Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಸ್ಲೀಪ್ ಬ್ಯಾಂಕಿಂಗ್’ ಎಂದರೇನು.? ಹೇಗೆ ಕೆಲಸ ಮಾಡುತ್ತೆ ಗೊತ್ತಾ.? ಒತ್ತಡದಲ್ಲಿದ್ದಾಗ ದಿ ಬೆಸ್ಟ್

11/06/2025 10:03 PM

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 8 DYSP, 28 PI ವರ್ಗಾವಣೆ ಮಾಡಿ ಆದೇಶ

11/06/2025 9:54 PM

ನಾನು ED ದಾಳಿ ರಾಜಕೀಯ ಪ್ರೇರಿತ ಅಂತ ಹೇಳಲ್ಲ: ಸಂಸದ ತುಕಾರಾಂ

11/06/2025 9:39 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » HDFC ಬ್ಯಾಂಕಿನಿಂದ ಗಿಗಾ ಪ್ರಾರಂಭ: ಗಿಗ್ ಕೆಲಸಗಾರರಿಗೆ ಸಂಪೂರ್ಣ ಉತ್ಪನ್ನಗಳ ಹಣಕಾಸು ಸೂಟ್
KARNATAKA

HDFC ಬ್ಯಾಂಕಿನಿಂದ ಗಿಗಾ ಪ್ರಾರಂಭ: ಗಿಗ್ ಕೆಲಸಗಾರರಿಗೆ ಸಂಪೂರ್ಣ ಉತ್ಪನ್ನಗಳ ಹಣಕಾಸು ಸೂಟ್

By kannadanewsnow0921/09/2024 6:52 PM

ಬೆಂಗಳೂರು: ಭಾರತದ ಅತ್ಯಂತ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಎಚ್.ಡಿ.ಎಫ್.ಸಿ. ಬ್ಯಾಂಕ್ ಇಂದು ಗಿಗ್ ಕೆಲಸಗಾರರು/ಫ್ರೀಲಾನ್ಸರ್ ಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸಂಪೂರ್ಣ ಹಣಕಾಸು ಉತ್ಪನ್ನಗಳು ಮತ್ತು ಸೇವೆಗಳ ಸೂಟ್-ಗಿಗಾ(GIGA) ಪ್ರಾರಂಭಿಸಿದೆ.

ಪ್ರಾರಂಭಿಕ ಅಂಶವಾಗಿ ಬ್ಯಾಂಕ್ ಆಳವಾದ ಗ್ರಾಹಕ ಸಂಶೋಧನಾ ಅಧ್ಯಯನವನ್ನು ಫ್ರೀಲಾನ್ಸರ್ ಗಳ ಅಗತ್ಯವನ್ನು ಅರ್ಥ ಮಾಡಿಕೊಳ್ಳಲು ನಡೆಸಿದ್ದು ಅದರ ಆಧಾರದಲ್ಲಿ ಡಿಜಿಟಲ್ ಪ್ರಥಮ ಕಾರ್ಯಕ್ರಮ ಗಿಗಾ ಪ್ರಾರಂಭಿಸಿದ್ದು ಇದು ಫ್ರೀಲಾನ್ಸರ್ ಗಳ ಅಗತ್ಯಗಳನ್ನು ಪೂರೈಸಲು ವಿಶೇಷವಾಗಿ ರೂಪಿಸಿದ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುತ್ತಿದೆ. ಗಿಗ್ ಅರ್ಥವ್ಯವಸ್ಥೆಯು ಮ್ಯಾನೇಜ್ ಮೆಂಟ್ ಕನ್ಸಲ್ಟೆಂಟ್ ಗಳು, ಸಾಫ್ಟ್ ವೇರ್ ಪ್ರೋಗ್ರಾಮರ್ ಗಳು ಮತ್ತು ವಿನ್ಯಾಸಕರು, ವಾಸ್ತುಶಿಲ್ಪಿಗಳು, ಹೂಡಿಕೆಯ ಸಲಹೆಗಾರರಂತಹ ಬಿಳಿ ಪಟ್ಟಿಯ ಉದ್ಯೋಗಿಗಳಿಂದ ನೀಲಿ ಪಟ್ಟಿಯ ಮತ್ತು ಡೆಲಿವರಿ ಪಾಲುದಾರರು ಮತ್ತು ಆರೈಕೆ ನೀಡುವ ಗುಲಾಬಿ ಪಟ್ಟಿಯ ಉದ್ಯೋಗಿಗಳವರೆಗೆ ನಿರ್ದಿಷ್ಟ ವೃತ್ತಿಯ/ತಾಂತ್ರಿಕ ಪರಿಣಿತಿಯನ್ನು ಹೊಂದಿದವರಿಗೆ ವಿಸ್ತರಿಸಿದೆ.

