ಶಿವಮೊಗ್ಗ: ಜಿಲ್ಲೆಯ ಸಾಗರದ ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ಚುನಾವಣೆ ನಡೆಯಿತು. ಇಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ವಕೀಲ ಗಿರೀಶ್ ಗೌಡ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರದ ವಕೀಲರ ಸಂಘಕ್ಕೆ ಇಂದು ಚುನಾವಣೆ ನಡೆಯಿತು. ಅಧ್ಯಕ್ಷರ ಹುದ್ದೆಗೆ ರವೀಶ್ ಕುಮಾರ್.ಡಿ, ಹೆಚ್.ಎನ್ ದಿವಾಕರ್ ಹಾಗೂ ಬಿ.ಗಿರೀಶ್ ಗೌಡ ಸ್ಪರ್ಧಿಸಿದ್ದರು. ಬಿ.ಗಿರೀಶ್ ಗೌಡ 87 ಮತಗಳನ್ನು ಪಡೆಯುವ ಮೂಲಕ ಪ್ರತಿ ಸ್ಪರ್ದಿ ರವೀಶ್ ಕುಮಾರ್.ಡಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಇನ್ನೂ ಕಾರ್ಯದರ್ಶಿ ಸ್ಥಾನಕ್ಕೆ ಸತೀಶ್ ಕುಮಾರ್.ಡಿ, ವಾಸು.ಬಿ ಹಾಗೂ ಶೇಖರಪ್ಪ ಕಣದಲ್ಲಿದ್ದರು. ಶೇಖರಪ್ಪ ಅವರು 83 ಮತಗಳನ್ನು ಗಳಿಸುವ ಮೂಲಕ ಸತೀಶ್ ಕುಮಾರ್.ಡಿ ವಿರುದ್ಧ ಗೆಲುವು ಸಾಧಿಸಿದರು.
ಖಜಾಂಚಿ ಸ್ಥಾನಕ್ಕೆ ನಡೆದಂತ ಚುನಾವಣೆಯಲ್ಲಿ ಪರಿಮಳ.ಎ ಅವರು 90 ಮತಗಳನ್ನು ಪಡೆದು, ಪ್ರತಿ ಸ್ಪರ್ಧಿ ಪ್ರಕಾಶ್ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಹೀಗಿದೆ ಸಾಗರ ವಕೀಲರ ಸಂಘದ ಚುನಾವಣೆಯ ಫಲಿತಾಂಶದ ಅಂಕಿ ಅಂಶಗಳ ವಿವರ
ಅಧ್ಯಕ್ಷೀಯ ಚುನಾವಣೆ
1.ಎಂ. ಬಿ. ಗಿರೀಶ ಗೌಡ, ಪಡೆದ ಮತಗಳು:-87
2.ರವೀಶ್ ಕುಮಾರ್ ಡಿ. ಪಡೆದ ಮತ-53
3.ಹೆಚ್ ಎನ್ ದಿವಾಕರ್ ಪಡೆದ ಮತಗಳು-49
ಕಾರ್ಯದರ್ಶಿ ಸ್ಥಾನ
1.ಶೇಖರಪ್ಪ ಪಡೆದ ಮತಗಳು -:83
2.ಸತೀಶ್ ಕುಮಾರ್ ಡಿ. ಪಡೆದ ಮತಗಳು -77
3.ವಾಸು ಬಿ.-ಪಡೆದ ಮತಗಳು-29
ಖಜಾಂಚಿ ಸ್ಥಾನ
1. ಪರಿಮಳ ಎ. ಪಡೆದ ಮತಗಳು-:90
2.ಕೆ. ಪ್ರಕಾಶ್ ಪಡೆದ ಮತಗಳು-53
3.ಕಿರಣ್ ಕುಮಾರ್ ಪಡೆದ ಮತಗಳು-44
ಇಂದಿನ ಸಾಗರ ತಾಲ್ಲೂಕು ವಕೀಲರ ಸಂಘದ ಚುನಾವಣೆಯ ಚುನಾವಣಾ ಅಧಿಕಾರಿಯಾಗಿ ಸಂತೋಷ್ ಕುಮಾರ್, ಎಸ್. ವಕೀಲರು. ಸಹಾಯಕರಾಗಿ ಎಂ ಜಯಪ್ಪ ವಕೀಲರು ಕಾರ್ಯ ನಿರ್ವಹಿಸಿದ್ದರು.
ವರದಿ: ವಸಂತ ಬಿ ಈಶ್ವರಗೆರೆ
BREAKING: ಬೆಂಗಳೂರಲ್ಲಿ ಮಹಿಳೆ ಮೇಲೆ ‘ಗ್ಯಾಂಗ್ ರೇಪ್’ ನಡೆಸಿದ ಆರೋಪಿಗಳು ಅರೆಸ್ಟ್
ಗುಜರಾತ್ ನಲ್ಲಿ ಟ್ರಕ್-ಬಸ್ ನಡುವೆ ಭೀಕರ ಅಪಘಾತ: ಐವರು ಸ್ಥಳದಲ್ಲೇ ಸಾವು, 23ಕ್ಕೂ ಹೆಚ್ಚು ಮಂದಿಗೆ ಗಾಯ