ಶಿವಮೊಗ್ಗ: ಜಿಲ್ಲೆಯ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿನ ಜನರೇಟರ್ ಕಳ್ಳತನ ಪ್ರಕರಣದಲ್ಲಿ ಆರೋಗ್ಯ ಇಲಾಖೆಯ ಕಚೇರಿ ಅಧೀಕ್ಷಕರಾಗಿದ್ದಂತ ಸುನೀಲ್ ಕುಮಾರ್ ಭಾಗಿಯಾಗಿದ್ದದ್ದು ಬಂಧನದ ಬಳಿಕ ಬಹಿರಂಗಗೊಂಡಿತ್ತು. ಈ ಬಗ್ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೂ ಖಡಕ್ ಸೂಚನೆ ನೀಡಿದ್ದರು. ಈ ಹಿನ್ನಲೆಯಲ್ಲಿ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಚೇರಿ ಅಧೀಕ್ಷಕ ಸುನೀಲ್ ಕುಮಾರ್ ಸೇವೆಯಿಂದ ಅಮಾನತುಗೊಳಿಸಿ ಇಲಾಖೆ ಆದೇಶಿಸಿದೆ.
ಈ ಕುರಿತಂತೆ ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಟರಾಜ್.ಕೆಎಸ್ ಅವರು ಆದೇಶ ಹೊರಡಿಸಿದ್ದು, ಸುನಿಲ್ ಕುಮಾರ್, ಕಛೇರಿ ಅಧೀಕ್ಷಕರು, ಉಪವಿಭಾಗೀಯ ಆಸ್ಪತ್ರೆ, ಸಾಗರ ಇವರು ತಾಯಿ ಮಕ್ಕಳ ಆಸ್ಪತ್ರೆ, ಸಾಗರ ಇಲ್ಲಿನ 65 ಕೆವಿ ಸಾಮರ್ಥ್ಯದ ಜನರೇಟರ್ ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಪೊಲೀಸ್ ಸಬ್ ಇನ್ಸ್ಪೆಕ್ಟರ್, ಸಾಗರ ಪೇಟೆ ಪೊಲೀಸ್ ಸ್ಟೇಷನ್, ಸಾಗರ ಇವರು ದಸ್ತಗಿರಿ ಮಾಡಿರುವ ಕುರಿತು ಉಲ್ಲೇಖ(1)ರಲ್ಲಿ ವರದಿ ಮಾಡಿರುವುದು ದಾಖಲೆಯಿಂದ ಕಂಡುಬಂದಿರುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ಮೇಲಿನ ಕಂಡಿಕೆಯಲ್ಲಿ ಓದಲಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಸುನಿಲ್ ಕುಮಾರ್ ಕಛೇರಿ ಅಧೀಕ್ಷಕರು ಇವರ ವಿರುದ್ಧ ಮುಂದಿನ ಸೂಕ್ತ ಕ್ರಮ ಕೈಗೊಳ್ಳುವಂತೆ ಆಡಳಿತ ವೈದ್ಯಾಧಿಕಾರಿಗಳು, ಉಪವಿಭಾಗೀಯ ಆಸ್ಪತ್ರೆ ಸಾಗರ ಇವರು ಉಲ್ಲೇಖ(2)ರಲ್ಲಿ ಓದಿರುವ ಪತ್ರದಲ್ಲಿ ಶಿಫಾರಸ್ಸು ಮಾಡಿರುತ್ತಾರೆ ಎಂದಿದ್ದಾರೆ.