ಎಚ್.ಡಿ.ಎಫ್.ಸಿ. ಬ್ಯಾಂಕ್ ಗಿಗ್ ಬ್ಯಾಂಕಿಂಗ್, ಸ್ಟಾರ್ಟಪ್ಸ್ ಅಂಡ್ ಗೌರ್ನಮೆಂಟ್ ಅಂಡ್ ಇನ್ಸ್ ಟಿಟ್ಯೂಷನಲ್ ಬಿಸಿನೆಸ್ ಮುಖ್ಯಸ್ಥೆ ಸುನಾಲಿ ರೊಹ್ರಾ, “ಹಲವಾರು ಫ್ರೀಲಾನ್ಸರ್ ವಲಯಗಳ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಹಣಕಾಸು ಉತ್ಪನ್ನಗಳ ಸಮಗ್ರ ಸೂಟ್ ಅನ್ನು ಬಿಡುಗಡೆ ಮಾಡಲು ನಾವು ಬಹಳ ಸಂತೋಷ ಹೊಂದಿದ್ದೇವೆ. ನಮ್ಮ ಉತ್ಪನ್ನಗಳಲ್ಲಿ ಉಳಿತಾಯ ಖಾತೆ, ಚಾಲ್ತಿ ಖಾತೆ, ಡೆಬಿಟ್ ಕಾರ್ಡ್ ಗಳು, ಕ್ರೆಡಿಟ್ ಕಾರ್ಡ್ ಗಳು ಅತ್ಯಂತ ವಿಶೇಷ ಕೊಡುಗೆಗಳೊಂದಿಗೆ ಹೊಂದಿದ್ದು ದಿನಕ್ಕೆ ಕೇವಲ 20 ರೂ.ನಂತೆ ಆರೋಗ್ಯ ವಿಮೆ ಮತ್ತು ಅನುಕೂಲಕರ ಹೂಡಿಕೆಯ ಉತ್ಪನ್ನಗಳಿದ್ದು ಅದರಲ್ಲಿ ಅವರು ಸಾಂಪ್ರದಾಯಿಕ ಎಸ್.ಐ.ಪಿ ಮತ್ತು ಕಸ್ಟಂ ರೀಟೇಲ್ ಉತ್ಪನ್ನಗಳ ಬದಲಿಗೆ, “ಅವರಿಗೆ ಸಾಧ್ಯವಿರುವಾಗ ಮತ್ತು ಎಷ್ಟು ಸಾಧ್ಯವೋ ಅಷ್ಟು ಹೂಡಿಕೆ” ಮಾಡಬಹುದು. ಆದಾಯ ಮತ್ತು ಸ್ವಾತಂತ್ರ್ಯ ಜನರಿಗೆ ಈ ಜೀವನಶೈಲಿ ಅಳವಡಿಸಿಕೊಳ್ಳಲು ಉತ್ತೇಜಿಸುತ್ತಿದೆ, ಅದು ಡಿಜಿಟಲ್ ಇಕೊಸಿಸ್ಟಂನಿಂದ ಮತ್ತು ರಿಮೋಟ್ ಕೆಲಸದ ಪ್ರವೃತ್ತಿಯಿಂದ ಸನ್ನದ್ಧವಾಗಿದೆ” ಎಂದರು.

