. ನೀವೆಲ್ಲರೂ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ನಿಮ್ಮಿಂದ ಜನರಿಗೆ ಉಪಯೋಗ ಆಗುವಂತ ಕೆಲಸ ಮಾಡಲಾಗುತ್ತಿದೆ. ಈ ರೀತಿಯ ಸಮಾಜ ಮುಖಿ ಕೆಲಸವನ್ನು ಮುಂದುವರೆಸಿರಿ. ನಿಮ್ಮೆಲ್ಲರಿಗೂ ಒಳಿತಾಗಲಿ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ವಿಧಾನಸಭೆಯ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಸಾಗರ ತಾಲ್ಲೂಕು ಕಾರು ಮಾಲೀಕರು ಮತ್ತು ಚಾಲಕರ ಸಂಘದಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಎಆರ್ ಟಿಓ ವೀರೇಶ್, ಸಂಘದ ಗೌರವಾಧ್ಯಕ್ಷರು ಗಣಪತಿ ಮಂಡಗಳಲೆ, ಸಾಗರ ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ಸಾಗರ ತಾಲ್ಲೂಕು ಕಾರು ಚಾಲಕರು ಮತ್ತು ಮಾಲೀಕರ ಸಂಘದ ಉಪಾಧ್ಯಕ್ಷರಾದಂತ ರಾಮಣ್ಣ, ಪ್ರವೀಣ್, ಕೃಷ್ಣಮೂರ್ತಿ, ಫ್ರಾನ್ಸಿಸ್, ಪ್ರದೀಪ್, ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
10-15 ದಿನಗಳಲ್ಲಿ ಕರ್ನಾಟಕಕ್ಕೆ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಪೂರೈಕೆಗೆ ಕೇಂದ್ರದ ಭರವಸೆ: ಬೊಮ್ಮಾಯಿ
ಆ.3ಕ್ಕೆ ಸಾಗರದಲ್ಲಿ ‘ಎಸ್.ವೆಂಕಟರಮಣ ಆಚಾರ್ ಪ್ರಾಮಾಣಿಕ ಸರ್ಕಾರಿ ಸೇವಾ ಪ್ರಶಸ್ತಿ’ ಪ್ರದಾನ: ಮ.ಸ.ನಂಜುಂಡಸ್ವಾಮಿ