ಸುನಿಲ್ ಕುಮಾರ್, ಕಛೇರಿ ಅಧೀಕ್ಷಕರು ಇವರು ಸರ್ಕಾರಿ ನೌಕರಿಗೆ ತಕ್ಕುದ್ದಲ್ಲದ ರೀತಿ ವರ್ತಿಸಿ ಕ.ನಾ.ಸೇ(ನಡತೆ) ನಿಯಮಗಳು 1966 ರ ನಿಯಮ 3 (1)(3) ನ್ನು ಉಲ್ಲಂಘಿಸಿ ಶಿಸ್ತಿನ ಕ್ರಮಕ್ಕೆ ಗುರಿ ಆಗಿರುತ್ತಾರೆ. ಆದ್ದರಿಂದ ಇವರನ್ನು ಕೆ.ಸಿ.ಎಸ್(ಸಿ.ಸಿ.ಎ) ನಿಯಮಗಳು 1957 ರ ನಿಯಮ 10 (1)(ಬಿ) ಅನ್ವಯ ಅಮಾನತ್ತಿನಲ್ಲಿಡಲು ನಿರ್ಣಹಿಸಿ ಈ ಕೆಳಗಿನಂತೆ ಆದೇಶಿಸಿದ್ದಾರೆ.
ಪ್ರಸ್ತಾವನೆಯ ಕಂಡಿಕೆ (1) ರಲ್ಲಿ ಓದಲಾದ ಅಪರಾಧಕ್ಕೆ ಸಂಬಂಧಿಸಿದಂತೆ ಹಾಗೂ ಕಂಡಿಕೆ (2) ಮತ್ತು (3)ರಲ್ಲಿ ಹೇಳಲಾಗಿರುವ ಶಿಫಾರಸ್ಸು ಹಾಗೂ ನಿಯಮಗಳಡಿ ಡಾ|| ನಟರಾಜ್.ಕೆ.ಎಸ್. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ್ಯಾಧಿಕಾರಿ ಹಾಗೂ ಶಿಸ್ತು ಪ್ರಾಧಿಕಾರಿ, ಶಿವಮೊಗ್ಗ ಆದ ನಾನು ಕೆ.ಸಿ.ಎಸ್ (ಸಿ.ಸಿ.ಎ) ನಿಯಮಗಳು 1957 ರ ನಿಯಮ 10 (1)(ಬಿ) ಅನ್ವಯ ಸುನಿಲ್ ಕುಮಾರ್, ಕಛೇರಿ ಅಧೀಕ್ಷಕರು, ಉಪವಿಭಾಗೀಯ ಆಸ್ಪತ್ರೆ, ಸಾಗರ ಇವರನ್ನು ದಿನಾಂಕ:02/08/2025 ರಿಂದ ಜಾರಿಗೆ ಬರುವಂತೆ ಹಾಗೂ ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.
ನೌಕರರು ಆಡಳಿತ ವೈದ್ಯಾಧಿಕಾರಿಗಳು, ಉಪವಿಭಾಗೀಯ ಆಸ್ಪತ್ರೆ ಸಾಗರ, ಇವರಿಂದ ಪೂರ್ವಾನುಮತಿ ಪಡೆಯದೇ ಕೇಂದ್ರಸ್ಥಾನವನ್ನು ಬಿಡುವಂತಿಲ್ಲ ಹಾಗೂ ಕೆ.ಸಿ.ಎಸ್.ಆರ್ ನಿಯಮಗಳ ನಿಯಮ 98 ರ ಪ್ರಕಾರ ಜೀವನ ನಿರ್ವಹಣೆ ಭತ್ಯೆಗೆ ಅರ್ಹರಾಗಿರುತ್ತಾರೆ ಎಂಬುದಾಗಿ ತಿಳಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ಕರ್ನಾಟಕದ ಲೋಕಸಭಾ ಕ್ಷೇತ್ರದಲ್ಲಿ ಮತಗಳ್ಳತನದ ಬಗ್ಗೆ ಸಾಕ್ಷ್ಯ ಸಮೇತ ರಾಹುಲ್ ಗಾಂಧಿ ಬಯಲಿಗೆ
SHOCKING : ಕರಾಚಿ `ಏರ್ ಪೋರ್ಟ್’ನಲ್ಲಿ `ಕಾಂಡೋಮ್ ಬಾಕ್ಸ್’ನಲ್ಲೇ ಊಟ ವಿತರಣೆ : ವಿಡಿಯೋ ವೈರಲ್ | WATCH VIDEO