ಅಂದಾಜುಗಳ ಪ್ರಕಾರ ಭಾರತದಲ್ಲಿ ಗಿಗ್ ಕೆಲಸಗಾರರ ಸಂಖ್ಯೆ 30ರಿಂದ 50 ಮಿಲಿಯನ್ ಇದೆ ಮತ್ತು ಈ ವಲಯ ಮಾತ್ರ ಬೆಳೆಯುತ್ತಿದೆ.
ಗಿಗಾ ಅಡಿಯಲ್ಲಿ ಕೊಡುಗೆಗಳು*:

• ಅನುಕೂಲಕರ ಗಿಗಾ ಉಳಿತಾಯ ಖಾತೆ: ಗಿಗಾ ಖಾತೆಯು ಫ್ರೀಲಾನ್ಸರ್ ಗಳಿಗೆ ತ್ರೈಮಾಸಿಕ ಬಾಕಿ ಆಯ್ಕೆ (ಮೆಟ್ರೋಗೆ ರೂ.10,000 ಮತ್ತು ಅರೆ ನಗರ/ಗ್ರಾಮೀಣ ಖಾತೆಗಳಿಗೆ ರೂ.5,000) ಕಾಪಾಡಿಕೊಳ್ಳುವ ಅಥವಾ ಅವರ ಹೂಡಿಕೆಯ ಪ್ರಯಾಣವನ್ನು ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲಾನ್/ಫಿಕ್ಸೆಡ್ ಡಿಪಾಸಿಟ್/ ರಿಕರಿಂಗ್ ಡಿಪಾಸಿಟ್ ಇತ್ಯಾದಿ ಮೂಲಕ ಪ್ರಾರಂಭಿಸುವ ಆಯ್ಕೆಗಳನ್ನು ನೀಡುತ್ತದೆ.
• ಗಿಗಾ ಬಿಸಿನೆಸ್ ಡೆಬಿಟ್ ಕಾರ್ಡ್ ವೆಚ್ಚಗಳ ಮೇಲೆ ಹೆಚ್ಚಿಸಲಾದ ಕ್ಯಾಶ್ ಬ್ಯಾಕ್ ಮತ್ತು ಕಸ್ಟಮೈಸ್ಡ್ ಕೊಡುಗೆಗಳು ಈ ಖಾತೆಯೊಂದಿಗೆ ಬರುತ್ತೆ. ಇದು ರೂ.10 ಲಕ್ಷದವರೆಗೆ ಉಚಿತ ವೈಯಕ್ತಿಕ ಅಪಘಾತ ಮರಣ ವಿಮೆಯನ್ನೂ ನೀಡುತ್ತದೆ.
• ವಿಶೇಷ ಗಿಗಾ ಬಿಸಿನೆಸ್ ಕ್ರೆಡಿಟ್ ಕಾರ್ಡ್ ಗಳು ವಿಶೇಷವಾಗಿ ಫ್ರೀಲಾನ್ಸರ್ ಗಳಿಗೆ ವಿನ್ಯಾಸಗೊಳಿಸಲಾಗಿದ್ದು ಬಡ್ಡಿರಹಿತ ಸಾಲದ ಅವಧಿ 55 ದಿನಗಳು ಮತ್ತು ಉನ್ನತೀಕರಿಸಿದ ರಿವಾರ್ಡ್ಸ್ ಕಾರ್ಯಕ್ರಮ ಹೊಂದಿರುತ್ತದೆ.
• ಗಿಗಾ ಕಾರ್ಡ್ಸ್ ಮೇಲೆ ವಿಶೇಷ ಕೊಡುಗೆಗಳು: ಫ್ರೀಲಾನ್ಸರ್ ಗಳಿಗೆ ನೆರವಾಗಲು ವಿನ್ಯಾಸಗೊಳಿಸಲಾದ ಮೌಲ್ಯಾಧಾರಿತ ಕೊಡುಗೆಗಳ ಗುಚ್ಛವನ್ನು ಕೂಡಾ ಗಿಗಾ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಎರಡರಲ್ಲೂ ಒಳಗೊಳ್ಳಲಾಗಿದೆ. ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಪಾಲುದಾರರ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಈ ಕೊಡುಗೆಗಳು ಗ್ರಾಹಕ ಸಂಶೋಧನೆಯ ಮೂಲಕ ಗುರುತಿಸಲಾದ ಹಲವು ಅಗತ್ಯಗಳನ್ನು ಪೂರೈಸುತ್ತವೆ. ಬಿಡುಗಡೆಯಲ್ಲಿ ಇವುಗಳಲ್ಲಿ ಕೋ-ವರ್ಕಿಂಗ್ ತಾಣಗಳ ಮೇಲೆ ಡೀಲ್ ಗಳು(ವಿವರ್ಕ್ ಮತ್ತು ಅವ್ಫಿಸ್) ಆದ್ಯತೆ ಡೀಲ್ ಗಳು; ಕೌಶಲ್ಯವೃದ್ಧಿ ಮತ್ತು ಕಲಿಕೆ (ಹರಪ್ಪ, 42 ಕೋರ್ಸಸ್ ಮತ್ತು ದಿ ಡಿಸೈನರ್ಸ್ ಕ್ಲಾಸ್); ಬುಕ್ ಕೀಪಿಂಗ್, ಅಕೌಂಟಿಂಗ್ ಅಂಡ್ ಟ್ಯಾಕ್ಸೇಷನ್ (ಝೊಹೊ, ಲೀಗಲ್ ವಿಝ್ ಮತ್ತು ಇಂಡಿಯಾ ಫೈಲಿಂಗ್ಸ್); ಹೆಲ್ತ್ ಅಂಡ್ ವೆಲ್ ನೆಸ್ (ಅರ್ಥ್ ಫುಲ್, ಫ್ರಿಡೊ ಮತ್ತು ರಿಬೂಟ್ ವೆಲ್ ನೆಸ್); ಮತ್ತು ಗಿಗ್ ಪ್ಲಾಟ್ ಫಾರಂಗಳಲ್ಲಿ ಸದಸ್ಯತ್ವದ ರಿಯಾಯಿತಿಗಳು (ಟ್ರೂಲಾನ್ಸರ್ ಮತ್ತು ರೆಫ್ರೆನ್ಸ್) ಇತರೆ ಕೊಡುಗೆಗಳೊಂದಿಗೆ ಇರುತ್ತವೆ.
ಎಚ್.ಡಿ.ಎಫ್.ಸಿ. ಎರ್ಗೊದಿಂದ ಆರೋಗ್ಯ ವಿಮೆ: ಈಗ ಗಿಗ್ ಕೆಲಸಗಾರರು ಅವರಿಗೆ ಮತ್ತು ಅವರ ಕುಟುಂಬಗಳಿಗೆ ದಿನಕ್ಕೆ ರೂ.20ರಿಂದ ಪ್ರಾರಂಭಿಸಿ ಆರೋಗ್ಯ ವಿಮೆ ಪಡೆದುಕೊಳ್ಳಬಹುದು

ಫ್ರೀಲಾನ್ಸರ್ ಗಳ ಜೀವನಶೈಲಿ ಅಗತ್ಯಗಳಿಗೆ ಬೆಂಬಲಿಸಲು ರೀಟೇಲ್ ಅಸೆಟ್ ಉತ್ಪನ್ನಗಳ ವಿಶೇಷ ಸೂಟ್:

1. ಉದ್ಯಮದ ಅಗತ್ಯಗಳನ್ನು ಪೂರೈಸಲು ವಾಣಿಜ್ಯ ಸಾಲಗಳು, ಕೊಲ್ಯಾಟರಲ್ ಮುಕ್ತ ಸಾಲಗಳು
2. ವಾಹನ ಸಾಲಗಳು, ವಾಹನಗಳ ಶೇ.100 ಆನ್-ರೋಡ್ ಮೌಲ್ಯದವರೆಗೆ ಹಣಕಾಸು ಒದಗಿಸುತ್ತವೆ
3. ರೂ.27,000ರಿಂದ ರೂ.4 ಲಕ್ಷದವರೆಗೆ ದ್ವಿಚಕ್ರ ವಾಹನ ಸಾಲಗಳು (ಕಮ್ಯೂಟರ್ ಲೈಫ್ ಸ್ಟೈಲ್ ವಾಹನಕ್ಕೆ) ಮತ್ತು ಪ್ರೀಮಿಯಂ ಸೂಪರ್ ಬೈಕ್ ಗಳಿಗೆ ರೂ.50 ಲಕ್ಷದವರೆಗೆ ಸಾಲ

4. ಚಿನ್ನದ ಸಾಲಗಳು: ತ್ವರಿತ ಬಿಡುಗಡೆ ಮಾಡುವ ಓವರ್-ದಿ-ಕೌಂಟರ್ ಉತ್ಪನ್ನ
• ಎಚ್.ಡಿ.ಎಫ್.ಸಿ. ಎಎಂಸಿಯಿಂದ ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ರಕ್ರಿಯೆ: ಬ್ಯಾಂಕ್ ಫ್ಲೆಕ್ಸಿಬಲ್ ಇನ್ವೆಸ್ಟ್ ಮೆಂಟ್ ಶೆಡ್ಯೂಲರ್ ಎಂಬ ಸಾಧನವನ್ನು ಫ್ರೀಲಾನ್ಸರ್ ಗಳ ಸಹಾಯಕ್ಕೆ ಒದಗಿಸುತ್ತಿದ್ದು ಅದು ರಿಮೈಂಡರ್ ಗಳನ್ನು ಸ್ವೀಕರಿಸಲು, ಹೂಡಿಕೆ ಮಾಡಬೇಕೋ ಬೇಡವೋ ಎಂದು ತಿಳಿಯಲು ಮತ್ತು ಹಣ ದೊರೆಯುವ ಸಮಯ ಆಧರಿಸಿ ಅವರ ಪ್ಲಾನ್ ಗಳನ್ನು ಯೋಜಿಸಲು ನೆರವಾಗುತ್ತದೆ.
• ಸ್ಮಾರ್ಟ್ ಹಬ್ ವ್ಯಾಪಾರ್ ಪರಿಹಾರವು ಸ್ಥಳೀಯ ಸಂಗ್ರಹಕ್ಕೆ ಪೂರ್ಣ ಶ್ರೇಣಿಯ ಡಿಜಿಟಲ್ ಪಾವತಿಯ ಮಾದರಿಗಳನ್ನು ಒದಗಿಸುತ್ತಿದ್ದು ತಕ್ಷಣವೇ ಸೇರ್ಪಡೆಯ ಅನುಭವ ನೀಡುತ್ತದೆ.
• ರೇಜರ್ ಪೇ ಸಹಯೋಗದಲ್ಲಿ, ಫ್ರೀಲಾನ್ಸರ್ ಗಳು ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಗ್ರಾಹಕರಿಗೆ ಡಿಜಿಟಲ್ ಪಾವತಿಗಳ ಸಮಗ್ರ ಪರಿಹಾರವನ್ನು ಪಡೆಯಬಹುದು, ಅದರಲ್ಲಿ ರಿಸ್ಕ್ ಮತ್ತು ಚಾರ್ಜ್ ಬ್ಯಾಕ್ ನಿರ್ವಹಣೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಬಹುದು.
• ಪೇಯೊನೀರ್ ಸಹಯೋಗದಲ್ಲಿ, ಫ್ರೀಲಾನ್ಸರ್ ಗಳು 11 ವಿಶ್ವದ ಅತ್ಯಂತ ಹೆಚ್ಚು ವ್ಯಾಪಾರದ ಕರೆನ್ಸಿಗಳಲ್ಲಿ ಗ್ರಾಹಕರು ಮತ್ತು ಮಾರ್ಕೆಟ್ ಪ್ಲೇಸ್ ಗಳ ಪಾವತಿಗಳನ್ನು ಪಡೆಯಲು ಶಕ್ತರಾಗಿಸುತ್ತದೆ, ಅದು ಅವರಿಗೆ ಭೌತಿಕ ಅಥವಾ ಭೌಗೋಳಿಕ ತಾಣಗಳು ಯಾವುದಾದರೂ 190+ ದೇಶಗಳು ಮತ್ತು ಪ್ರದೇಶಗಳಲ್ಲಿ ವ್ಯಾಪಾರವನ್ನು `ಸ್ಥಳೀಯವಾಗಿ’ ಮಾಡಲು ಬೆಂಬಲಿಸುತ್ತದೆ.

ಸೂಚನೆ: *ನಿಯಮ ಹಾಗೂ ನಿಬಂಧನೆಗಳು ಅನ್ವಯಿಸುತ್ತವೆ

BREAKING: 2019ರಿಂದ 2023ನೇ ಸಾಲಿನ TSR, ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟ: ಇಲ್ಲಿದೆ ಪಟ್ಟಿ

ಬೆಂಗಳೂರಲ್ಲಿ ಹೆಚ್ಚಿದ ‘ನಿಫಾ’ ಭೀತಿ : ಓರ್ವ ವ್ಯಕ್ತಿಗೆ ಸೊಂಕಿನ ಗುಣಲಕ್ಷಣ ಪತ್ತೆ, 41 ಜನರಿಗೆ ‘ಹೋಮ್ ಕ್ವಾರಂಟೈನ್’!

Share. Facebook Twitter LinkedIn WhatsApp Email

Related Posts

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 8 DYSP, 28 PI ವರ್ಗಾವಣೆ ಮಾಡಿ ಆದೇಶ

11/06/2025 9:54 PM1 Min Read

ನಾನು ED ದಾಳಿ ರಾಜಕೀಯ ಪ್ರೇರಿತ ಅಂತ ಹೇಳಲ್ಲ: ಸಂಸದ ತುಕಾರಾಂ

11/06/2025 9:39 PM1 Min Read

BREAKING: ರಾಜ್ಯದಲ್ಲಿ ಕೊರೋನಾದಿಂದ ಯಾವುದೇ ರೋಗಿ ಸಾವನ್ನಪ್ಪಿಲ್ಲ: ಆರೋಗ್ಯ ಇಲಾಖೆ ಆಡಿಟ್ ರಿಪೋರ್ಟ್

11/06/2025 8:52 PM1 Min Read
Recent News

‘ಸ್ಲೀಪ್ ಬ್ಯಾಂಕಿಂಗ್’ ಎಂದರೇನು.? ಹೇಗೆ ಕೆಲಸ ಮಾಡುತ್ತೆ ಗೊತ್ತಾ.? ಒತ್ತಡದಲ್ಲಿದ್ದಾಗ ದಿ ಬೆಸ್ಟ್

11/06/2025 10:03 PM

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 8 DYSP, 28 PI ವರ್ಗಾವಣೆ ಮಾಡಿ ಆದೇಶ

11/06/2025 9:54 PM

ನಾನು ED ದಾಳಿ ರಾಜಕೀಯ ಪ್ರೇರಿತ ಅಂತ ಹೇಳಲ್ಲ: ಸಂಸದ ತುಕಾರಾಂ

11/06/2025 9:39 PM

‘ಯೂಟ್ಯೂಬ್ ವೀಡಿಯೋ’ಗಳನ್ನ ಡೌನ್‌ಲೋಡ್ ಮಾಡ್ಬೇಕಾ.? ಜಸ್ಟ್ ಹೀಗೆ ಮಾಡಿ.!

11/06/2025 9:34 PM
State News
KARNATAKA

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 8 DYSP, 28 PI ವರ್ಗಾವಣೆ ಮಾಡಿ ಆದೇಶ

By kannadanewsnow0911/06/2025 9:54 PM KARNATAKA 1 Min Read

ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ 8 ಡಿವೈಎಸ್ಪಿ, 28 ಪೊಲೀಸ್ ಇನ್ಸ್ ಪೆಕ್ಟರ್ ವರ್ಗಾವಣೆ…

ನಾನು ED ದಾಳಿ ರಾಜಕೀಯ ಪ್ರೇರಿತ ಅಂತ ಹೇಳಲ್ಲ: ಸಂಸದ ತುಕಾರಾಂ

11/06/2025 9:39 PM

BREAKING: ರಾಜ್ಯದಲ್ಲಿ ಕೊರೋನಾದಿಂದ ಯಾವುದೇ ರೋಗಿ ಸಾವನ್ನಪ್ಪಿಲ್ಲ: ಆರೋಗ್ಯ ಇಲಾಖೆ ಆಡಿಟ್ ರಿಪೋರ್ಟ್

11/06/2025 8:52 PM

ರಾಜ್ಯದಲ್ಲಿ ಕೋವಿಡ್ ಕಾರಣದಿಂದಾಗಿ ಯಾವುದೇ ಸಾವುಗಳಾಗಿಲ್ಲ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

11/06/2025 8:18 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.